ಬ್ರೇಕಿಂಗ್ ನ್ಯೂಸ್
14-11-24 10:45 pm Giridhar Shetty, Mangaluru ಕರಾವಳಿ
ಮಂಗಳೂರು, ನ.14: ಈಗಾಗಲೇ ವಿಜಯಪುರ, ಬೆಳಗಾವಿಯಲ್ಲಿ ಕೃಷಿ ಜಮೀನುಗಳಿಗೆ ವಕ್ಫ್ ನೋಟೀಸ್ ಜಾರಿಗೊಳಿಸಿ ಭೂಮಿ ಕಬಳಿಸುವ ಯತ್ನ ಭಾರೀ ವಿವಾದಕ್ಕೆ ಕಾರಣವಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಅಂತಹ ನೋಟೀಸ್ ಜಾರಿ ಮಾಡಿಯೇ ಇಲ್ಲ. ಸರಕಾರದಿಂದ ಅಂತಹ ನೋಟಿಸ್ ಮಾಡಿದ್ದರೆ ಅದನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದೂ ಆಗಿತ್ತು. ಆದರೆ, ಸ್ವತಃ ಮುಖ್ಯ ಕಾರ್ಯದರ್ಶಿಯೇ ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆಗೆ ಕಂದಾಯ ಇಲಾಖೆಗೆ ಸೂಚನೆ ನೀಡಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ.
ವಕ್ಫ್ ಆಸ್ತಿ ಹೆಸರಲ್ಲಿ ಸಾವಿರಾರು ಎಕ್ರೆ ಸರಕಾರಿ ಜಾಗವನ್ನೇ ನುಂಗುವುದಕ್ಕೆ ಸ್ವತಃ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೇ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರಿಗೆ ಪತ್ರ ಬರೆದಿದ್ದಾರೆ. ಇದಷ್ಟೇ ಅಲ್ಲ, ಮುಸ್ಲಿಮರನ್ನು ದಫನ ಮಾಡುವ ಖಬರಸ್ತಾನಗಳಿಗೆಂದು ಸರ್ಕಾರಿ ಜಮೀನನ್ನು ಪಡೆಯುವುದಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2024ರ ಎಪ್ರಿಲ್ 16ರಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಂದಾಯ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು ವಕ್ಫ್ ಇಲಾಖೆಯ 21,767 ಆಸ್ತಿಗಳ ಖಾತೆ ಬದಲಾವಣೆಗೆ ಸೂಚಿಸಿರುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ.
ರಾಜ್ಯಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆಯ ನಿಲುವಳಿಯಂತೆ, ವಕ್ಫ್ ಆಸ್ತಿಗಳ ಖಾತೆ ಬದಲಾವಣೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಲ್ಲದೆ, ವಕ್ಫ್ ಆಸ್ತಿಯ ಮಾಹಿತಿಯನ್ನು ಭೂಮಿ ತಂತ್ರಾಂಶದಡಿಯಲ್ಲಿ ನೋಂದಣಿ ಮಾಡುವಂತೆಯೂ ಸೂಚಿಸಿದ್ದಾರೆ. ಇದಲ್ಲದೆ, ಕಂದಾಯ ಇಲಾಖೆಗೆ ವಕ್ಫ್ ಇಲಾಖೆಯಿಂದ ಸಲ್ಲಿಸಿರುವ 328 ಪ್ರಸ್ತಾವನೆಗಳ ಬಗ್ಗೆ ಪರಿಶೀಲಿಸಿ ಲಭ್ಯವಿರುವ ಸರ್ಕಾರಿ ಜಾಗವನ್ನು ಖಬರಸ್ತಾನ್ ಜಮೀನುಗಳಿಗೆ ಮಂಜೂರಾತಿ ನೀಡುವಂತೆಯೂ ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಒಂದು ವೇಳೆ ಸರಕಾರಿ ಜಮೀನು ಲಭಿಸದೇ ಇದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಖಬರಸ್ತಾನಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಇದೇ ವೇಳೆ, ವಕ್ಫ್ ಕಾಯ್ದೆ ಕಲಂ 52 (ಎ) ಪ್ರಕಾರ ವಕ್ಫ್ ಆಸ್ತಿಗಳ ಭೂಮಿ ಅತಿಕ್ರಮಣ ವಿಷಯವನ್ನು ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಮುಖ ಅಜೆಂಡಾ ಮಾಡಿಕೊಳ್ಳುವಂತೆಯೂ ಕಂದಾಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಕೃಷಿ ಜಮೀನುಗಳಿಗೂ ವಕ್ಫ್ ಇಲಾಖೆಯಿಂದ ನೋಟೀಸ್ ಮಾಡಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ಕೃಷಿಕರ ಭೂಮಿಯನ್ನು ಕಬಳಿಸಲು ಯತ್ನಿಸಿರುವುದು ಆಕಸ್ಮಿಕ ಬೆಳವಣಿಗೆ ಅಲ್ಲ ಎನ್ನುವುದಕ್ಕೇ ಇದೇ ಸಾಕ್ಷಿಯಂತಿದೆ. ರಾಜ್ಯ ಸರಕಾರದಲ್ಲಿ ಸಾಂವಿಧಾನಿಕವಾಗಿ ಮುಖ್ಯ ಕಾರ್ಯದರ್ಶಿ ಅವರೇ ಮುಖ್ಯಸ್ಥರಾಗಿರುತ್ತಾರೆ. ಸಿಎಸ್ ಸ್ಥಾನದಲ್ಲಿರುವ ವ್ಯಕ್ತಿ ನೀಡಿರುವ ಸೂಚನೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಯಥಾವತ್ ಪಾಲಿಸಿದ್ದರಿಂದಲೇ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲ ಕೃಷಿಕರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ. ಇದಲ್ಲದೆ, ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಬರಸ್ತಾನಗಳಿಗೆ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದನ್ನೂ ಈ ಪತ್ರವೇ ಸಾಕ್ಷಿ ನುಡಿಯುತ್ತದೆ.
