ಬ್ರೇಕಿಂಗ್ ನ್ಯೂಸ್
20-11-24 10:28 pm Mangalore Correspondent ಕರಾವಳಿ
ಮಂಗಳೂರು, ನ.20: ತಿಂಗಳಿಗೆ ಒಂದು ಸಾವಿರ ರೂಪಾಯಿ ಕಟ್ಟಿದರೆ, ದುಬಾರಿ ಕಾರು, ಫ್ಲಾಟ್ ಗಿಫ್ಟ್ ಆಗಿ ಸಿಕ್ಕಿದರೆ ಯಾರಿಗೆ ಬೇಡ ಹೇಳಿ. ಆದರೆ, ಜನರ ಈ ರೀತಿಯ ಆಕರ್ಷಣೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅದೃಷ್ಟ ಚೀಟಿ ಹೆಸರಲ್ಲಿ ಮಂಗಳೂರಿನಲ್ಲಿ ನಾನಾ ಮಾದರಿಯ ಲಕ್ಕಿ ಸ್ಕೀಂ ಆರಂಭಿಸಿದ್ದಾರೆ. ಇದರ ನಡುವಲ್ಲೇ ಮಂಗಳೂರಿನಲ್ಲಿ ಡ್ರೀಮ್ ಡೀಲ್ ಹೆಸರಿನ ಲಕ್ಕಿ ಸ್ಕೀಮ್ ನಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಮೊತ್ತವನ್ನು ಗ್ರಾಹಕರು ಕಟ್ಟಬೇಕಿದ್ದು, ಡ್ರೀಮ್ ಡೀಲ್ ಸಂಸ್ಥೆಯವರು ಲಕ್ಕಿ ಡ್ರಾವನ್ನು ಲೈವ್ ಆಗಿ ನಡೆಸುತ್ತಿದ್ದಾರೆ. ಈ ಬಾರಿ ಮಹೀಂದ್ರಾ ಥಾರ್ ಕಾರು ಗಿಫ್ಟ್ ಇದೆಯೆಂದು ತೋರಿಸಲಾಗಿತ್ತು. ಹೀಗಾಗಿ ಗ್ರಾಹಕರು ಕೂಡ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ, ಇದೇ ವೇಳೆ ಲಕ್ಕಿ ಡ್ರಾ ನಡೆಸಿದ್ದ ವಿಡಿಯೋ ಹೊರಬಂದಿದ್ದು, ಅದೃಷ್ಟ ಚೀಟಿ ಎತ್ತುವುದರ ಹಿಂದಿನ ಸಾಚಾತನ ಬಯಲಾಗಿದೆ. ಕಣ್ಣಿಗೆ ಬಟ್ಟೆ ಕಟ್ಟಿದ ವ್ಯಕ್ತಿಯೊಬ್ಬ ಅದೃಷ್ಟ ಚೀಟಿಯನ್ನು ಎತ್ತುವುದನ್ನು ತೋರಿಸುವಾಗಲೇ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಆತನ ಕೈಗೆ ತನ್ನ ಕೈಲಿದ್ದ ಚೀಟಿಯನ್ನು ನೀಡುತ್ತಾನೆ. ಆಮೂಲಕ ಕಂಪನಿಯಿಂದಲೇ ವ್ಯವಸ್ಥಿತ ರೀತಿಯಲ್ಲಿ ವಂಚನೆ ಎಸಗಲಾಗುತ್ತಿದೆ ಎಂದು ಜಾಲತಾಣದಲ್ಲಿ ಈ ವಿಡಿಯೋವನ್ನು ವೈರಲ್ ಮಾಡಲಾಗಿತ್ತು.
ವಿಡಿಯೋ ವೈರಲ್ ಆಗುತ್ತಲೇ ಕಂಪನಿಯ ಕಡೆಯವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಲೋಪ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಪ್ಪೆಸಗಿರುವ ಇಬ್ಬರು ವ್ಯಕ್ತಿಗಳನ್ನು ಸಂಸ್ಥೆಯಿಂದ ವಜಾ ಮಾಡಲಾಗಿದೆ. ಮತ್ತೆ ಅದೃಷ್ಟ ಚೀಟಿ ಎತ್ತಿದ್ದು ಬೇರೆಯೇ ವ್ಯಕ್ತಿಗೆ ಬಹುಮಾನ ನೀಡಿದ್ದೇವೆ ಎಂದಿದ್ದಾರೆ. ಆದರೆ, ಲೈವ್ ವಿಡಿಯೋದಲ್ಲಿಯೇ ನಕಲಿತನ ಎಸಗಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದರಿಂದ ಈ ರೀತಿಯ ಎಲ್ಲ ಅದೃಷ್ಟ ಚೀಟಿ ಸ್ಕೀಂಗಳ ಬಗ್ಗೆಯೂ ಜನರಿಗೆ ಅಪನಂಬಿಕೆ ಉಂಟಾಗಿದೆ.
