Mangalore Mulki Murder, Crime, Arrest: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ ; ಇಂತಹ ಅಪ್ಪ, ಅಮ್ಮ ಯಾರಿಗೂ ಸಿಗದಿರಲಿ ಎಂದಿದ್ದ ಕಾರ್ತಿಕ್, ಆತ್ಮಹತ್ಯೆ ಪ್ರಚೋದನೆ ಕೇಸ್ ಬೆನ್ನಲ್ಲೇ ಜೈಲು ಸೇರಿದ ತಾಯಿ, ಮಗಳು ! 

11-11-24 10:23 pm       Mangalore Correspondent   ಕರಾವಳಿ

ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಠಾಣೆಯಲ್ಲಿ ಮೃತ ಕಾರ್ತಿಕ್ ಭಟ್ ತಾಯಿ ಮತ್ತು ಅಕ್ಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಅವರ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಬಂಧಿತರು. 

ಮಂಗಳೂರು, ನ.11: ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮುಲ್ಕಿ ಠಾಣೆಯಲ್ಲಿ ಮೃತ ಕಾರ್ತಿಕ್ ಭಟ್ ತಾಯಿ ಮತ್ತು ಅಕ್ಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಅವರ ತಾಯಿ ಶ್ಯಾಮಲಾ ಭಟ್, ಸಹೋದರಿ ಕಣ್ಮಣಿ ಬಂಧಿತರು. 

ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಆಧರಿಸಿ ತಾಯಿ ಮತ್ತು ಅಕ್ಕನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದು ಇದೀಗ ಇಬ್ಬರನ್ನೂ ಮುಲ್ಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಡೆತ್ ನೋಟ್ ನಲ್ಲಿ ತಂದೆ, ತಾಯಿ, ಸಹೋದರಿ ವಿರುದ್ದ ಆರೋಪ ಮಾಡಿದ್ದರು. ನಮ್ಮ ಸಂಸಾರ ಹಾಳು ಮಾಡಿದ್ದೆ ಈ ಮೂವರು ಎಂದಿದ್ದರು. ಅಲ್ಲದೆ, ಇಂತಹ ಅಪ್ಪ ಅಮ್ಮ ಯಾರಿಗೂ ಸಿಗಬಾರದೆಂದು ಬರೆದುಕೊಂಡಿದ್ದರು. ತಮ್ಮ ಶವಗಳನ್ನು ಕೂಡ ತಾಯಿ ಮತ್ತು ಅಕ್ಕ ಮುಟ್ಟಬಾರದು. ಅಂತ್ಯ ಸಂಸ್ಕಾರವನ್ನು ಅತ್ತೆ ಮಾವ ನಡೆಸಿಕೊಡಬೇಕೆಂದು ಬರೆದಿದ್ದರು. 

ಸಾಯುವುದಕ್ಕೂ ಮುನ್ನ ನೀಡಿರುವ ಹೇಳಿಕೆ ಆಧರಿಸಿ ಸೋದರಿ ಹಾಗು ತಾಯಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ವಿಚಾರಣೆಗೆ ಕರೆದು ಬಂಧಿಸಿದ್ದಾರೆ. ಇದಲ್ಲದೆ, ಪ್ರಿಯಾಂಕ ಪೋಷಕರು ಕೂಡ ಕಾರ್ತಿಕ್ ತಂದೆ, ತಾಯಿ ಹಾಗೂ ಸಹೋದರಿ ವಿರುದ್ಧ ದೂರು ನೀಡಿದ್ದರು. ಮೊನ್ನೆ ಅ.8ರಂದು ಮಧ್ಯಾಹ್ನ ಪಕ್ಷಿಕೆರೆಯ ಮನೆಯಲ್ಲಿ ಪತ್ನಿ ಪ್ರಿಯಾಂಕ, ನಾಲ್ಕು ವರ್ಷದ ಮಗುವನ್ನು ಕೊಂದು ಪತಿ ಕಾರ್ತಿಕ್ ಭಟ್ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದರು.

In the Mangalore Mulki murder case, the mother and sister of Karthik Bhat have been arrested by the police after their names were found in a death note linked to his suicide. The death note, written by Karthik, states that no one should have parents like his. He mentioned the names of both his mother and father, as well as his sister, in the note. Karthik, a 32-year-old man, allegedly murdered his wife and four-year-old son before taking his own life in Mangaluru.