ಬ್ರೇಕಿಂಗ್ ನ್ಯೂಸ್
14-12-20 02:11 pm Mangalore Correspondent ಕರಾವಳಿ
ಮಂಗಳೂರು, ಡಿ.13 : ಏಷ್ಯಾದ ಅತಿ ಸುಂದರ ದ್ವೀಪ ರಾಷ್ಟ್ರಗಳಲ್ಲಿ ಒಂದಾದ ಮಾಲ್ದೀವ್ಸ್ ದ್ವೀಪ ಸಮೂಹಕ್ಕೆ ಮಂಗಳೂರು ಹಳೆ ಬಂದರಿನಿಂದ ಇದೇ ಮೊದಲ ಬಾರಿಗೆ ಸರಕು ಸಾಗಾಟ ನೌಕೆ ಹೊರಟಿದೆ.
ವಿವಿಧ ತರಕಾರಿ, ಹಣ್ಣು ಹಂಪಲು, ಕೃಷಿ, ತೋಟಕ್ಕೆ ಬಳಸುವ ಗೊಬ್ಬರ, ತೆಂಗಿನ ಗೆರಟೆ ಹುಡಿ ಸೇರಿ ವಿವಿಧ ಉತ್ಪನ್ನಗಳನ್ನು ನೌಕೆಯಲ್ಲಿ ಹೊತ್ತು ಸಾಗಿದೆ. ಇದಕ್ಕೂ ಮುನ್ನ ಕ್ರೇನ್‌ಗಳ ಮೂಲಕ ಸಾಮಗ್ರಿಗಳನ್ನು ಲೋಡಿಂಗ್ ಮಾಡಲಾಯಿತು.
ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರೀನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳುತ್ತಿದ್ದಾರೆ. ಲಕ್ಷದ್ವೀಪದ ಕಡಂಬತ್ತ್‌ಕಾರ್‌ಗೆ ಸೇರಿದ ಎಂಎಸ್‌ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಮಂಗಳೂರಿನ ಚರಣ್‌ದಾಸ್ ವಿ. ಕರ್ಕೇರ ಬಾಡಿಗೆಗೆ ಪಡೆದಿದ್ದು ಸಾಮಾನು ಸರಂಜಾಮು ಸಾಗಾಟ ಮಾಡಲು ಯೋಜನೆ ಹಾಕಿದ್ದಾರೆ.
ನೌಕೆಯನ್ನು ಮಾಸಿಕ ಐದು ಲಕ್ಷ ರೂ. ಬಾಡಿಗೆಗೆ ಪಡೆದಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡುವ ಯೋಜನೆಯಿದೆ. ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದ ಬಳಿಕ ಸಾಗಾಟ ಆರಂಭಿಸಲಿದೆ. ಈ ನೌಕೆಯು ನಾಲ್ಕೈದು ದಿನಗಳಲ್ಲಿ ತಲುಪಿ, ಮಾಲ್ದೀವ್ಸ್ ಜೆಟ್ಟಿಯಲ್ಲಿ ಅನ್‌ಲೋಡ್ ಮಾಡಿ ಮರಳಿ ಬರಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಒಂದು ನೌಕೆ ಮಾಲ್ದೀವ್ಸ್‌ಗೆ ಹೋಗಿದ್ದರೂ ಅದು ಗುರಿ ತಲುಪಿರಲಿಲ್ಲ. ಅದರಲ್ಲಿದ್ದ ಸಾಮಾನು ಸರಂಜಾಮು ಸಮುದ್ರ ಪಾಲಾಗಿತ್ತು. ಈ ವರ್ಷ ಅಕ್ಟೋಬರ್‌ನಲ್ಲಿ ನೌಕೆ ಹೊರಡಬೇಕಿತ್ತು. ಆದರೆ ಕೋವಿಡ್ ಮತ್ತಿತರ ಕಾರಣಗಳಿಂದ ಸ್ವಲ್ಪ ತಡವಾಗಿದೆ. ಸುಮಾರು 200 ಟನ್ ಸರಕು ಸಾಗಾಟ ಮಾಡಲಾಗುತ್ತಿದೆ ಎಂದು ನೌಕೆಗೆ ತರಕಾರಿ, ಹಣ್ಣು ಹಂಪಲು ಲೋಡಿಂಗ್ ಮಾಡಿದ ಮಲ್ಲೂರಿನ ಇಬ್ರಾಹಿಂ ಮತ್ತು ಸತ್ತಾರ್ ತಿಳಿಸಿದರು.
