ಬ್ರೇಕಿಂಗ್ ನ್ಯೂಸ್
20-11-24 11:06 pm Udupi Correspondent ಕರಾವಳಿ
ಉಡುಪಿ, ನ.20: ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ ವಿಕ್ರಂ ಗೌಡನ ಬಳಿ ಮೂರು ಆಯುಧಗಳಿದ್ದವು. ಒಂದು ಬಾರಿ ಟ್ರಿಗರ್ ಮಾಡಿದರೆ 50- 60 ಬುಲೆಟ್ ಸಿಡಿಯುವ ಮೆಷಿನ್ ಗನ್ ಆತನಲ್ಲಿತ್ತು. ಇದಲ್ಲದೆ, 3 ಎಂಎಂ ಪಿಸ್ತೂಲ್ ಮತ್ತು ಚೂರಿಯೂ ಇತ್ತು. ಇದೊಂದು ಪರ್ಫೆಕ್ಟ್ ಎನ್ಕೌಂಟರ್, ಇದರಲ್ಲಿ ನಕಲಿ, ಅಸಲಿ ಅನ್ನುವುದಿಲ್ಲ ಎಂದು ಆಂತರಿಕ ಭದ್ರತೆ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಹೇಳಿದ್ದಾರೆ.
ಎನ್ಕೌಂಟರ್ ಕಾರ್ಯಾಚರಣೆ ನಡೆಸಿದ ಜಾಗಕ್ಕೆ ಭೇಟಿ ನೀಡಿದ ಬಳಿಕ ಹೆಬ್ರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನ.18ರ ಸಂಜೆ 6 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಕಾಡು ಪ್ರದೇಶದಲ್ಲಿ ಎರಡು ಮೂರು ಮನೆಗಳಿದ್ದವು. ನಕ್ಸಲ್ ಪೊಲೀಸ್ ಮುಖಾಮುಖಿಯಲ್ಲಿ ಎನ್ ಕೌಂಟರ್ ಆಗಿದೆ. ಎನ್ಕೌಂಟರ್ ನಲ್ಲಿ ಯಾವುದೇ ಸಂಶಯ ಬೇಡ. ಪ್ಲ್ಯಾನ್ ಮಾಡಿ ಎನ್ಕೌಂಟರ್ ಮಾಡಿದ್ದಲ್ಲ. ಇದೊಂದು ಪರ್ಫೆಕ್ಟ್ ಎನ್ಕೌಂಟರ್ ಎಂದು ಸ್ಪಷ್ಟಪಡಿಸಿದರು.
ಕಾಡು, ಗ್ರಾಮ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದೇವೆ. ವಿಕ್ರಂ ಗೌಡನ ಮೇಲೆ ಹಲವಾರು ಕೇಸುಗಳಿದ್ದವು. ಮೋಸ್ಟ್ ವಾಂಟೆಡ್, ನಕ್ಸಲ್ ಮೂಮೆಂಟ್ ನಾಯಕನಾಗಿದ್ದ. ಎನ್ಕೌಂಟರ್ ನಮ್ಮ ಉದ್ದೇಶ ಅಲ್ಲ, ಶರಣಾಗತಿ ನಮ್ಮ ಮೂಲ ಆದ್ಯತೆ. ಶರಣಾಗತಿಗೆ ನೂರಾರು ದಾರಿಗಳು ಇವೆ. ಸೆರೆಂಡರ್ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇವೆ. ಬಳಸಿಕೊಳ್ಳಬಹುದು ಎಂದು ಡಿಜಿಪಿ ನಕ್ಸಲರಿಗೆ ಕಿವಿಮಾತು ಹೇಳಿದರು.
ವಿಕ್ರಂ ಗೌಡ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಧಾರಣ ಕತ್ತಲಾಗಿದ್ದರಿಂದ ಅಲ್ಲಿ ಎಷ್ಟು ಜನ ಇದ್ದರು ಎಂದು ಎಎನ್ಫ್ಗೆ ಮಾಹಿತಿ ಇಲ್ಲ. ನಮ್ಮ ಜೊತೆ ವಿಕ್ರಂ ಗೌಡನ ಇತ್ತೀಚಿನ ಫೋಟೋ ಇದೆ. ಎಎಎನ್ ಎಫ್ ಬಳಿ ಎಲ್ಲಾ ದಾಖಲೆಗಳು ಇವೆ. ಈ ಮೂಲಕ ವಿಕ್ರಮ್ ಗೌಡ ಎಂಬುದನ್ನು ತಕ್ಷಣ ಪತ್ತೆ ಮಾಡಲಾಗಿದೆ ಎಂದರು.
ಆತ ದಿನಸಿಗೆ ಬಂದಿದ್ದನೋ ಯಾಕೆ ಬಂದಿದ್ದ ಅಂತ ನಮಗೆ ಗೊತ್ತಿಲ್ಲ. ಎಷ್ಟು ಗುಂಡು ಬಿದ್ದಿದೆ ಅಂತನೂ ಗೊತ್ತಿಲ್ಲ, ಪೋಸ್ಟ್ ಮಾರ್ಟಂ ವರದಿ ಬರಬೇಕಿದೆ ಎಂದು ಹೇಳಿದ ಅವರು, ಕೇರಳ ಜೊತೆ ನಮ್ಮ ರಾಜ್ಯದ ಎಎನ್ ಎಫ್ ಸಂಪರ್ಕ ಸಂಬಂಧ ಚೆನ್ನಾಗಿದೆ. ನಕ್ಸಲ್ ತಡೆಗೆ ಅಲ್ಲಿಂದ ಸಪೋರ್ಟ್ ಇದೆ. ಏಪ್ರಿಲ್ ತಿಂಗಳಲ್ಲಿ ದಕ್ಷಿಣ ಕನ್ನಡ ಕೊಡಗಿನಲ್ಲಿ ವಿಕ್ರಂ ಗೌಡ ಚಲನವಲನಗಳು ಇದ್ದವು. ಆ ಬಗ್ಗೆ ನಾವು ಪ್ರಕರಣ ದಾಖಲಿಸಿದ್ದೆವು. ತಿಂಗಳ ಹಿಂದೆ ಆತನ ಓಡಾಟದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಊಹಾಪೋಹ ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರು ಕಿವಿಗೊಡಬಾರದು ಎಂದು ಹೇಳಿದರು.
Naxal Vikram encounter, DGP ISD Pranab Mohanty shares exclusive details about Naxal leader. DGP Mohanty clarified that the encounter was not pre-planned but occurred when police teams came face-to-face with Gowda during combing operations. “The police recovered a machine gun capable of firing 50-60 rounds with a single trigger pull, a 0.3 mm pistol, and a knife from Gowda. There were no indications of surrender from him, nor had there been any prior correspondence suggesting such intentions,” he stated.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am