ಬ್ರೇಕಿಂಗ್ ನ್ಯೂಸ್
02-12-24 05:42 pm Mangalore Correspondent ಕರಾವಳಿ
ಮಂಗಳೂರು, ಡಿ.2: ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತದ ಎಫೆಕ್ಟ್ ಕರ್ನಾಟಕದ ಕರಾವಳಿಯಲ್ಲೂ ಕಾಣಿಸಿಕೊಂಡಿದೆ. ಮಂಗಳೂರಿನಲ್ಲಿ ಸಂಜೆಯಾಗುತ್ತಲೇ ಭಾರೀ ಮಳೆಯಾಗಿದ್ದು, ನೋಡ ನೋಡುತ್ತಲೇ ರಸ್ತೆಗಳು ಮಳೆಗಾಲದ ರೀತಿ ತುಂಬಿಕೊಂಡಿವೆ. ಕತ್ತಲು ಆವರಿಸುವ ಮುನ್ನವೇ ಬಾನಲ್ಲಿ ಆವರಿಸಿದ ಕಪ್ಪು ಮೋಡಗಳು ಬಿಸಿಲನ್ನು ಓಡಿಸಿದ್ದು, ಜನಮಾನಸದಲ್ಲಿ ಕತ್ತಲನ್ನು ಮೂಡಿಸಿದೆ.
ಚಂಡಮಾರುತದ ಕಾರಣದಿಂದಾಗಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಹೊತ್ತಿಗೆ ಕೆಲವೊಂದು ತುಂತುರು ಮಳೆ ಬಿದ್ದರೂ, ಜೋರು ಮಳೆಯ ಲಕ್ಷಣ ಕಾಣಿಸಲಿಲ್ಲ. ಸಂಜೆ ನಾಲ್ಕು ಮೂವತ್ತು ಕಳೆದೊಡನೆ ಒಂದೇ ಸಮನೆ ಮಳೆ ಸುರಿದಿದ್ದು, ಧೋ ಎಂದು ಅಬ್ಬರಿಸಿದೆ. ಒಡನೆಯೇ ಸಿಡಿಲು, ಮಿಂಚು ಕೂಡ ಮಾರ್ದನಿಸಿದ್ದು, ಕರಿಗತ್ತಲ ಮೋಡಗಳು ಕತ್ತಲಾಗದಿದ್ದರೂ ಕತ್ತಲನ್ನು ತಂದಿಟ್ಟಿದೆ.





ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಡಿ.2ರಿಂದ 3ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರು ಜಾಗ್ರತೆ ಇರುವಂತೆ ಸೂಚಿಸಿದೆ. ಅಲ್ಲದೆ, ಡಿ.2ರಿಂದ 6ರ ವರೆಗೆ ಸಮುದ್ರ ಪ್ರಕ್ಷುಬ್ಧವಾಗಲಿದ್ದು, ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಿದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಡಿ.3, 4ರ ನಡುವೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು. ಅದಕ್ಕೂ ಮೊದಲೇ ಮಳೆ ಆವರಿಸಿಕೊಂಡಿದೆ.
ಮಂಗಳೂರಿನಲ್ಲಿ ಸಂಜೆ ಹೊತ್ತಿಗೆ ಏಕಾಏಕಿ ಮಳೆಯಾಗಿದ್ದರಿಂದ ಜನರು ಕೊಡೆ, ರೈನ್ ಕೋಟ್ ಇಲ್ಲದೆ ಪರದಾಡಿದ್ದಾರೆ. ಪಕ್ಕದ ಕಾಸರಗೋಡು ಜಿಲ್ಲೆಯ ಕೆಲವು ಭಾಗದಲ್ಲಿ ಮಧ್ಯಾಹ್ನವೇ ಭಾರೀ ಮಳೆಯಾಗಿದ್ದು, ಕುಂಬಳೆಯ ಹೊಸ ಹೆದ್ದಾರಿಯಲ್ಲಿ ಮಳೆ ನೀರು ತುಂಬಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ, ಶಾಲಾ ಮೈದಾನಗಳಲ್ಲಿ, ಕೆಲವು ಮನೆಗಳ ಒಳಗೆ ಮತ್ತು ಕೃಷಿ ಜಮೀನುಗಳಿಗೆ ನೀರು ನುಗ್ಗಿರುವುದು ವಿಡಿಯೋ ವೈರಲ್ ಆಗಿದೆ.
Fengal cyclone in Tamil Nadu, heavy rain in Mangalore with thunder, and lightning. The India Meteorological Department (IMD) issued a red alert for four districts in Kerala on Sunday, December 1, 2024, forecasting extremely heavy rainfall for December 2. Malappuram, Kozhikode, Wayanad, and Kannur are expected to receive over 20 cm of rain within 24 hours, prompting concerns about flooding and landslides in these regions.
10-06-26 10:40 pm
HK News Desk
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
10-06-26 01:48 pm
HK News Staffer
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm
Mangalore Blackmail, crime, Honeytrap: ಸಲಿಂಗಕ...
09-06-26 10:26 am
ಬಂಟ, ಬಿಲ್ಲವ ಜಾತಿಗಳ ಬಗ್ಗೆ ಅವಹೇಳನ ಹೇಳಿಕೆ ; ಸಾಮಾ...
08-06-26 11:10 pm