ಬ್ರೇಕಿಂಗ್ ನ್ಯೂಸ್
13-11-24 05:24 pm Mangalore Correspondent ಕರಾವಳಿ
ಮಂಗಳೂರು, ನ.13: “ನವೀಕೃತ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಅನ್ನು ನ.18ರಂದು ಮಂಗಳೂರಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಮಂಗಳೂರು ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಎಂಬುದಾಗಿ ಘೋಷಿಸುವರು“ ಎಂದು ಪ್ರಧಾನ ಧರ್ಮಗುರುಗಳಾದ ವಂ. ಆ್ಯಂಡ್ರೂ ಲಿಯೋ ಡಿ'ಸೋಜಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಉದ್ಘಾಟನೆ ಕಾರ್ಯಕ್ರಮವು ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗುವುದು. ಅದೇ ದಿನ ಸಂಜೆ 5.30 ಗಂಟೆಗೆ ಸಭಾ ಕಾರ್ಯಕ್ರಮ ಜರುಗಲಿದ್ದು ರಾಜ್ಯದ ಮುಖಂಡರು ಮತ್ತು ಸಮಾಜದ ಗಣ್ಯರು ಉಪಸ್ಥಿತಲಿರುವರು. ಸಂತ ಲಾರೆನ್ಸರ ಚರ್ಚ್ ಶತಮಾನೋತ್ಸವ ಸಮಾರೋಪ, ನವೀಕೃತ ಚರ್ಚ್‌ನ ಉದ್ಘಾಟನೆ, ಅಧಿಕೃತ ಪುಣ್ಯಕ್ಷೇತ್ರ ಘೋಷಣೆ ಈ ತ್ರಿವಳಿ ಸಂಭ್ರಮಗಳು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ| ಪೀಟರ್ ಪಾವ್ಲ್ ಸಲ್ದಾನ್ಹಾ, ವಿಶ್ರಾಂತ ಬಿಷಪ್ ಡಾ| ಅಲೋಶಿಯಸ್ ಪಾವ್ಲ್ ಡಿಸೋಜ ಹಾಗೂ ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಇವರ ನೇತೃತ್ವದಲ್ಲಿ ನೆರವೇರಲಿದೆ ಎಂದು ಹೇಳಿದರು.
ಬೋಂದೆಲ್ ಹೆಸರು ಬಂದ ಕತೆ
ಶತಮಾನದ ಹಿಂದೆ ಭಾರತಕ್ಕೆ ಆಗಮಿಸಿದ ಫ್ರೆಂಚ್ ಧರ್ಮಗುರು ಅಲೆಕ್ಸಾಂಡರ್ ದುಬೋಯ್ಸ್ ಇವರು ಈ ಪ್ರದೇಶಕ್ಕೆ ಭೇಟಿ ನೀಡಿದಾಗ, ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಂಡು ಅವರ ಮಾತೃಭಾಷೆ ಫ್ರೆಂಚ್‌ನಲ್ಲಿ ಬೊನ್‌ವೆಲ್' (ಅತೀ ಸುಂದರ) ಎಂದು ಪ್ರಶಂಸಿಸಿದ
ಉದ್ಘಾರವೇ ಕಾಲಕ್ರಮೇಣ ಬೊಂದೆಲ್' ಎಂಬ ಹೆಸರಿಗೆ ಕಾರಣವಾಯಿತು ಎನ್ನುವುದು ಪ್ರತೀತಿ. 1923ರ ತನಕ ಬೊಂದೆಲ್ ಒಂದು ಸ್ವತಂತ್ರ ಚರ್ಚ್ ಆಗಿರಲಿಲ್ಲ. ಅಂದಿನ ದಿನಗಳಲ್ಲಿ ಈ ಪ್ರದೇಶದ ಕ್ರೈಸ್ತ ಬಾಂಧವರು ತಮ್ಮ ಧಾರ್ಮಿಕ ಸೇವಾ ಸಂಸ್ಕಾರಗಳಿಗಾಗಿ ಏಳೆಂಟು ಮೈಲುಗಳ ದೂರದ ಮಿಲಾಗ್ರಿಸ್ ಮತ್ತು ರೊಜಾರಿಯೋ ಚರ್ಚ್‌ಗಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು.
