ಬ್ರೇಕಿಂಗ್ ನ್ಯೂಸ್
28-11-24 09:58 pm Mangalore Correspondent ಕರಾವಳಿ
ಮಂಗಳೂರು, ನ.28: ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಮಟ್ಟದ ಸುವರ್ಣ ಸಂಭ್ರಮ ಪ್ರಶಸ್ತಿಗೆಂದು ಬೆಂಗಳೂರಿಗೆ ಕರೆಸಲ್ಪಟ್ಟು ಅಧಿಕಾರಿಗಳ ಎಡವಟ್ಟಿನಿಂದ ಅವಮಾನಕ್ಕೀಡಾಗಿದ್ದ ತೊಕ್ಕೊಟ್ಟಿನ ಸಮಾಜ ಸೇವಕ ಬಾಬು ಪಿಲಾರ್ ಅವರಿಗೆ ಕ್ಷೇತ್ರದ ಶಾಸಕ, ಸ್ಪೀಕರ್ ಯುಟಿ ಖಾದರ್ ಅವರು ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ನ.1ರ ರಾಜ್ಯೋತ್ಸವ ದಿನದಂದು ಬಾಬು ಪಿಲಾರ್ ಅವರನ್ನು ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿಗೆಂದು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬೆಂಗಳೂರಿಗೆ ಕರೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಬಾಬು ಪಿಲಾರ್ ಅವರನ್ನಲ್ಲ, ಅದು ಮಂಡ್ಯದ ಬಾಬು ಕಿಲಾರ್. ಅವರು ಪ್ರಶಸ್ತಿ ಪಡೆಯಲು ಬಂದಿದ್ದಾರೆ, ನಿಮ್ಮನ್ನು ಕರೆಸಿ ತಪ್ಪಾಗಿದೆ, ಕ್ಷಮಿಸಿ ಎಂದು ಬಾಬು ಪಿಲಾರ್ ಗೆ ಪ್ರಶಸ್ತಿ ನೀಡಲು ನಿರಾಕರಿಸಿದ್ದರು. ಇದರಿಂದ ತೀವ್ರ ಕಸಿವಿಸಿಗೊಂಡಿದ್ದ ಬಾಬು ಪಿಲಾರ್ ಅವರನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಕಾಪಿಕಾಡ್ ಸೇರಿದಂತೆ ಜೊತೆಗಿದ್ದವರು ಸಮಾಧಾನಿಸಿದ್ದರು. ಸ್ಪೀಕರ್ ಯುಟಿ ಖಾದರ್ ಕೂಡ ಅಧಿಕಾರಿಗಳಿಂದಾದ ಎಡವಟ್ಟಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
ಆನಂತರ, ವಿದೇಶ ಸುತ್ತಾಟದಲ್ಲಿದ್ದ ಯುಟಿ ಖಾದರ್ ಅವರು ಈಗ ಊರಿಗೆ ಮರಳಿದ್ದಾರೆ. ಗುರುವಾರ ಮಂಗಳೂರಿನ ಸರ್ಕಿಟ್ ಹೌಸ್ ಬಂಗಲೆಗೆ ಕರೆಸಿ ಬಾಬು ಪಿಲಾರ್ ಅವರನ್ನು ಜಿಲ್ಲಾ ಪ್ರಶಸ್ತಿಯ ಗೌರವ ನೀಡಿ ಸನ್ಮಾನಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ವಾರ್ತಾಧಿಕಾರಿ ಖಾದರ್ ಉಪಸ್ಥಿತರಿದ್ದರು. ಇದೇ ವೇಳೆ, ಈ ರೀತಿಯ ಎಡವಟ್ಟು ಯಾಕಾಯ್ತು ಎಂದು ಪತ್ರಕರ್ತರು ಸ್ಪೀಕರ್ ಅವರನ್ನು ಪ್ರಶ್ನೆ ಮಾಡಿದರು. ಏನೋ ಎಡವಟ್ಟು ಆಗಿದೆ, ಯಾರಿಂದಾಗಿ ಆಗಿದೆ, ಯಾರು ಇದಕ್ಕೆ ಹೊಣೆ ಎನ್ನುವ ಬಗ್ಗೆ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ. ಜಿಲ್ಲಾ ಪ್ರಶಸ್ತಿಗೂ ಇವರ ಹೆಸರು ಆಯ್ಕೆ ಮಾಡಲಾಗಿತ್ತು. ಅಂದು ಬೆಂಗಳೂರಿಗೆ ತೆರಳಿದ್ದರಿಂದ ಜಿಲ್ಲಾ ಪ್ರಶಸ್ತಿಯನ್ನೂ ಕೊಡಲು ಆಗಿರಲಿಲ್ಲ. ಈಗ ಕೊಡುತ್ತಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳ ಎಡವಟ್ಟು ಆಗಿದ್ದು ಹೇಗೆ ?
ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಎಂದು ರಾಜ್ಯದಾದ್ಯಂತ ನೂರು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕಾಗಿ ವಸುಂಧರಾಮೂರ್ತಿ ಎಂಬ ಹಿರಿಯ ಅಧಿಕಾರಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯನ್ನೂ ಮಾಡಲಾಗಿತ್ತು. ಆಯ್ಕೆ ಸಮಿತಿಯ ಪಟ್ಟಿಯಲ್ಲಿ ತೊಕ್ಕೊಟ್ಟಿನ ವಿಶಿಷ್ಟ ಸಮಾಜಸೇವಕ ಬಾಬು ಪಿಲಾರ್ ಅವರ ಹೆಸರೂ ಇತ್ತು. ಆದರೆ ಕೊನೆಗೆ ಪ್ರಕಟವಾದ ಪಟ್ಟಿಯಲ್ಲಿ ಬಾಬು ಕಿಲಾರ್ ಎಂದೇ ಹೆಸರು ಬಂದಿತ್ತು. ಆದರೆ, ಹೆಸರಿನ ಜೊತೆಗೆ ಫೋನ್ ನಂಬರ್ ಆಗಲೀ, ಅವರ ಊರನ್ನಾಗಲೀ ನಮೂದು ಮಾಡಿರಲಿಲ್ಲ.
ಪ್ರಶಸ್ತಿ ಪ್ರದಾನದ ಮುನ್ನಾದಿನ ಈ ಪಟ್ಟಿ ಪ್ರಕಟವಾಗಿದ್ದರಿಂದ ಅವರನ್ನೆಲ್ಲ ಕರೆಸುವ ಜವಾಬ್ದಾರಿಯೂ ಇದ್ದುದರಿಂದ ಅಧಿಕಾರಿಗಳು ತಡಬಡಾಯಿಸಿದ್ದರು. ಅಲ್ಲಿದ್ದ ಮಂಗಳೂರಿನ ಒಬ್ಬರು ಬಾಬು ಪಿಲಾರ್ ಅಂದರೆ, ನಮ್ಮೂರಿನವರು ಎಂದು ಅವರ ನಂಬರ್ ಕೊಟ್ಟಿದ್ದರು. ಇದನ್ನು ಪಡೆದ ಕನ್ನಡ ಸಂಸ್ಕೃತಿ ಇಲಾಖೆಯ ಬೆಂಗಳೂರಿನ ಅಧಿಕಾರಿಗಳು ಬಾಬು ಪಿಲಾರ್ ಅವರನ್ನು ಅರ್ಜೆಂಟಾಗಿಯೇ ಬರುವಂತೆ ಆಹ್ವಾನಿಸಿದ್ದರು. ಅದರಂತೆ, ಅವರಿಗೆ ಕುಮಾರಕೃಪಾ ಅತಿಥಿ ಬಂಗಲೆಯಲ್ಲಿ ಕೊಠಡಿಯನ್ನೂ ನೀಡಲಾಗಿತ್ತು. ಆದರೆ, ಮರುದಿನ ಮಧ್ಯಾಹ್ನ ಹೊತ್ತಿಗೆ ಬಾಬು ಕಿಲಾರ್ ಬರುತ್ತಿದ್ದಂತೆ ಪ್ರಮಾದ ಆಗಿರುವುದು ಗೊತ್ತಾಗಿತ್ತು.
Babu Pilar finally gets district award from speaker U T Khader in Mangalore. Social worker Babu Pilar experienced a bitter moment on the occasion of the 69th Karnataka Rajyotsava as he could neither accept the district honour nor the state award, despite being selected for both.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am