ಬ್ರೇಕಿಂಗ್ ನ್ಯೂಸ್
22-11-24 08:21 pm Mangalore Correspondent ಕರಾವಳಿ
ಮಂಗಳೂರು, ನ.22: ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಹೆಸರಲ್ಲಿ ಅವರ ಜೊತೆಗಿದ್ದವರು ಹಫ್ತಾ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಪಡೀಲಿನಲ್ಲಿ ರಸ್ತೆ ಬದಿ ಹೂವಿನ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಭಾರೀ ವೈರಲ್ ಆಗಿದೆ.
ಅಂಗವಿಕಲನೂ ಆಗಿರುವ ಹೂವಿನ ವ್ಯಾಪಾರ ಮಾಡುತ್ತಿರುವ ಚಂದ್ರಹಾಸ ಪೂಜಾರಿ ಈ ವಿಡಿಯೋ ಮಾಡಿದ್ದು, ಬಿಜೆಪಿ ಮುಖಂಡ ವಿಜಯ ಕುಮಾರ್ ಶೆಟ್ಟಿ ಎರಡು ದಿನಗಳ ಹಿಂದೆ ಅಂಗಡಿಗೆ ಬಂದು ಧಮ್ಕಿ ಹಾಕಿದ್ದಾರೆ. ಇದರಿಂದ ನನಗೇನಾದರೂ ಆದರೆ ಅಥವಾ ಆತ್ಮಹತ್ಯೆ ಮಾಡಿಕೊಂಡರೆ ಇದಕ್ಕೆ ವಿಜಯ ಕುಮಾರ್ ಶೆಟ್ಟಿಯವರೇ ಹೊಣೆಯೆಂದು ವಿಡಿಯೋದಲ್ಲಿ ಚಂದ್ರಹಾಸ್ ಪೂಜಾರಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ಈ ವಿಡಿಯೋ ಮಾಡಿದ್ದು ರಸ್ತೆ ಬದಿಯ ನನ್ನ ಅಂಗಡಿ ತೆರವು ಮಾಡುವುದಕ್ಕೂ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
ವಿಡಿಯೋ ವೈರಲ್ ಆಗಿರುವುದರಿಂದ ಬಿಜೆಪಿ ಮುಖಂಡ ವಿಜಯಕುಮಾರ್ ಶೆಟ್ಟಿ ಮತ್ತು ಸ್ಥಳೀಯ ಕಾರ್ಪೊರೇಟರ್ ಶೋಭಾ ಅವರು ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚಂದ್ರಹಾಸ್ ವಿನಾಕಾರಣ ತಮ್ಮ ವಿರುದ್ಧ ಮಾನಹಾನಿ ಆಗುವ ರೀತಿ ಮತ್ತು ಹಫ್ತಾ ಕೇಳಿದ್ದಾಗಿ ಹೇಳಿ ತೇಜೋವಧೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿದ್ದಾರೆ. ಪೊಲೀಸರು ಚಂದ್ರಹಾಸ್ ಅವರನ್ನು ಕರೆದು ವಿಚಾರಿಸಿದ್ದು, ಹಫ್ತಾ ಎಷ್ಟು ಸಮಯದಿಂದ ಕೇಳುತ್ತಿದ್ದಾರೆ, ಎಷ್ಟು ಹಣ ಕೊಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ, ಹಣ ಕೇಳಿಲ್ಲ ಎಂದಿದ್ದಾನೆ. ಮತ್ತೆ ಹಫ್ತಾ ಅಂದರೇನು, ಹಣಕ್ಕಾಗಿ ಪೀಡಿಸಿದ್ದಲ್ವಾ ಎಂದು ಕೇಳಿದರೆ, ಹಣಕ್ಕಾಗಿ ಅಂತ ಅಲ್ಲ, ನಮ್ಮನ್ನು ಎಬ್ಬಿಸಲು ಯತ್ನಿಸಿದ್ದಾರೆ, ಅದು ಹಫ್ತಾ ರೀತಿಯಲ್ವಾ ಎಂದು ಕೇಳಿದ್ದಾನಂತೆ. ಆನಂತರ, ಎರಡೂ ಕಡೆಯವರನ್ನು ಸಮಾಧಾನಿಸಿ ಪೊಲೀಸರು ಹಿಂದಕ್ಕೆ ಕಳಿಸಿದ್ದಾರೆ.
ಈ ಬಗ್ಗೆ ವಿಜಯ ಕುಮಾರ್ ಶೆಟ್ಟಿ ಅವರಲ್ಲಿ ಕೇಳಿದಾಗ, ವಿಡಿಯೋದಿಂದಾಗಿ ನನ್ನ ತೇಜೋವಧೆ ಆಗಿದೆ. ಆತನಿಗೆ ಅಂಗಡಿ ಹಾಕಿಸಿಕೊಟ್ಟಿದ್ದೇ ನಾನು. ಮೊನ್ನೆ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ಆದಾಗಲೂ, ಅಂಗವಿಕಲ ಅಂತ ಅಂಗಡಿಯನ್ನು ತೆರವು ಮಾಡದೆ ಉಳಿಸಿಕೊಂಡಿದ್ದೇವೆ. ಉಳಿದ 15ರಷ್ಟು ಅಂಗಡಿಗಳನ್ನು ತೆರವು ಮಾಡಲಾಗಿತ್ತು. ಅಲ್ಲಿ ಇತರ ಅಂಗಡಿ ಬಂದ್ ಆದಮೇಲೆ ಹೂವಿನ ಜೊತೆಗೆ ಇನ್ನಿತರ ಹಣ್ಣು, ತೆಂಗಿನಕಾಯಿ ಮಾರಲು ತೊಡಗಿದ್ದಾನೆ. ಇದಕ್ಕೆ ಉಳಿದವರು ಆಕ್ಷೇಪಿಸಿದ್ದು ನನ್ನಲ್ಲಿ ಕಿರಿ ಕಿರಿ ಮಾಡಿದ್ದಕ್ಕೆ ಪ್ರಶ್ನೆ ಮಾಡಿದ್ದೆ ಅಷ್ಟೇ. ಅದಕ್ಕಾಗಿ ಈ ರೀತಿ ವಿಡಿಯೋ ಮಾಡಿ ಹಾಕಿದ್ದಾನೆ ಎಂದು ಹೇಳಿದ್ದಾರೆ.
In a concerning incident, former #BJP corporator #VijayKumarShetty has been accused of extorting money from a handicapped flower shop owner. The shop owner alleges that Shetty has been harassing him for payments, leading to significant distress. #mangalorenews pic.twitter.com/SuIXo4N4bO
— Headline Karnataka (@hknewsonline) November 22, 2024
In a concerning incident, former BJP corporator Vijay Kumar Shetty has been accused of extorting money from a handicapped flower shop owner. The shop owner alleges that Shetty has been harassing him for payments, leading to significant distress. A case has been registered by Vijay Kumar at the Kankandy Town Police Station. Authorities are expected to investigate the allegations thoroughly to determine the validity of the claims and take appropriate action.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm