ಬ್ರೇಕಿಂಗ್ ನ್ಯೂಸ್
16-11-24 06:55 pm Mangalore Correspondent ಕರಾವಳಿ
ಮಂಗಳೂರು, ನ.15: ಕೊಡಿಯಾಲ್ ಬೈಲಿನ ಕಂಬಳ ಕ್ರಾಸ್ ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದ ಆರ್ಮಿ ಮತ್ತು ಗೋವಾ ಮೂಲದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಇಲಾಖೆ ಉಪ ಅಧೀಕ್ಷಕ ಸಂತೋಷ ಮೋಡಗಿ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳ ಕ್ರಾಸ್ ಬಳಿಯ ಎಸ್.ಎಸ್ ಕಾಂಪೌಂಡ್ ಕಟ್ಟಡದ ಮೊದಲನೇ ಮಹಡಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದು ಆರ್ಮಿ ಕ್ಯಾಂಟೀನಲ್ಲಿ ಸಿಗುವ 19.5 ಲೀಟರ್ ಮದ್ಯ, ಗೋವಾ ರಾಜ್ಯದ 52.5 ಲೀಟರ್ ಮದ್ಯ, ಕರ್ನಾಟಕ ರಾಜ್ಯದ ಮದ್ಯ 3 ಲೀಟರ್, ತೆರಿಗೆ ರಹಿತ ವಿದೇಶಿ ಮದ್ಯ 3 ಲೀಟರ್ , ಗೋವಾ ರಾಜ್ಯದ ಬಿಯರ್ 21.5 ಲೀಟರ್ , ಕರ್ನಾಟಕ ರಾಜ್ಯದ ಬಿಯರ್ 0.33 ಲೀಟರ್ 7 ಕ್ಯಾನ್ ಮತ್ತು abo-1.300 ಲೀಟರ್, 23 ಕ್ಯಾನ್, 101.30 ಲೀಟರ್ IML+BEER ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಪ್ರಮುಖ ಆರೊಪಿ ಅಮೀತ್ ಎ.ಪಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ವಶಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ.1,64,205/- ಎಂದು ಅಂದಾಜಿಸಲಾಗಿದೆ. ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ಶೇಖರಿಸಿಟ್ಟಿದ್ದು ಕರ್ನಾಟಕ ಅಬಕಾರಿ ಕಾಯ್ದೆ 1965ರ ನಿಯಮ 14, 15 ರಂತೆ ಕಲಂ 32(1), 38(ಎ) ಮತ್ತು 43(ಎ) ರಂತೆ ಅಪರಾಧವಾಗಿದ್ದು ಪ್ರಕರಣ ದಾಖಲಿಸಲಾಗಿದೆ. ಅಂತರ್ ರಾಜ್ಯ ಮಟ್ಟದ ಜಾಲ ಇದಾಗಿದ್ದು ಇತ್ತೀಚೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಪತ್ತೆಯಾದ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧ ಇರುವುದು ತಿಳಿದುಬಂದಿದ್ದು ಅಬಕಾರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Mangalore Excise officials seize Goa liquor in Mangalore including army liquor and foreign liquor Kodailbail house at Kambala cross.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
13-07-26 09:16 pm
HK News Staffer
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
13-07-26 10:57 pm
HK News Staffer
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm
ಬಿಡದಿ ಟೌನ್ಶಿಪ್ ಜಟಾಪಟಿ ; ಸರ್ವೆಗೆ ಬಂದಿದ್ದ ಅಧಿ...
13-07-26 07:39 pm
ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೀತಿ, ಧರ್ಮಸ್ಥಳ...
13-07-26 02:54 pm