ಕ್ರೈಸ್ತ ಬಾಂಧವರ ಈ ಕಷ್ಟವನ್ನರಿತ ಮಿಲಾಗ್ರಿಸ್ ಚರ್ಚ್ ಅಂದಿನ ಧರ್ಮಗುರು ವಂ| ಲುವಿಸ್ ಫೆರ್ನಾಂಡಿಸ್ ಅವರು ಪಚ್ಚನಾಡಿ ಗ್ರಾಮದ ಬಂಗೇರ ಸೀಮೆಯ ತೋಟದಲ್ಲಿ ಒಂದು ಪ್ರಾರ್ಥನಾಲಯ ನಿರ್ಮಿಸಿದರು. 1908ರಲ್ಲಿ ಸ್ಥಾಪನೆಯಾದ ಒಂದು ಶಾಲೆಯು ಆ ಜಾಗದಲ್ಲಿ ಇತ್ತು. ಮಿಲಾಗ್ರಿಸ್ ಚರ್ಚ್‌ನ ಇನ್ನೋರ್ವ ಧರ್ಮಗುರು ವಂ ಫ್ರಾಂಕ್ ಪಿರೇರಾ ಅವರು ಶನಿವಾರದಂದು ಈ ಪ್ರಾರ್ಥನಾಲಯಕ್ಕೆ ಆಗಮಿಸಿ ರವಿವಾರದ ಬಲಿಪೂಜೆ ಹಾಗೂ ಇತರ ಸಂಸ್ಕಾರಗಳನ್ನು ನೆರವೇರಿಸುತ್ತಿದ್ದರು. ಕ್ರಮೇಣ 1913ರಲ್ಲಿ ಅವರು ಈ ಪ್ರಾರ್ಥನಾಲಯವನ್ನು ಶಾಲೆಯ ಸಮೇತ ಪ್ರಸ್ತುತ ಚರ್ಚ್ ಇರುವ ಜಾಗಕ್ಕೆ ಸ್ಥಳಾಂತರಿಸಿದರು.
ಬಲಿಪೂಜೆ ಅರ್ಪಿಸಲು ಒಂದು ತಾತ್ಕಾಲಿಕ ಮುಳಿಹುಲ್ಲಿನ ಛಾವಣಿಯನ್ನು ನಿರ್ಮಿಸಿದರು ಹಾಗೂ ಶಾಲೆಗೆ ಒಂದು ಕಟ್ಟಡವನ್ನು ಕಟ್ಟಲು ಆರಂಭಿಸಿದರು. ಜನರ ನೆರವಿನಿಂದ 1915ರಲ್ಲಿ ಹೊಸ ಪ್ರಾರ್ಥನಾಲಯ ನಿರ್ಮಾಣವಾಯಿತು. 1917ರಲ್ಲಿ ಪ್ರಭಾರ ಧರ್ಮಗುರುಗಳಾಗಿ ನಿಯುಕ್ತಿಗೊಂಡ ವಂ। ಜುಲಿಯಾನ್ ಡಿ'ಸೋಜಾ ಇವರು 1922ರಲ್ಲಿ ಮಿಲಾಗ್ರಿಸ್ ಚರ್ಚ್ ಸಹಕಾರದಿಂದ ಚಿಕ್ಕದಾಗಿದ್ದ ಬೊಂದೆಲ್ ದೇವಾಲಯದ
ಕಟ್ಟಡವನ್ನು ದೊಡ್ಡದಾಗಿ ಕಟ್ಟಿಸಿದರು. 1923 ರಲ್ಲಿ ಅಂದಿನ ಬಿಷಪ್ ಅತೀ ವಂದನೀಯ ಪಾವ್ ಪೆರಿನಿ ಅವರು ಬೊಂದೆಲ್‌ನಲ್ಲಿ ಆದ ಪ್ರಗತಿಯನ್ನು ಗಮಿನಿಸಿ 1923, ಮೇ 1 ರಂದು ಬೊಂದೆಲ್ ಒಂದು ಅಧಿಕೃತ ಚರ್ಚ್ ಎಂದು ಪ್ರಕಟಿಸಿ ಈ ದೇವಮಂದಿರವನ್ನು ಸಂತ ಲಾರೆನ್ನರಿಗೆ ಸಮರ್ಪಿಸಿದರು. ವಂ। ಫ್ರಾಂಕ್ ಪಿರೇರಾ ಇವರನ್ನು ಇಲ್ಲಿನ ಪ್ರಥಮ ಧರ್ಮಗುರುಗಳನ್ನಾಗಿ ನೇಮಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ವಿಲಿಯಂ ಡಿ'ಸೋಜಾ, ಸಂತ ಲಾರೆನ್ಸ್ ಶಾಲೆ ಪ್ರಾಂಶುಪಾಲ ಪೀಟರ್ ಗೊನ್ಸಾಲ್ವಿಸ್, ಉಪಾಧ್ಯಕ್ಷ ಜಾನ್ ಡಿ'ಸಿಲ್ವಾ, ಪ್ರಕಾಶ್ ಪಿಂಟೊ, ಮೇರಿ ಮಿರಾಂದ, ಸಂಯೋಜಕಿ ಪ್ರೀತಿ ಡಿ'ಸೋಜ ಮತ್ತಿತರರು ಉಪಸ್ಥಿತರಿದ್ದರು.ಬ
Mangalore Bondel St Lawrence church which was under renovation will be inaugurated on November 18th said the senior priests of church after holding press meet at press club in Mangalore.
14-11-24 02:09 pm
HK News Desk
Shivamogga News, Three youths drowned; ಶಿವಮೊಗ...
14-11-24 01:55 pm
MLA Satish Sail, court stay, Jail: ಬೇಲೆಕೇರಿ ಬ...
13-11-24 07:07 pm
Marakumbi atrocity case, Bail: ಮರಕುಂಬಿ ದಲಿತ ದ...
13-11-24 06:45 pm
Chikkamagaluru, Naxals: ದಶಕದ ಬಳಿಕ ಮಲೆನಾಡಿಗೆ ನ...
13-11-24 12:37 pm
12-11-24 09:00 pm
HK News Desk
ಬಾಂಗ್ಲಾ ಅಲ್ ಖೈದಾ ಟೆರರ್ ಫಂಡಿಂಗ್ ; ಕರ್ನಾಟಕ, ಬಿ...
12-11-24 12:35 pm
ಬಾಬಾ ಸಿದ್ದಿಕಿಯನ್ನು ಕೊಲೆಗೈದು ತಲೆಮರೆಸಿದ್ದ ಬಿಷ್ಣ...
11-11-24 05:19 pm
ತಮಿಳು ಚಿತ್ರರಂಗಕ್ಕೆ ಬಿಗ್ ಶಾಕ್ ; 400ಕ್ಕೂ ಹೆಚ್...
10-11-24 04:09 pm
ದೇಶದಲ್ಲಿ ಬಿಜೆಪಿ ಇರೋ ವರೆಗೂ ಧರ್ಮಾಧರಿತ ಮೀಸಲಾತಿ...
10-11-24 11:33 am
14-11-24 02:48 pm
Udupi Correspondent
Mangalore Mulki Murder, Karthik bhat; ಪಕ್ಷಿಕೆ...
13-11-24 11:19 pm
Nirmala sitharaman, Mangalore: ಮಕ್ಕಳು ಕಲಿಯಬೇಕ...
13-11-24 11:05 pm
Mangalore, Gloria Rodrigues death, St Aloysiu...
13-11-24 08:17 pm
Mangalore Bondel new church, St Lawrence; ಬೋಂ...
13-11-24 05:24 pm
12-11-24 07:02 pm
Mangalore Correspondent
Mangalore crime, Bajarang Dal, Ullal News: ಉಳ...
12-11-24 11:41 am
Udupi police, lock up death, Crime: ಬ್ರಹ್ಮಾವರ...
11-11-24 12:16 pm
Mangalore crime, Bengare, Assult: ಹುಡುಗಿ ನೋಡ...
10-11-24 10:53 pm
Mulki Murder, Mangalore Crime, Pakshikere: ಪಕ...
10-11-24 06:57 pm