ಬ್ರೇಕಿಂಗ್ ನ್ಯೂಸ್
19-11-24 10:16 pm Mangalore Correspondent ಕರಾವಳಿ
ಮಂಗಳೂರು, ನ.19: ರಾಜ್ಯದ ಕರಾವಳಿಯ ಪಶ್ಚಿಮ ಘಟ್ಟದಲ್ಲಿ 21 ವರ್ಷಗಳ ಬಳಿಕ ಗುಂಡಿನ ಸದ್ದು ಕೇಳಿದೆ. ಸರಿಯಾಗಿ 21 ವರ್ಷಗಳ ಹಿಂದೆ, 2003ರ ನವೆಂಬರ್ 17ರಂದು ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಕರ್ನಾಟಕದ ಮೊದಲ ನಕ್ಸಲ್ ಎನ್ಕೌಂಟರ್ ಆಗಿತ್ತು. ಉಡುಪಿ ಎಸ್ಪಿ ಆಗಿದ್ದ ಮುರುಗನ್ ನೇತೃತ್ವದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದು ರಾಯಚೂರಿನ ಹಾಜಿಮಾ ಮತ್ತು ಕೊಪ್ಪದ ಪಾರ್ವತಿ ಅವರನ್ನು ಎನ್ಕೌಂಟರ್ ಮಾಡಲಾಗಿತ್ತು.
ಆನಂತರ, ಪ್ರತಿವರ್ಷ ಈದು ಭಾಗಕ್ಕೆ ನಕ್ಸಲರು ಬಂದು ಹುತಾತ್ಮ ಸ್ಮರಣೆ ಮಾಡುವುದನ್ನು ರೂಢಿ ಮಾಡಿದ್ದರು. 2012ರ ಬಳಿಕ ಪಶ್ಚಿಮ ಘಟ್ಟದಲ್ಲಿ ನಕ್ಸಲ್ ಚಟುವಟಿಕೆ ಕಡಿಮೆಯಾದ ಬಳಿಕ ನಕ್ಸಲರು ಬರುತ್ತಿರಲಿಲ್ಲ. ಈ ಬಾರಿ ನವೆಂಬರ್ 18ರ ಮಧ್ಯರಾತ್ರಿ ಕಬ್ಬಿನಾಲೆ ಗ್ರಾಮದ ನಾಡ್ಪಾಲಿನ ಪೀತ್ ಬೈಲಿನಲ್ಲಿ ಎನ್ಕೌಂಟರ್ ಆಗಿದೆ. ಇದರಿಂದಾಗಿ ಈ ಹಿಂದಿನಂತೆ ಹುತಾತ್ಮ ಸ್ಮರಣೆಗಾಗಿ ನಕ್ಸಲರು ಈದು ಗ್ರಾಮದ ನೂರಾಳ್ ಬೆಟ್ಟಿಗೆ ಬಂದಿದ್ದರೇ ಎನ್ನುವ ಜಿಜ್ಞಾಸೆ ಇದೆ. ಅದೇ ಕಾರಣಕ್ಕೆ ಬಂದಿದ್ದ ವಿಕ್ರಂ ಗೌಡ ಅದೇ ಬೆಟ್ಟದ ಇನ್ನೊಂದು ಬದಿಯಿರುವ ಕಬ್ಬಿನಾಲೆಗೆ ಬಂದಿದ್ದನೇ ಎನ್ನುವುದು ಗೊತ್ತಾಗಿಲ್ಲ.