ವಕ್ಫ್ ಆಸ್ತಿಗಷ್ಟೇ ಕಳೆ, ದೇಗುಲ ಆಸ್ತಿಗಿಲ್ಲ ಬೆಲೆ
ರಾಜ್ಯದಲ್ಲಿ ಅಂದಾಜು 34,223 ಸಿ ಗ್ರೇಡ್ ದೇವಸ್ಥಾನಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಇದರ ಸುತ್ತಲಿನ ಜಾಗ ಬಹುತೇಕ ಸರಕಾರಿ ಜಾಗವೇ ಆಗಿದೆ. ಈ ಭೂಮಿಯನ್ನು ದೇವಾಲಯದ ಹೆಸರಿಗೆ ಮಂಜೂರಾತಿ ನೀಡುವಂತೆ 2013ರಿಂದ ಧಾರ್ಮಿಕ ಪರಿಷತ್ ವತಿಯಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತ ಬಂದಿದ್ದರೂ, ಅಸಡ್ಡೆಯೇ ಉತ್ತರ. ಇದಲ್ಲದೆ, ರಾಜ್ಯದ 5730 ಪುರಾತನ ದೇಗುಲಗಳಿಗೆ ಪಹಣಿ ಪತ್ರವೇ ಇಲ್ಲ. ಇವೆಲ್ಲ ಕಂದಾಯ ಇಲಾಖೆ ಭೂಮಿಯಲ್ಲೇ ಇದೆ. ಈ ದೇಗುಲಗಳಿಗೆ ಸಂಬಂಧಿಸಿದ ಜಾಗವನ್ನು ಆಸುಪಾಸಿನವರು ಕಬಳಿಕೆಯನ್ನೂ ಮಾಡಿದ್ದಾರೆ. ಹೆಚ್ಚಿನ ದೇವಸ್ಥಾನ ಜಾಗ ಕಂದಾಯ ಇಲಾಖೆಯಲ್ಲೇ ಇದ್ದರೂ, ಅದನ್ನು ದೇಗುಲ ಹೆಸರಿಗೆ ಮಾಡಲು ಕಂದಾಯ ಇಲಾಖೆ ಮುಂದಾಗಿಲ್ಲ. ಆದರೆ, ಈಗ ವಕ್ಫ್ ಇಲಾಖೆಯ ಆಸ್ತಿ ಹೆಸರಲ್ಲಿ ಖಾಸಗಿ ಮತ್ತು ಸರಕಾರಿ ಆಸ್ತಿ ಕಬಳಿಸಲು ರಾಜ್ಯ ಸರಕಾರವೇ ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.
Waqf row, Chief Secretary orders to seize land of Waqf property in Mangalore. CM Siddaramaiah who made statement of never issued any notice to seize waqf land has now caught after chief secretary’s Letter has now turned viral.
10-12-24 10:47 pm
HK News Desk
Panchamasali Protest, Belagavi: ಬೆಳಗಾವಿ ಸುವರ್...
10-12-24 10:32 pm
Murudeshwara beach drowning bhatkal: ಮುರ್ಡೇಶ್...
10-12-24 10:03 pm
SM krishna school holiday: ಎಸ್ಸೆಂ ಕೃಷ್ಣ ನಿಧನ...
10-12-24 11:48 am
SM Krishna Death, Wikipedia; ಬೆಂಗಳೂರಿಗೆ 'ಸಿಲಿ...
10-12-24 11:34 am
10-12-24 10:57 pm
HK News Desk
Idli Guru, Franchise Fraud, Owner Karthik She...
09-12-24 10:12 pm
Assad dynasty; ಸಿರಿಯಾದಲ್ಲಿ 54 ವರ್ಷಗಳ ವಂಶಾಡಳಿತ...
09-12-24 12:17 pm
ಮೇಕ್ ಇನ್ ಇಂಡಿಯಾ ಬಗ್ಗೆ ಪುಟಿನ್ ಮೆಚ್ಚುಗೆ ; ಭಾ...
05-12-24 11:00 pm
Devendra Fadnavis, Maharashtra New CM; 'ಮಹಾ'...
04-12-24 01:29 pm
10-12-24 09:37 pm
Mangalore Correspondent
Ranjith Ballal Bike Accident, Kundapur, Manga...
09-12-24 11:05 pm
Swamiji, Mangalore, Waqf: ಬಾಂಗ್ಲಾ ವಿರುದ್ಧ ಇಸ್...
09-12-24 07:40 pm
Ullal, Mangalore, Accident, Netravathi bridge...
09-12-24 06:03 pm
ಜೋಕಾಲಿಗೆ ಸಿಲುಕಿ 3ನೇ ತರಗತಿ ಬಾಲಕಿ ಸಾವಿನ ಸುದ್ದಿಗ...
09-12-24 03:26 pm
10-12-24 11:18 pm
Mangalore Correspondent
Mangalore crime, Kadri police, robbery: ಕಂಕನಾ...
10-12-24 06:46 pm
ಕೇವಲ ಎಂಟು ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರಿಗೆ ವ...
10-12-24 03:59 pm
Chikkamagaluru murder: ಸೋಶಿಯಲ್ ಮೀಡಿಯಾದಲ್ಲಿ ಪರ...
08-12-24 05:02 pm
ಷೇರು ಹೂಡಿಕೆ ಹೆಸರಲ್ಲಿ ಸೈಬರ್ ವಂಚಕರ ಮೋಸ ; ನಕಲಿ ಟ...
07-12-24 09:48 pm