ಬ್ರೇಕಿಂಗ್ ನ್ಯೂಸ್
01-12-24 06:43 pm Mangalore Correspondent ಕರಾವಳಿ
ಮಂಗಳೂರು, ಡಿ.1: ಕಾಂತಾರ ಚಲನಚಿತ್ರವು ತುಳುನಾಡಿನ ದೈವಾರಾಧನೆಯನ್ನು ದೇಶ- ವಿದೇಶದ ಜನರಿಗೆ ತಲುಪಿಸಿದ್ದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ತುಳುನಾಡಿನ ದೈವಾರಾಧನೆ ಬಗ್ಗೆ ಪರ ರಾಜ್ಯಗಳ ಜನರಲ್ಲಿ ಕುತೂಹಲದ ದೃಷ್ಟಿ ಬೀರಿಸುವಂತೆ ಮಾಡಿದ್ದೂ ಅಷ್ಟೇ ಸತ್ಯ. ಆದರೆ, ಇದೇ ಚಿತ್ರದಿಂದಾಗಿ ಪಂಜುರ್ಲಿ ದೈವವನ್ನು, ದೈವಾರಾಧನೆ ಕಲೆಯನ್ನು ಕೆಲವರು ಅಣಕಿಸಲು ತೊಡಗಿದ್ದು ಮಾತ್ರ ಕಹಿಸತ್ಯ. ಬೆಂಗಳೂರು ಕಡೆಗಳಲ್ಲಿ ತುಳುನಾಡಿನ ದೈವಗಳ ರೀತಿ ಆವೇಶ ಬಂದು ಕುಣಿಯುವುದು, ಅಣಕಿಸುವುದನ್ನು ಮಾಡುತ್ತಿದ್ದಾರೆ.
ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ನ.30ರಂದು ಕನ್ನಡ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂತಾರ ಚಿತ್ರದ ರೀತಿಯಲ್ಲೇ ಎರಡು ಪಂಜುರ್ಲಿ ದೈವಗಳ ಪಾತ್ರಗಳನ್ನು ಸೃಷ್ಟಿಸಿ, ವಕ್ಫ್ ಸಚಿವ ಜಮೀರ್ ಅಹ್ಮದ್ ಅವರನ್ನು ದೈವಗಳು ಅಪ್ಪಿಕೊಂಡು ಕೈಹಿಡಿದು ಸಾಗುವಂತೆ ಚಿತ್ರಿಸಲಾಗಿದ್ದು, ಅದಕ್ಕೆ ಕಾಂತಾರ ಚಿತ್ರದಲ್ಲಿ ಅಳವಡಿಸಿದ್ದ ಕೊನೆಯ ಸನ್ನಿವೇಶದ ಸಂಗೀತವನ್ನು ಜೋಡಿಸಲಾಗಿದೆ. ಪಂಜುರ್ಲಿ ದೈವದ ಇಬ್ಬರು ಪಾತ್ರಧಾರಿಗಳು ಜಮೀರ್ ಅವರನ್ನು ಕೈಹಿಡಿದು ಮೇಲಕ್ಕೆತ್ತಿ ತಮ್ಮ ನಾಯಕ ಎಂದು ತೋರಿಸುತ್ತಿರುವ ಚಿತ್ರಣ ಇದೆ. ಅಲ್ಲದೆ, ಶಾಸಕ ಜಮೀರ್ ಅಹ್ಮದ್ ಅವರ ಪರವಾಗಿ ಕರತಾಡನವೂ ಕೇಳಿಬರುತ್ತಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ವಿರೋಧವೂ ಕೇಳಿಬಂದಿದೆ. ಸ್ವತಃ ಜಮೀರ್ ಅಹ್ಮದ್ ಹೆಸರಿನಲ್ಲಿ ಇರುವ ಫೇಸ್ಬುಕ್ ಪೇಜ್ ನಲ್ಲಿ ಈ ವಿಡಿಯೋ ಹಾಕಲಾಗಿದೆ. ಇದೇ ವಿಡಿಯೋವನ್ನು ಇತರೇ ಕೆಲವು ತುಳುನಾಡಿನ ಜನರ ಫೇಸ್ಬುಕ್ ಪೇಜ್ ಗಳಲ್ಲಿ ಹಂಚಲಾಗಿದ್ದು, ಈ ರೀತಿ ಮಾಡಿದ್ದು ಎಷ್ಟು ಸರಿ, ಇದು ದೈವಾರಾಧನೆಯ ಅಣಕ ಅಲ್ಲವೇ ಎಂದು ಜನರು ಪ್ರಶ್ನೆ ಮಾಡಿದ್ದಾರೆ.