ಮಂಗಳೂರು, ಸುರತ್ಕಲ್ ನಲ್ಲಿ 25ಕ್ಕೂ ಹೆಚ್ಚು ಈ ರೀತಿಯ ಅದೃಷ್ಟ ಚೀಟಿ ಎತ್ತುವ ಸ್ಕೀಂ ನಡೆಯುತ್ತಿದ್ದು, ಪೊಲೀಸರೂ ಮೌನವಾಗಿದ್ದಾರೆ. ಪ್ರತಿ ಅದೃಷ್ಟ ಚೀಟಿಯಲ್ಲೂ 15 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದು, ತಿಂಗಳಿಗೆ ಒಬ್ಬನಿಗೆ ಡ್ರಾದಲ್ಲಿ ದುಬಾರಿ ಬಹುಮಾನ ಸಿಗುತ್ತದೆ ಎಂದು ಭರವಸೆ ನೀಡಲಾಗುತ್ತದೆ. ವಿಶೇಷ ಅಂದ್ರೆ, ಕೆಲವು ಅದೃಷ್ಟ ಚೀಟಿ ಸ್ಕೀಮ್ ಗಳಿಗೆ ತುಳು ಚಿತ್ರನಟರೂ ವಿಡಿಯೋ ಮಾಡಿ, ಜನರನ್ನು ಆಕರ್ಷಿಸುತ್ತಿದ್ದಾರೆ. ವರ್ಷದ ಕೊನೆಯಲ್ಲಿ ಅದೃಷ್ಟ ಚೀಟಿಗೆ ಆಯ್ಕೆಯಾಗದ ಪ್ರತಿ ವ್ಯಕ್ತಿಗೂ ಆತ ಪಾವತಿಸಿದ ಮೊತ್ತದಲ್ಲಿ ಗಿಫ್ಟ್ ಕೂಪನ್ನಲ್ಲಿ ಕೊಡಲಾಗಿರುವ ದೊಡ್ಡ ಮೌಲ್ಯದ ವಸ್ತುಗಳನ್ನು ಪಡೆಯಲು ಅವಕಾಶ ಇದೆ ಎನ್ನುತ್ತಿದ್ದಾರೆ. ಇದೇ ರೀತಿ ವಿಕೆ ಫರ್ನಿಚರ್ ಸಂಸ್ಥೆಯಿಂದ ನಡೆಸಲ್ಪಡುವ ಅದೃಷ್ಟ ಚೀಟಿಯಲ್ಲಿ 20 ಸಾವಿರಕ್ಕೂ ಹೆಚ್ಚು ಗ್ರಾಹಕರಿದ್ದಾರೆ.
ಪ್ರತಿ ತಿಂಗಳಿಗೆ 20 ಸಾವಿರ ಜನರು ಒಂದು ಸಾವಿರದಂತೆ ಹಣ ಕಟ್ಟಿದರೆ, ಕೋಟ್ಯಂತರ ರೂಪಾಯಿ ಶೇಖರಣೆ ಆಗೋದಂತೂ ಖಚಿತ. ಆದರೆ, ಕೊನೆಯಲ್ಲಿ ಏಕಕಾಲಕ್ಕೆ ಅಷ್ಟೊಂದು ಗಿಫ್ಟ್ ಗಳನ್ನು ಕೊಡುವುದು ಕಷ್ಟಕರ ಆಗಬಹುದೇನೋ. ಈ ಹಿಂದೆ ಬೆಂಗಳೂರಿನಲ್ಲಿ ಇದೇ ಮಾದರಿಯಲ್ಲಿ ಐಎಂಎ ಜುವೆಲ್ಲರಿಯಿಂದ ಅದೃಷ್ಟ ಚೀಟಿ ಎತ್ತುವ ಯೋಜನೆ ಮಾಡಿ ಸಾವಿರಾರು ಮಂದಿಗೆ ವಂಚನೆ ಎಸಗಲಾಗಿತ್ತು. ಆನಂತರ, ಹೈಕೋರ್ಟಿನಿಂದ ಜುವೆಲ್ಲರಿಯನ್ನು ಜಪ್ತಿ ಮಾಡಿ ಗ್ರಾಹಕರಿಗೆ ಹಣ ಹಿಂತಿರುಗಿಸುವಂತೆ ಆದೇಶವೂ ಆಗಿತ್ತು. ಆದರೆ, ಕೆಲವು ಗ್ರಾಹಕರು ಈವರೆಗೂ ಹಣ ಸಿಗದೆ ಪರದಾಡುವ ಸ್ಥಿತಿಯಾಗಿದೆ.
ಡ್ರೀಮ್ ಡೀಲ್ ಹೆಸರಿನಲ್ಲಿ ಲಕ್ಕಿ ಸ್ಕೀಂ ನಡೆಸುವ ಮಂದಿಯೂ ಜುವೆಲ್ಲರಿ ಸೇರಿದಂತೆ ಬೇರೆ ಬೇರೆ ವಹಿವಾಟು ನಡೆಸುತ್ತಾರೆ ಎನ್ನಲಾಗುತ್ತಿದೆ. ಹಾಗಾಗಿ, ಇದೇ ಮಾದರಿಯ ಯೋಜನೆಯನ್ನು ಇಡೀ ದೇಶಾದ್ಯಂತ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ರಾಜ್ಯದಾದ್ಯಂತ ನಮ್ಮ ಯೋಜನೆಯಿದ್ದು, 15 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಆಗಿರುವ ತಪ್ಪಿನಲ್ಲಿ ಸಂಸ್ಥೆಯ ಪಾಲುದಾರಿಕೆ ಇಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕಾಗಿ ಪೊಲೀಸ್ ದೂರು ನೀಡಿದ್ದೇವೆ ಎಂದಿದ್ದಾರೆ.
Mangalore Dream deal group company fraud, video goes viral, cheating exposed during lucky draw Live event. Dream deal group offers cheating plan in the name of savings plan.
13-09-25 10:19 am
HK News Desk
Shikaripura Bike Accident: ಬೈಕ್ಗೆ ಡಿಕ್ಕಿ ಹೊಡ...
12-09-25 08:26 pm
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm