ಬ್ರೇಕಿಂಗ್ ನ್ಯೂಸ್
29-11-24 06:19 pm Mangalore Correspondent ಕರಾವಳಿ
ಮಂಗಳೂರು, ನ.29: ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ದಬ್ಬಾಳಿಕೆ, ಹಿಂದು ಮುಖಂಡರನ್ನು ಬಂಧಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ನಗರದ ಕ್ಲಾಕ್ ಟವರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಬಾಂಗ್ಲಾ ಸರಕಾರಕ್ಕೆ ಭಾರತದ ಕಡೆಯಿಂದ ಎಚ್ಚರಿಕೆ ರವಾನಿಸಬೇಕು, ಬಾಂಗ್ಲಾದ ಹಿಂದುಗಳ ರಕ್ಷಣೆಗಾಗಿ ಜಗತ್ತಿನಾದ್ಯಂತ ಇರುವ ಹಿಂದು ಸಮುದಾಯ ದನಿ ಎತ್ತಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ವಿಎಚ್ ಪಿ ಪ್ರಮುಖರಾದ ಡಾ.ಎಂ.ಬಿ. ಪುರಾಣಿಕ್, ಇಸ್ಕಾನ್ ಒಂದು ಧಾರ್ಮಿಕ ಸಂಘಟನೆಯಾಗಿದ್ದು ಧರ್ಮ ಭೇದ ಇಲ್ಲದೆ ಕೃಷ್ಣನ ಆಧ್ಯಾತ್ಮಿಕ ಸಂದೇಶವನ್ನು ಪ್ರಸಾರ ಮಾಡುತ್ತಿದೆ. ಭಾರತ ಮಾತ್ರವಲ್ಲದೆ, ಹಲವು ದೇಶಗಳಲ್ಲಿ ಇಸ್ಕಾನ್ ಶಾಖೆಗಳಿವೆ. ಸಾವಿರಾರು ವಿದೇಶಿಗರು ಇಸ್ಕಾನ್ ಭಕ್ತರಿದ್ದಾರೆ. ಆದರೆ, ಬಾಂಗ್ಲಾದಲ್ಲಿ ಅಸಹಿಷ್ಣುತೆ ಎಷ್ಟರ ಮಟ್ಟಿಗೆ ತಲುಪಿದೆ ಎಂದರೆ, ಅಲ್ಲಿ ಇಸ್ಕಾನ್ ಸಂಘಟನೆಯನ್ನೇ ನಿಷೇಧಿಸಲು ಮುಂದಾಗಿದ್ದಾರೆ.
ಹಿಂದುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ವಿರೋಧಿಸಿದ ಚಿನ್ಮಯ ಕೃಷ್ಣದಾಸ್ ಪ್ರಭು ಅವರನ್ನು ಬಾಂಗ್ಲಾ ಸರಕಾರ ಬಂಧಿಸಿದೆ. ಅವರೇನೂ ಮತಾಂತರ ಮಾಡಿಲ್ಲ, ಧರ್ಮ ವಿರೋಧಿ ಕೃತ್ಯ ಮಾಡಿಲ್ಲ. ಜನರನ್ನು ದಂಗೆಯೆಬ್ಬಿಸುವ ಕೃತ್ಯವನ್ನೂ ಮಾಡಿಲ್ಲ. ಹಿಂದುಗಳ ಮೇಲಿನ ಶೋಷಣೆ, ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೇ ಬಾಂಗ್ಲಾ ಸರಕಾರ ಅವರನ್ನು ಬಂಧನ ಮಾಡಿದೆ, ನಾವಿದನ್ನು ಖಂಡಿಸುತ್ತೇವೆ. ಅಷ್ಟೇ ಅಲ್ಲ, ವಿಶ್ವಾದ್ಯಂತ ಇರುವ ಹಿಂದುಗಳು ಈ ಘಟನೆಯನ್ನು ಖಂಡಿಸಬೇಕು ಎಂದು ಕರೆ ಕೊಡುತ್ತಿದ್ದೇವೆ.
ನೆರೆಯ ರಾಷ್ಟ್ರದಲ್ಲಿ ಅದರಲ್ಲೂ ಜಾತ್ಯತೀತ ಎಂದು ಕರೆಸಿಕೊಳ್ಳುವ ಬಾಂಗ್ಲಾದೇಶದಲ್ಲಿ ಇಂತಹ ಬೆಳವಣಿಗೆ ಆಗುತ್ತಿರುವಾಗ ಭಾರತ ಸರಕಾರ ಸುಮ್ಮನೆ ಕೂರುವಂತಿಲ್ಲ. ಭಾರತ ಸರಕಾರ, ಬಾಂಗ್ಲಾಕ್ಕೆ ಗಂಭೀರ ಎಚ್ಚರಿಕೆ ನೀಡಬೇಕು, ಜೊತೆಗೆ ಹಿಂದುಗಳ ಮೇಲೆ ದಬ್ಬಾಳಿಕೆ ಆಗದಂತೆ ನೋಡಿಕೊಳ್ಳಬೇಕು, ಬಾಂಗ್ಲಾದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ. ಇಸ್ಲಾಮಿಕ್ ಮತಾಂಧರಿಂದ ಬಾಂಗ್ಲಾ ನಲುಗುತ್ತಿದ್ದು, ಹಿಂದುಗಳ ರಕ್ಷಣೆಗಾಗಿ ಭಾರತ ಸರ್ಕಾರ ಧ್ವನಿಯೆತ್ತಬೇಕು. ಅಲ್ಪಸಂಖ್ಯಾತ ಹಿಂದುಗಳನ್ನು ದಮನಿಸಲು ಮುಂದಾಗಿರುವ ಬಾಂಗ್ಲಾ ಸರಕಾರವನ್ನು ಖಂಡಿಸಬೇಕು ಎಂದು ಪುರಾಣಿಕ್ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ಬಾಂಗ್ಲಾದಲ್ಲಿ ಹಿಂದುಗಳ ದಮನ ನೀತಿಯ ವಿರುದ್ಧ ನಾವು ಸರಣಿ ಪ್ರತಿಭಟನೆಗಳನ್ನು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲ ಸಾಧು, ಸಂತರನ್ನು ಒಳಗೊಳಿಸಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಮಂಗಳೂರಿನಲ್ಲಿ ಆಯೋಜಿಸುತ್ತೇವೆ ಎಂದು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಮಾಣಿಲ ಮೋಹನದಾಸ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ ಸೇರಿದಂತೆ ವಿಶ್ವ ಹಿಂದು ಪರಿಷತ್, ಬಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.
Violence in Bangladesh, VHP held protest in mangalore. Addressing the gathering, Puranik also stated that Indian government should won the Bangladesh government about the attacks on Hindus.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am