Tulu Histroy ಎನ್ನುವ ಟ್ವಿಟರ್ ಪೇಜ್ ನಲ್ಲಿ ಈ ವಿಡಿಯೋ ಷೇರ್ ಮಾಡಿದ್ದಲ್ಲದೆ, ತುಳುನಾಡಿನ ದೈವಾರಾಧನೆಯ ಅಣಕ ಆಗುತ್ತಿದ್ದು ತುರ್ತಾಗಿ ತುಳುವ ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ಕೆಲಸ ಆಗಬೇಕೆಂದು ಒತ್ತಾಯಿಸಲಾಗಿದೆ. ದೈವಾರಾಧನೆ ಎನ್ನುವುದು ತುಳುನಾಡಿನ ಪವಿತ್ರ ಆರಾಧನಾ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಇದರ ಬಗ್ಗೆ ಅರಿವಿಲ್ಲದವರು ದೈವಗಳ ವೇಷ ಧರಿಸಿ ಅಣಕಿಸುವ ಕೃತ್ಯ ಮಾಡುತ್ತಿದ್ದಾರೆ. ದೈವಗಳ ವೇಷ ಧರಿಸಿ ಕುಣಿಯುವುದು, ಅದೇ ರೀತಿ ಅನುಕರಿಸುತ್ತಿರುವುದರಿಂದ ನಮ್ಮ ಭಾವನೆಗಳಿಗೆ ಪೆಟ್ಟು ಬಿದ್ದಿದ್ದು, ಈ ಬಗ್ಗೆ ತಕ್ಷಣ ಗಂಭೀರ ಕ್ರಮ ಕೈಗೊಳ್ಳಬೇಕಾಗಿದೆ.
ಇದಕ್ಕಾಗಿ ಸರಕಾರದ ಮಟ್ಟದಲ್ಲಿ ತುಳುನಾಡಿನ ಸಂಸ್ಕೃತಿ ಉಳಿಸುವುದಕ್ಕಾಗಿ ಮಂಡಳಿ ರಚಿಸಬೇಕಾಗಿದ್ದು, ಅದರ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ. ಅಲ್ಲದೆ, ದೈವಾರಾಧನೆ ಕಲೆಯ ರಕ್ಷಣೆಗಾಗಿ ಪ್ರತ್ಯೇಕ ಕಾಯ್ದೆ (Daivaradhane protection Act) ತರುವಂತೆಯೂ ಆಗ್ರಹ ಮಾಡಲಾಗಿದೆ. ತುಳುನಾಡಿನ ಸಂಸ್ಕೃತಿ, ಆರಾಧನಾ ಕಲೆಗಳಿಗೆ ಧಕ್ಕೆಯಾದರೆ ಅದನ್ನು ಪ್ರಶ್ನಿಸುವ ಮತ್ತು ಅಂಥವರಿಗೆ ಶಿಕ್ಷಿಸಲು ಕಾನೂನು ರೀತ್ಯ ಮಾನ್ಯತೆ ಸಿಗಬೇಕಾಗಿದೆ. ಇದರಿಂದ ಪರ ಊರಿನಲ್ಲಿ ಜನರು ತುಳುನಾಡಿನ ದೈವಗಳ ಬಗ್ಗೆ ಅಣಕ ಮಾಡುವುದನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದು ಅಭಿಪ್ರಾಯ ಮುಂದಿಡಲಾಗಿದೆ.
ಕಾಂತಾರ ಸಿನಿಮಾ ಬಂದ ಬಳಿಕ ಇದೇ ರೀತಿ ದೈವಗಳ ವೇಷ ಧರಿಸಿ ಅಣಕವಾಡಿದ ಪ್ರಸಂಗ ಹಲವು ಬಾರಿ ನಡೆದಿದೆ. ಇದೀಗ ಒಬ್ಬ ರಾಜಕಾರಣಿಯನ್ನು ಮುಂದಕ್ಕೊಡ್ಡಿದ್ದು, ಅದಕ್ಕೆ ಚಿತ್ರದ ಸಂಗೀತ ಅಳವಡಿಸಿ ಹೆಜ್ಜೆ ಹಾಕಿಸುವ ಮೂಲಕ ಆಕರ್ಷಣೆ ಮೂಡಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಪರ – ವಿರೋಧ ಟೀಕೆ, ಟಿಪ್ಪಣಿ ಕೇಳಿಬಂದಿದೆ.
*Urgent Call to Action: Protecting the Cultural Heritage of Tulu Nadu*
— Tulu History (@History_Tulu) December 1, 2024
It is with great dismay that we witness the blatant disrespect and mockery of Daiva beliefs, an integral part of the cultural heritage of Tulu Nadu. The recent actions of Minister @BZZameerAhmedK are a stark… pic.twitter.com/3Rs9aG6EyM
Zameer Ahmed Khan video with daiva in Bangalore sparks controversy. It is with great dismay that we witness the blatant disrespect and mockery of Daiva beliefs, an integral part of the cultural heritage of Tulu Nadu. The recent actions of Minister Zameer are a stark reminder of the urgent need to protect and preserve our cultural traditions says one of the tweets on social media.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am