ಬೆಟ್ಟದ ನಡುವೆ ಅತಿ ದುರ್ಗಮ ಹಾದಿ
ಹೆಬ್ರಿ ತಾಲೂಕಿನ ಕಬ್ಬಿನಾಲೆ ಮತ್ತು ನಾಡ್ಪಾಲು ಗ್ರಾಮ ಪಶ್ಚಿಮ ಘಟ್ಟದ ಕಟ್ಟಕಡೆಯ ಗ್ರಾಮಗಳು. ಹೆಬ್ರಿಯಿಂದ ಆಗುಂಬೆ ಘಾಟ್ ಹೆದ್ದಾರಿಯಲ್ಲಿ ಸಿಗುವ ಮುದ್ರಾಡಿಯಿಂದ ಬಲಕ್ಕೆ ತಿರುಗಿದರೆ ಕಬ್ಬಿನಾಲೆಗೆ ಕಿರಿದಾದ ರಸ್ತೆ ಸಾಗುತ್ತದೆ. ಅಲ್ಲಿಂದ ಕಿರುಹಾದಿಯಲ್ಲಿ ಸಾಗಿದರೆ ಕಬ್ಬಿನಾಲೆಯ ವರಂಗ ಹಾಲುತ್ಪಾದಕರ ಸಂಘದ ಕಚೇರಿ ಸಿಗುತ್ತದೆ. ಅಲ್ಲಿಂದ ಒಂದು ಕಿಮೀ ದೂರದ ವರೆಗೆ ಆರು ಫೀಟ್ ಅಗಲದ ಕಾಂಕ್ರೀಟ್ ರಸ್ತೆಯಿದ್ದು, ಕಾರಿನಲ್ಲಿ ಸಾಗಲು ಸಾಧ್ಯವಾಗುತ್ತದೆ. ಅಲ್ಲಿಂದ ಸುಮಾರು 5 ಕಿಮೀ ಬೆಟ್ಟದಲ್ಲಿ ಅತ್ಯಂತ ದುರ್ಗಮ ಹಾದಿ. ಕೇವಲ ಜೀಪು ಮಾತ್ರ ಸಾಗಲು ಸಾಧ್ಯವಿರುವ ರಸ್ತೆಯಲ್ಲಿ ಪೊಲೀಸರ ಜೀಪು ಮಾತ್ರ ಸಾಗುತ್ತಿತ್ತು. ಅಲ್ಲಿಂದ ಮಾಧ್ಯಮದ ಗೆಳೆಯರು ನಡೆದು ಸಾಗಿದ್ದೇ ರೋಚಕ ಸನ್ನಿವೇಶ. ಕಡಿದಾದ ಬೆಟ್ಟದ ನಡುವೆ ಇರುವ ಮಣ್ಣಿನ ರಸ್ತೆಯೇ ಅಲ್ಲಿನ ಜನರಿಗೆ ಕಾಲುಹಾದಿ.
ದಾರಿಯಲ್ಲಿ ಸಿಕ್ಕ ಮಹಿಳೆಯೊಬ್ಬರನ್ನು ಮಾತನಾಡಿಸಿದಾಗ, ಏಳೆಂಟು ವರ್ಷಗಳಿಂದ ನಕ್ಸಲ್ ಚಟುವಟಿಕೆ ಇರಲಿಲ್ಲ. ಈಗ ಸರಕಾರ ಬದಲಾಗಿದ್ದರಿಂದಲೋ ಏನೋ ಮತ್ತೆ ನಕ್ಸಲರು ವಕ್ಕರಿಸಿದ್ದಾರೆ. ತಿಂಗಳಮಕ್ಕಿ, ಪೀತ್ ಬೈಲಿಗೆ ಕೆಲವು ದಿನಗಳಿಂದ ವಿಕ್ರಂ ಗೌಡ ಬಂದು ಹೋಗುತ್ತಿರುವ ಬಗ್ಗೆ ಮಾಹಿತಿಗಳಿದ್ದವು. ಎರಡು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ತೆರಳಿದ್ದರು. ನಿನ್ನೆ ಮಧ್ಯರಾತ್ರಿ ಎನ್ಕೌಂಟರ್ ಆಗಿದೆ ಎಂದು ಸುದ್ದಿ ಸಿಕ್ಕಿದೆ ಎಂದರು.
