ಬ್ರೇಕಿಂಗ್ ನ್ಯೂಸ್
16-11-24 12:03 pm Mangalore Correspondent ಕರಾವಳಿ
ಮಂಗಳೂರು, ನ.16: ಕಳೆದ ಬಾರಿ ಭಾರೀ ವಿವಾದಕ್ಕೀಡಾಗಿದ್ದ ಗುರುಪುರ ಸಮೀಪದ ಮಳಲಿಯ ಮಸೀದಿ ವಕ್ಫ್ ಆಸ್ತಿಯೆಂದು ಮುಸ್ಲಿಂ ಕಡೆಯವರು ವಾದಿಸಿದ್ದರು. ಅದೇ ಕಾರಣಕ್ಕೆ ಮಸೀದಿ ಕುರಿತ ವ್ಯಾಜ್ಯವನ್ನು ಮಂಗಳೂರಿನ ಕೋರ್ಟಿನಲ್ಲಿ ನಡೆಸಲು ಅನುಮತಿ ಇಲ್ಲ, ವಕ್ಫ್ ಟ್ರಿಬ್ಯುನಲ್ ನಲ್ಲಿಯೇ ಮಾಡಬೇಕೆಂದು ವಾದ ಮಾಡಿದ್ದರು. ಆದರೆ, ಅದು ವಕ್ಫ್ ಆಸ್ತಿಯಲ್ಲ, ಕಲಂ 9ರಲ್ಲಿ ಸರಕಾರಿ ಜಾಗ ಅಂತಲೇ ಇದೆ. ಇದೇನಿದ್ದರೂ ಅಲ್ಲಿ ಉತ್ಖನನ ಮಾಡಲು ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಕಡೆಯಿಂದ ವಾದಿಸಲಾಗಿತ್ತು.
ಈಗ ರಾಜ್ಯದಲ್ಲಿ ವಕ್ಫ್ ವಿವಾದ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಖಾಸಗಿ ಜಮೀನಿಗೂ ವಕ್ಫ್ ನೋಟೀಸ್ ನೀಡಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಮಳಲಿ ಮಸೀದಿ ಕುರಿತ ಜಾಗವನ್ನೂ ವಕ್ಫ್ ಕಾಯ್ದೆಯಡಿ ಕಂದಾಯ ದಾಖಲೆಯಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ ಎನ್ನುವ ಸಂಶಯ ವಿಶ್ವ ಹಿಂದು ಪರಿಷತ್ತಿಗೆ ಉಂಟಾಗಿದೆ. ಹೀಗಾಗಿ ಮಂಗಳೂರಿನ ಸಹಾಯಕ ಕಮಿಷನರ್ ಕೋರ್ಟಿನಲ್ಲಿ ಇತ್ತೀಚೆಗೆ ಆಕ್ಷೇಪ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆಕ್ಷೇಪದ ಅರ್ಜಿಯನ್ನು ಸಹಾಯಕ ಕಮಿಷನರ್ ವಜಾ ಮಾಡಿದ್ದು ವಿಶ್ವ ಹಿಂದು ಪರಿಷತ್ತಿನ ಸಂಶಯ ಬಲಗೊಳಿಸಿತ್ತು.
ಇದರ ಬೆನ್ನಲ್ಲೇ ಹೈಕೋರ್ಟಿನಲ್ಲಿ ಅಪೀಲು ಹೋಗಿದ್ದು, ಯಾವುದೇ ಕಾರಣಕ್ಕೂ ಮಳಲಿ ಮಸೀದಿ ಕುರಿತ ವ್ಯಾಜ್ಯ ಕೋರ್ಟಿನಲ್ಲಿ ಇರುವುದರಿಂದ ಅಲ್ಲಿನ ಜಾಗದ ಕುರಿತಾಗಿ ದಾಖಲೆ ಬದಲಾವಣೆ ಮಾಡಕೂಡದು ಎಂದು ಮಂಗಳೂರು ಸಹಾಯಕ ಕಮಿಷನರ್ ಗೆ ನಿರ್ದೇಶನ ನೀಡುವಂತೆ ಮಾಡಲಾಗಿದೆ. ವಿಎಚ್ ಪಿ ಕಡೆಯ ವಕೀಲ ಚಿದಾನಂದ ಕೆದಿಲಾಯ ಪ್ರಕಾರ, ಈ ಕುರಿತು ಹೈಕೋರ್ಟಿನಿಂದಲೂ ಸ್ಟೇ ತರಲಾಗಿದೆ. ಇದರ ಜೊತೆಗೆ, ಮಳಲಿ ಮಸೀದಿ ಕುರಿತಾಗಿ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಕಂದಾಯ ದಾಖಲೆ ಬದಲಾವಣೆ ಮಾಡಲಾಗದು ಎಂದಿದ್ದಾರೆ.
ಸದ್ಯ ವಕ್ಫ್ ಕಾಯ್ದೆಯಡಿ ಯಾವುದೇ ಖಾಸಗಿ ಆಸ್ತಿಯನ್ನೂ ವಕ್ಫ್ ಆಸ್ತಿಯೆಂದು ನೋಟಿಫೈ ಮಾಡುವುದಕ್ಕೆ ಸಾಧ್ಯವಿದೆ. ಹೀಗಾಗಿ ರಾಜ್ಯದೆಲ್ಲೆಡೆ ವಕ್ಫ್ ನೋಟೀಸ್ ಕುರಿತು ಭಾರೀ ಆತಂಕ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭಾರೀ ವಿವಾದಕ್ಕೀಡಾಗಿದ್ದ ಮಳಲಿ ಮಸೀದಿ ಕುರಿತ ವ್ಯಾಜ್ಯ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ. ಕಲಂ 11ರಲ್ಲಿ ವಕ್ಫ್ ಆಸ್ತಿಯೆಂದು ಉಲ್ಲೇಖ ಇದ್ದರೂ, ಹಕ್ಕುಗಳನ್ನು ಸೂಚಿಸುವ ಕಲಂ 9ರಲ್ಲಿ ಸರಕಾರಿ ಜಾಗ ಎಂದೇ ಇದೆ ಎಂದು ವಿಎಚ್ ಪಿ ಪರ ವಕೀಲರು ಹೇಳುತ್ತಿದ್ದಾರೆ. ಇತ್ತೀಚೆಗೆ, ರಾಜ್ಯದ ಮುಖ್ಯ ಕಾರ್ಯದರ್ಶಿಯವರೇ ಕಂದಾಯ ಇಲಾಖೆಯಲ್ಲಿ ವಕ್ಫ್ ಆಸ್ತಿಗಳ ಖಾತೆ ಬದಲಾವಣೆ ಮಾಡಬೇಕೆಂದು ಸೂಚಿಸಿರುವುದರಿಂದ ಮಳಲಿ ಮಸೀದಿಯದ್ದೂ ಬದಲಾವಣೆ ಆಗುವ ಸಾಧ್ಯತೆಯಿದೆ ಎನ್ನುವ ಸಂಶಯ ಇವರಲ್ಲಿದೆ.
Malali mosque row, VHP alleges of Mangalore administration trying to convert land into Waqf property. Vhp has appealed the additional court not to convert the land to waqf property. The mosque had filed a plea with the court stating that the place belongs to the Waqf board and that the civil court should not hear the plea. Now, the civil court admitted the VHP's plea and proceedings will continue at Mangalore civil court.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm