Mangalore Cyber Fraud, Crime: ಜಾಲತಾಣದಲ್ಲಿ ಲೈಕ್, ಷೇರ್ ಮಾಡಿದರೂ ಸಿಕ್ಕಿಬೀಳುತ್ತೀರಿ ಎಚ್ಚರ ! ಸೈಬರ್ ವಂಚಕರ ಹೊಸ ಟ್ರೆಂಡ್, ಜುಜುಬಿ ಹಣಕ್ಕಾಗಿ ಲಿಂಕ್ ಹಿಂದೆ ಬಿದ್ದರೆ ಅಪಾಯ ಖಚಿತ

27-11-24 11:04 pm       Mangalore Correspondent   ಕರಾವಳಿ

ತಿಂಗಳ ಸಂಬಳದಲ್ಲಿ ಜೀವನ ನಡೆಸುವವರಿಗೆ ಮತ್ತೊಂದು ಕಡೆಯಿಂದ ಆದಾಯ ಬರುತ್ತೆ ಎಂದರೆ ಯಾರಿಗೆ ಬೇಡ ಹೇಳಿ. ಅದರಲ್ಲೂ ಏನೂ ಶ್ರಮ ಪಡದೆ ಆದಾಯ ಸಿಗುತ್ತೆ, ಹಾಕಿದ ಹಣ ಡಬಲ್ ಆಗುತ್ತೆ ಎಂದರೆ ಬೇಗನೆ ನಂಬಿ ಬಿಡುತ್ತಾರೆ. ಮಧ್ಯಮ ವರ್ಗದ ಜನರ ಇಂಥ ಮೆಂಟಾಲಿಟಿಯನ್ನೇ ಹೈಜಾಕ್ ಮಾಡಿರುವ ದೇಶದ್ರೋಹಿಗಳು, ಸೈಬರ್ ವಂಚಕರು ಜನಸಮಾನ್ಯರನ್ನು ವಂಚಿಸಲು ಮತ್ತೊಂದು ತಂತ್ರ ಹೂಡಿದ್ದಾರೆ.

ಮಂಗಳೂರು, ನ.27: ತಿಂಗಳ ಸಂಬಳದಲ್ಲಿ ಜೀವನ ನಡೆಸುವವರಿಗೆ ಮತ್ತೊಂದು ಕಡೆಯಿಂದ ಆದಾಯ ಬರುತ್ತೆ ಎಂದರೆ ಯಾರಿಗೆ ಬೇಡ ಹೇಳಿ. ಅದರಲ್ಲೂ ಏನೂ ಶ್ರಮ ಪಡದೆ ಆದಾಯ ಸಿಗುತ್ತೆ, ಹಾಕಿದ ಹಣ ಡಬಲ್ ಆಗುತ್ತೆ ಎಂದರೆ ಬೇಗನೆ ನಂಬಿ ಬಿಡುತ್ತಾರೆ. ಮಧ್ಯಮ ವರ್ಗದ ಜನರ ಇಂಥ ಮೆಂಟಾಲಿಟಿಯನ್ನೇ ಹೈಜಾಕ್ ಮಾಡಿರುವ ದೇಶದ್ರೋಹಿಗಳು, ಸೈಬರ್ ವಂಚಕರು ಜನಸಮಾನ್ಯರನ್ನು ವಂಚಿಸಲು ಮತ್ತೊಂದು ತಂತ್ರ ಹೂಡಿದ್ದಾರೆ.

ಸಾಮಾಜಿಕ ಜಾಲತಾಣ ನೋಡುವವರಿಗೆ ಲೈಕ್, ಶೇರ್ ಮಾಡಿ ಎನ್ನುವುದು ಸಾಮಾನ್ಯ ಜ್ಞಾನ. ಆದರೆ ಈ ಲೈಕ್, ಶೇರ್ ಮಾಡುವುದರಲ್ಲೇ ಆದಾಯ ಬರುತ್ತೆ ಅಂದರೆ ಯಾರು ಬೇಡ ಅಂತಾರೆ ಬಿಡಿ. ಸೈಬರ್ ವಂಚಕರು ಇದೇ ತಂತ್ರವನ್ನು ಮುಂದಿಟ್ಟು ಹೊಸ ರೀತಿಯಲ್ಲಿ ಜನರನ್ನು ಯಾಮಾರಿಸಲು ಮುಂದಾಗಿದ್ದಾರೆ. ಎಲಾನ್ ಮಸ್ಕ್, ನರೇಂದ್ರ ಮೋದಿ, ಅಂಬಾನಿ ಹೀಗೆ ಪ್ರಭಾವಿಗಳ ಫೋಟೋವನ್ನು ಮುಂದಿಟ್ಟು ಕೆಲವು ವಿಡಿಯೋ ಕಂಟೆಂಟ್ ಲಿಂಕ್ ಕೊಡುತ್ತಾರೆ. ಫೇಸ್ಬುಕ್, ಇನ್ ಸ್ಟಾ ಅಥವಾ ಯೂಟ್ಯೂಬ್ ಹೀಗೆ ಯಾವುದಾದ್ರೂ ವಿಡಿಯೋ ಕಂಟೆಂಟ್ ಇರುವುದನ್ನು ಷೇರ್ ಮಾಡಲು, ಕಮೆಂಟ್ ಮಾಡಲು ಹೇಳುತ್ತಾರೆ. ಅದಕ್ಕೆ ಇಂತಿಷ್ಟು ಹಣ ಕೊಡುತ್ತೇವೆ ಎನ್ನುತ್ತಾರೆ.

Independence Day 2024: Narendra Modi becomes 3rd PM to deliver 11 speeches  after Nehru, Indira Gandhi | Latest News India - Hindustan Times

Mukesh Ambani has five critical milestones for Jio Financial Services -  BusinessToday

What Does Elon Musk Want? SpaceX CEO May Pose a Risk to National Security |  RAND

ಫೇಸ್ಬುಕ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಿದರೆ, ನಿಮ್ಮ ಎಲ್ಲ ಗೆಳೆಯರಿಗೂ ತಲುಪುತ್ತದೆ. ಅಷ್ಟೇ ಅಲ್ಲ, ಅವರೆಲ್ಲರ ಗೋಡೆಯಲ್ಲೂ ಕಾಣಿಸುತ್ತದೆ. ಗೆಳೆಯ ಏನೋ ಷೇರ್ ಮಾಡಿದ್ದಾನೆ ಅಂತ ವಿಡಿಯೋ ನೋಡದಿದ್ದರೂ ಮತ್ತೊಬ್ಬ ಲೈಕ್, ಷೇರ್ ಮಾಡುತ್ತಾನೆ. ಅಲ್ಲದೆ, ಇನ್ನೊಬ್ಬ ಗೆಳೆಯನಿಗೂ ಹೇಳಿ ಆತನಿಗೂ ಈ ಷೇರ್ ಲಿಂಕ್ ಮೂಲಕ ಪರ್ಯಾಯ ಹಣ ಹೊಂದಿಸುವ ಕೆಲಸವನ್ನೂ ಹೇಳಿಕೊಡುತ್ತಾನೆ. ಕೆಲವೊಮ್ಮೆ ಅದರಲ್ಲಿ ದೇಶದ್ರೋಹಿ ಕಂಟೆಂಟ್ ಇರುತ್ತದೆ. ದೇಶದ ವಿರುದ್ಧ ಬೇರೆ ಭಾಷೆಯಲ್ಲಿ ಬರೆದಿರುವ ಕಮೆಂಟ್ ಗಳನ್ನೂ ಪೋಸ್ಟ್ ಮಾಡಲು ಹೇಳುತ್ತಾರೆ. ಹಣ ಸಿಗುತ್ತದೆ ಎಂದು ಅದನ್ನೂ ಜನರು ಪೋಸ್ಟ್ ಮಾಡಿ ಅಪರಾಧದಲ್ಲಿ ಸಿಕ್ಕಿಬೀಳುವುದಿದೆ.

ಇದೇ ರೀತಿ ನೂರು ವಿಡಿಯೋ ಷೇರ್ ಮಾಡಿದರೆ, ಹತ್ತು ಸಾವಿರ ಕೊಡುತ್ತೇವೆಂದು ನಂಬಿಸುತ್ತಾರೆ. ಸಾಮಾನ್ಯ ಜನರು ಇದರ ಹಿಂದು- ಮುಂದು ಗೊತ್ತಿಲ್ಲದೆ ಷೇರ್ ಮಾಡಿ ಸಿಕ್ಕಿಬೀಳುತ್ತಾರೆ. ಕೆಲವೊಮ್ಮೆ ಮತ್ತಷ್ಟು ಲಿಂಕ್ ಕಳಿಸಿ, ಇನ್ನಷ್ಟು ಹಣ ಸಿಗೋದಾದರೆ ಷೇರ್, ಲೈಕ್ ಮಾಡ್ತೀವಿ ಎಂದೂ ಹೇಳುತ್ತಾರೆ. ಈ ರೀತಿ ಜನರ ವಿಶ್ವಾಸವನ್ನು ಗಳಿಸುವ ಇಂಥ ಸೈಬರ್ ವಂಚಕರು, ಅವರನ್ನೇ ದಾಳವನ್ನಾಗಿಸಿ ಮತ್ತಷ್ಟು ಜನರನ್ನು ವಿಡಿಯೋ ಷೇರ್, ಲೈಕ್ ಮಾಡಲು ಬಳಸಿಕೊಳ್ಳುತ್ತಾರೆ. ಇವರೆಲ್ಲರಿಂದಲೂ ಭಾರತದ ಮಧ್ಯಮವರ್ಗದ ಜನರು ದೇಶ ವಿರೋಧಿ ವಿಡಿಯೋ ಜೊತೆಗೆ ಸೈಬರ್ ವಂಚಕರ ಜಾಲಕ್ಕೂ ಸಂಪರ್ಕ ಆಗುತ್ತಾರೆ. ಅತಿ ಹೆಚ್ಚು ವಿಡಿಯೋ ಷೇರ್ ಮಾಡಿದವರಿಗೆ ಮೊದಲು ಹತ್ತು ಸಾವಿರ ಹಣವನ್ನೂ ಕೊಡುತ್ತಾರೆ. ಆನಂತರ. ಅವರಲ್ಲೇ ಇಂತಿಷ್ಟು ಹಣವನ್ನು ಡಿಪಾಸಿಟ್ ಇಡುವಂತೆ ಹೇಳುತ್ತಾರೆ. ಈ ವೇಳೆ, ಬ್ಯಾಂಕ್ ಖಾತೆ ಇನ್ನಿತರ ಮಾಹಿತಿಯನ್ನೂ ಪಡೆಯುತ್ತಾರೆ. ಆನಂತರ, ಏನೋ ನೆಪ ಹೇಳಿ 15-20 ಸಾವಿರ ಹಣ ಕೊಟ್ಟರೆ, ದೊಡ್ಡ ಮಟ್ಟದಲ್ಲಿ ಹಣ ಬರುವಂತಹ ಐಡಿಯಾ ಹೇಳಿಕೊಡುತ್ತೇವೆ ಎಂದು ನಂಬಿಸುತ್ತಾರೆ.

ಕೇವಲ ಲೈಕ್, ಷೇರ್ ನಿಂದಲೇ ಹಣ ಮಾಡಬಹುದಲ್ಲಾ ಎಂದು ಹೆಚ್ಚೆಚ್ಚು ಹಣ ಕಟ್ಟಲು ಹೋಗಿ ಬಕ್ರಾ ಆಗಿರುವ ಉದಾಹರಣೆ ಮಂಗಳೂರು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಳಕಿಗೆ ಬಂದಿದೆ. ಸೈಬರ್ ಅಪರಾಧ ಪ್ರಕರಣದಲ್ಲಿ ದೇಶ ವಿರೋಧಿ ವಿಡಿಯೋ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ, ಅಮಾಯಕರು ಸಿಕ್ಕಿಬಿದ್ದಿರುವ ನಿದರ್ಶನ ಇದೆ. ಹಾಗಂತ, ಅಪರಾಧ ಪ್ರಕರಣದಲ್ಲಿ ದೇಶ ವಿರೋಧಿ ವಿಡಿಯೋ ಷೇರ್ ಮಾಡಿದರೆ ಗೊತ್ತಿಲ್ಲದೆ ಮಾಡಿದೆ ಎನ್ನಲು ಆಗುವುದಿಲ್ಲ. ಯಾರೋ ಹಣ ಕೊಡುತ್ತಾರೆ ಎಂದು ವಿಡಿಯೋ ಷೇರ್ ಮಾಡಲು ಹೋಗಿ ಸಿಕ್ಕಿಬೀಳುವ ಅಪಾಯ ಎದುರಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಷೇರ್, ಲೈಕ್ ಮಾಡುವುದರಿಂದಲೂ ಅಪಾಯ ಇದೆ ಎಂದು ವಿವರಿಸುತ್ತಾರೆ, ಮಂಗಳೂರಿನ ಸೈಬರ್ ತಜ್ಞ ಅನಂತ ಪ್ರಭು.

Mangalore Cyber hackers can even hack your account details of you like and share videos.