ತಿಂಗಳಮಕ್ಕಿಯಲ್ಲಿ ನಾಟಿವೈದ್ಯರಾಗಿರುವ 80 ವರ್ಷದ ನಾರಾಯಣ ಗೌಡರು ಮಾತಿಗೆ ಸಿಕ್ಕಿದರು. ಇಲ್ಲಿ ನಕ್ಸಲರು ಬರಬೇಡಿ ಎಂದೇ ಹೇಳಿದ್ದೆವು. ಹತ್ತು ವರ್ಷಗಳ ಹಿಂದೆ ಸಾಧು ಗೌಡ ಅಂತ ಒಬ್ಬರನ್ನು ನಕ್ಸಲರು ಹತ್ಯೆ ಮಾಡಿದ್ದರು. ಸಾಧು ಗೌಡ ಪೊಲೀಸರ ಮಾಹಿತಿದಾರನೆಂದು ಸಿಟ್ಟಿನಿಂದ ಹತ್ಯೆ ಮಾಡಿದ್ದರು. ಆನಂತರ, ವಿಕ್ರಂ ಗೌಡನನ್ನು ನೋಡಿಲ್ಲ. ಯಾವುದೇ ನಕ್ಸಲರು ಇತ್ತ ಕಡೆಗೆ ಬಂದಿಲ್ಲ ಎಂದರು. ಈ ದುರ್ಗಮ ಬೆಟ್ಟದಲ್ಲಿ ಹೇಗೆ ಇರುತ್ತೀರಿ ಎಂದು ಕೇಳಿದಾಗ, ನಾನು ಒಬ್ಬನೇ ಇರೋದು. ಎಲ್ಲ ಸಂಬಂಧಿಕರು ಮುದ್ರಾಡಿ, ಹೆಬ್ರಿಯಲ್ಲಿದ್ದಾರೆ. ನಾನು ಇದ್ದಷ್ಟು ದಿನ ಇರುತ್ತೆ. ಏನಾದ್ರೂ ತೊಂದರೆ ಆದರಷ್ಟೇ ಕಷ್ಟಪಟ್ಟು ಹೊರಕ್ಕೆ ಹೋಗುತ್ತೇವೆ ಎಂದು ಹೇಳಿದರು.
ಇತ್ತೀಚೆಗಷ್ಟೇ ಕೊಪ್ಪ ತಾಲೂಕಿನ ಜಯನಗರ ಠಾಣೆ ವ್ಯಾಪ್ತಿಯ ಒಂಟಿ ಮನೆಗೆ ನಕ್ಸಲರು ಬಂದಿದ್ದರು. ಹಾಗಾಗಿ, ಅಲ್ಲಿಯೂ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ಅಲ್ಲಿ ಮುಂಡಗಾರು ಲತಾ ನೇತೃತ್ವದ ತಂಡ ಬಂದಿತ್ತು ಎನ್ನಲಾಗಿತ್ತು. ಕಬ್ಬಿನಾಲೆ ಭಾಗದಲ್ಲಿ ವಿಕ್ರಂ ಗೌಡ ನೇತೃತ್ವದ ತಂಡ ಬಂದಿತ್ತು ಎನ್ನಲಾಗಿತ್ತು. ಇವರದ್ದು ಕಬಿನಿ ದಳಂ ಎನ್ನುವ ನಕ್ಸಲ್ ಟೀಮ್ ಇತ್ತು. ಲತಾ ಮತ್ತು ವಿಕ್ರಂ ಗೌಡನ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸ್ತಾ ಇತ್ತು. ಈಚೆಗೆ ಮಲೆನಾಡು ಭಾಗದಲ್ಲಿ ಕಸ್ತೂರಿರಂಗನ್ ವರದಿ ಹೆಸರಲ್ಲಿ ಜನರಲ್ಲಿ ಭೀತಿ ಮೂಡಿಸಲಾಗುತ್ತಿದೆ, ವರದಿ ನೆಪದಲ್ಲಿ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎನ್ನುವ ವದಂತಿ ಹರಿಯಬಿಟ್ಟಿದ್ದನ್ನೇ ನಕ್ಸಲರು ಎನ್ ಕ್ಯಾಶ್ ಮಾಡಿಕೊಂಡಿದ್ದರು. ನಾವು ನಿಮ್ಮ ಪರವಾಗಿದ್ದೇವೆ ಎಂದು ಹೇಳಿ ಮಲೆನಾಡು ಜನರ ಸಹಾನುಭೂತಿ ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಕಾಡಂಚಿನ ಜನರು ಹಿಂದಿನಂತೆ ಮುಗ್ಧರಿಲ್ಲ. ನಕ್ಸಲರು ಬಂದಿದ್ದನ್ನು ಪೊಲೀಸರಿಗೆ ಹೇಳಿದ್ದು, ಇದರ ಬೆನ್ನಲ್ಲೇ ಎಎನ್ಎಫ್ ಕಾರ್ಯಾಚರಣೆ ನಡೆಸಿದೆ.
