ಬ್ರೇಕಿಂಗ್ ನ್ಯೂಸ್
02-12-24 03:49 pm Mangalore Correspondent ಕರಾವಳಿ
ಮಂಗಳೂರು, ಡಿ.2 : ನಗರದ ಮಲ್ಲಿಕಟ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರೇ ಹೊಡೆದಾಟ ನಡೆಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಪಕ್ಷದ ಹಿರಿಯ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಗ್ರಾಪಂ ಉಪ ಚುನಾವಣೆಯಲ್ಲಿ ಗೆದ್ದ 24 ಕಾಂಗ್ರೆಸ್ ಮುಖಂಡರಿಗೆ ಸನ್ಮಾನಿಸುವ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ನಡೆದಿತ್ತು. ಈ ವೇಳೆ, ಕೆಲವು ನಾಯಕರು ಅರ್ಜೆಂಟ್ ಹೋಗಲಿಕ್ಕಿದೆ, ತುರ್ತಾಗಿ ಕಾರ್ಯಕ್ರಮ ಮುಗಿಸಬೇಕು ಎಂದು ಹೇಳುತ್ತಿದ್ದರು. ಇದರಿಂದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ನಿಂತುಕೊಂಡಿದ್ದಲ್ಲಿಗೇ ಕೊರಳಿಗೆ ಹಾರ ಹಾಕಿ ಸನ್ಮಾನಿಸಲು ಮುಂದಾಗಿದ್ದರು. ಈ ವೇಳೆ, ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ ನಿಂತುಕೊಂಡಿದ್ದಲ್ಲಿಗೆ ಸನ್ಮಾನ ಮಾಡುವುದು ಸರಿಯಲ್ಲ. ಕುಳಿತುಕೊಳ್ಳಿಸಿ ಸನ್ಮಾನ ಮಾಡುವಂತೆ ಒತ್ತಾಯ ಮಾಡಿದ್ದು ಕುರ್ಚಿಗಳನ್ನು ತಂದಿರಿಸಿದ್ದಾರೆ. ಇದು ಹರೀಶ್ ಕುಮಾರ್ ಅವರನ್ನು ಸಿಟ್ಟಾಗಿಸಿದ್ದು ಜೋರು ಮಾತನಾಡಿದ್ದು ಮಾತಿನ ಚಕಮಕಿಯಾಗಿದೆ. ಈ ವೇಳೆ, ಚಂದ್ರಪ್ರಕಾಶ್ ಶೆಟ್ಟಿ ಮೇಲೆ ಹರೀಶ್ ಕುಮಾರ್ ಕೈ ಮಾಡಿದ್ದು ಕೆನ್ನೆಗೆ ಹೊಡೆದಿದ್ದಾರೆಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.
ಇದರಿಂದ ಸಿಟ್ಟುಗೊಂಡ ಪ್ರಕಾಶ್ ಶೆಟ್ಟಿ ಪ್ರತಿ ದಾಳಿಗೆ ಮುಂದಾಗಿದ್ದು ಸ್ಥಳದಲ್ಲಿದ್ದ ಮಿಥುನ್ ರೈ ಮತ್ತಿತರರು ಹಿಡಿದು ನಿಲ್ಲಿಸಿದ್ದಾರೆ. ಅಲ್ಲದೆ, ಕೆಲಕಾಲ ಎರಡೂ ಕಡೆಯ ಬಣದ ಸದಸ್ಯರು ಹೊಯ್ ಕೈ ನಡೆಸಿದ್ದು ಕಾಂಗ್ರೆಸ್ ಕಚೇರಿ ಒಳಗಡೆ ಒಂದು ಕ್ಷಣ ಗಲಾಟೆಯೇ ಆಗಿಹೋಗಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ಅಲ್ಲಿಂದ ಹೊರಬಂದು ಹರೀಶ್ ಕುಮಾರ್ ಬಗ್ಗೆ ಇತರೇ ಮುಖಂಡರಲ್ಲಿ ಹೇಳಿ ಬೈಯುತ್ತಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಎರಡೂ ಕಡೆಯ ಮುಖಂಡರು ಬಳಿಕ ಉಭಯರನ್ನು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ. ಬಳಿಕ ಕಾಂಗ್ರೆಸ್ ಕಚೇರಿಗೆ ಎಸಿಪಿ ಥೋರಟ್ ಸೇರಿದಂತೆ ಪೊಲೀಸರು ಭೇಟಿ ನೀಡಿದ್ದು ಮಾಹಿತಿ ಸಂಗ್ರಹಿಸಿದ್ದಾರೆ.