ಕಳೆದ ಹತ್ತು ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ಸಂಪೂರ್ಣ ನಿಂತೇ ಹೋಗಿತ್ತು. ಕಳೆದೊಂದು ವರ್ಷದಲ್ಲಿ ಆಗೊಮ್ಮೆ ಈಗೊಮ್ಮೆ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದ್ದರೂ, ಪ್ರತ್ಯಕ್ಷವಾಗಿ ನಕ್ಸಲರು ಪೊಲೀಸರಿಗೆ ಪತ್ತೆಯಾಗಿರಲಿಲ್ಲ. ಆದರೆ ಇಂಥ ಹೊತ್ತಲ್ಲಿಯೇ ಕರ್ನಾಟಕದ ಮಟ್ಟಿಗೆ ಮೋಸ್ಟ್ ವಾಂಟೆಡ್ ಆಗಿದ್ದ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯಾಗಿರುವುದು ಪಶ್ಚಿಮ ಘಟ್ಟದಲ್ಲಿ ಮತ್ತೆ ನಕ್ಸಲ್ ಕರಿನೆರಳು ಬಿದ್ದಂತಾಗಿದೆ.
Report by: ಗಿರಿಧರ್ ಶೆಟ್ಟಿ , ಮಂಗಳೂರು | Giridhar Shetty
Udupi Naxal leader Vikarm Gowda Wikipedia, Ground report by Headline Karnataka of encounter by ANF. Maoist leader Vikram Gowda, alias Shrikant, who died in an encounter with police at Hebri in Udupi district of Karnataka on November 18, was among the nine Maoists accused in the murder of 50-year-old bamboo basket weaver Sadashiva Gowda in Hebri in December 2011
19-11-24 11:05 pm
Bangalore Correspondent
Bangalore Fire, Electric Showroom; ಬೆಂಗಳೂರು ಎ...
19-11-24 06:55 pm
Chitradurga, suicide: ಹೃದಯಾಘಾತಕ್ಕೆ ಗಂಡ ಬಲಿ ;...
19-11-24 06:46 pm
Bangalore crime, Suicide: ಹೋಟೆಲ್ ಉದ್ಯಮದಲ್ಲಿ...
17-11-24 03:01 pm
Chaithra Kundapura, Kichaa Sudeep Angry, Big...
17-11-24 11:10 am
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
19-11-24 10:16 pm
Mangalore Correspondent
Mangalore Journalist Bhuvanendra Puduvettu; ಹ...
19-11-24 07:29 pm
Mangalore University, Courses: ಮಂಗಳೂರು ವಿವಿಯಲ...
18-11-24 11:01 pm
Mangalore, Eshwar Malpe: ಮಕ್ಕಳಿಗೆ ಮೊಬೈಲ್ ಕೊಡಬ...
18-11-24 09:51 pm
Mangalore Drowning, Mysuru, Beach resort, Cri...
18-11-24 05:23 pm
19-11-24 07:40 pm
Udupi Correspondent
Hassan Murder, Dowry; ಹಾಸನ ; ಗರ್ಭಿಣಿ ಪತ್ನಿಗೆ...
19-11-24 05:56 pm
Naxal Leader Vikram Encounter, Udupi crime; ಹ...
19-11-24 06:39 am
Udupi crime, Robbery: ವೃದ್ದೆಯ ಆರೈಕೆಗಾಗಿ ಬಂದು...
18-11-24 07:51 pm
Bangalore online fraud, crime: ಪೊಲೀಸರ ಸೋಗಿನಲ್...
17-11-24 09:54 pm