ಕಚೇರಿಯಿಂದ ಹೊರಬಂದ ಪ್ರಕಾಶ್ ಶೆಟ್ಟಿ, ಹಲ್ಲೆ ಆದ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಲಿಲ್ಲ. ಜಿಲ್ಲಾಧ್ಯಕ್ಷರ ಬಗ್ಗೆ ಕೇಳಿದ್ದಕ್ಕೆ, ಬದಲಾವಣೆ ಮಾಡಬೇಕೆಂಬ ಒತ್ತಾಯ ಇದೆ. ಕೆಪಿಸಿಸಿ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದರು. ಮಿಥುನ್ ರೈ ಬಳಿ ಈ ಬಗ್ಗೆ ಕೇಳಿದಾಗ, ಹಲ್ಲೆಯೇನೂ ಆಗಿಲ್ಲ. ಗ್ರಾಪಂ ಉಪ ಚುನಾವಣೆ ಗೆದ್ದವರನ್ನು ಸನ್ಮಾನಿಸಲಾಗಿದೆ. ಜಿಲ್ಲಾಧ್ಯಕ್ಷರ ಬದಲಾವಣೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದರು.
ಕೊನೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಲ್ಲಿ ಕೇಳಿದಾಗ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸೂಚನೆಯಂತೆ ಗ್ರಾಪಂ ಸದಸ್ಯರಿಗೆ ಸನ್ಮಾನ ಮಾಡಲಾಗಿದೆ. ಈ ವೇಳೆ, ಪಕ್ಷದ ಕಾರ್ಯಕರ್ತರ ಒಳಗೆ ಅಸಮಾಧಾನ ಉಂಟಾಗಿದ್ದು ಅದನ್ನು ನಾವು ಬಗೆಹರಿಸಿಕೊಂಡಿದ್ದೇವೆ. ಬೇರೇನೂ ಅಹಿತಕರ ಘಟನೆ ಆಗಿಲ್ಲ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎರಡು ವರ್ಷಗಳ ಹಿಂದೆಯೇ ರಾಜಿನಾಮೆ ನೀಡಿದ್ದೇನೆ. ಬೇರೆಯವರನ್ನು ಆಯ್ಕೆ ಮಾಡಿಲ್ಲ. ಇದನ್ನು ರಾಜ್ಯ ನಾಯಕರು ನಿರ್ಧರಿಸುತ್ತಾರೆ ಎಂದಿದ್ದಾರೆ.
Congress leaders Assult fight, president Harish Kumar assults Chandraprakash Shetty at congress office in Mangalore over honouring Congress leaders. Later ACP and kadri police intervened the office.
04-02-25 11:32 pm
HK News Desk
Bangalore RTO, Luxury car tax: ತೆರಿಗೆ ಪಾವತಿಸದ...
04-02-25 11:04 pm
Two-wheeler rider fined, Bangalore Traffic: ಎ...
04-02-25 03:09 pm
Cow theft, Mankal Vaidya: ಇನ್ಮುಂದೆ ಗೋಹತ್ಯೆ ನಡ...
04-02-25 12:59 pm
Mandya Car Canal Accident, Hassan Drowning: ಮ...
03-02-25 10:38 pm
04-02-25 10:49 pm
HK News Desk
Rashtrapati Bhavan, Poonam Gupta; ಜಗತ್ತಿನ ಎರಡ...
04-02-25 05:34 pm
Rail projects, Budget, Karnataka: ರೈಲ್ವೇಗೆ 2....
03-02-25 11:01 pm
Conspiracy, Kumbh stampede: ಮಹಾ ಕುಂಭಮೇಳದಲ್ಲಿ...
03-02-25 02:57 pm
NHAI fined toll tax: ಅಂಗವಿಕಲ ಮಹಿಳೆಗೆ 40 ರೂ. ಟ...
01-02-25 09:51 pm
04-02-25 07:47 pm
Mangalore Correspondent
U T Khader, Mangalore: ವಿಧಾನಸೌಧಕ್ಕೆ ನಾಯಿ ಕಾಟ...
03-02-25 07:38 pm
Mangalore coast Gaurd, NMPT: ತಿಳಿನೀಲ ಸಮುದ್ರದಲ...
02-02-25 09:49 pm
Kotekar Bank Robbery, Shashi Tevar, update: ಬ...
02-02-25 05:02 pm
Air India Express, Mangalore Delhi flight: ಮಂ...
01-02-25 07:47 pm
03-02-25 05:46 pm
Mangalore Correspondent
Bangalore honeytrap case, Crime: ಮದುವೆಗೆ ವಧು...
02-02-25 09:00 pm
Mangalore Crime, Bantwal Toll, Kodikere Gang:...
01-02-25 10:11 pm
Attack on Bus, Hassan, Crime: ಬೆಂಗಳೂರಿನಿಂದ ಮಂ...
31-01-25 10:22 am
Mangalore court, Rape, Crime: 15 ವರ್ಷದ ಬಾಲಕಿ...
30-01-25 11:37 am