ಏಷ್ಯಾದ ಹನಿಮೂನ್ ಸ್ಪಾಟ್ ಮಾಲ್ದೀವ್ಸ್ !!
ಮಾಲ್ದೀವ್ಸ್ ದ್ವೀಪ ಸಮೂಹ ಪ್ರವಾಸಿಗರಿಗೆ ಹೇಳಿಮಾಡಿಸಿದ ತಾಣ. ಅಲ್ಲಿನ ನೀರ ಮೇಲಿನ ಕೋಟೇಜ್ ಸೌಲಭ್ಯ ಏಷ್ಯಾದಲ್ಲೇ ಅತಿ ಸುಂದರ ಎಂಬ ಖ್ಯಾತಿ ಪಡೆದಿದೆ. ಆದರೆ, ಆಹಾರ ವಸ್ತುಗಳು, ತರಕಾರಿ, ಹಣ್ಣುಗಳ ಲಭ್ಯತೆ ಇಲ್ಲ. ಭಾರತ ಅಥವಾ ಶ್ರೀಲಂಕಾದಿಂದ ಸಾಗಾಟ ಮಾಡಿಯೇ ಆಗಬೇಕು. ಭಾರತದ ದಕ್ಷಿಣ ತುದಿಯಿಂದ 700 ಕಿಮೀ ದೂರದಲ್ಲಿ ಹಿಂದು ಮಹಾಸಾಗರದ ಮಧ್ಯೆ ಈ ದ್ವೀಪ ಸಮೂಹಗಳಿವೆ. ಏಷ್ಯಾದ ಅತಿ ಸಣ್ಣ ದ್ವೀಪ ದೇಶ ಎಂಬ ಖ್ಯಾತಿಯೂ ಇದಕ್ಕಿದೆ. ಬಾಲಿವುಡ್ ಚಿತ್ರತಾರೆಯರು ಹೆಚ್ಚಾಗಿ ಇಲ್ಲಿಗೆ ಪ್ರವಾಸ ಹೋಗುತ್ತಾರೆ.
The first cargo ship to the Maldives from Mangalore old port will sail with fruits, vegetables, and organic manure. Contractor Charandas Karkera has hired the cargo. There is a high demand for organic manure in the Maldives for the coconut and other agriculture farms on the island.
06-01-25 06:53 pm
HK News Desk
Bangalore Suicide, Software engineer family:...
06-01-25 02:03 pm
HMPV virus Karnataka, Guidelines: ಹೆಚ್ಎಂಪಿವ...
06-01-25 01:39 pm
ಬೆಂಗಳೂರಿನಲ್ಲಿ ಎರಡು ಶಿಶುಗಳಲ್ಲಿ ಎಚ್ಎಂಪಿವಿ ವೈರಸ್...
06-01-25 01:04 pm
Bangalore News, IIM College Bangalore: ಹಾಸ್ಟೆ...
06-01-25 01:01 pm
05-01-25 09:41 pm
HK News Desk
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
06-01-25 08:04 pm
Mangalore Correspondent
Naxal Surrender, Vikram Gowda, Mangalore: ವಿಕ...
06-01-25 03:59 pm
Mangalore, Kotekar Samaja Seva Sahakari Sangh...
05-01-25 10:51 pm
Dr Na DSouza passes, Death, Mangalore: ಖ್ಯಾತ...
05-01-25 10:16 pm
Mangalore MP Brijesh Chowta, Rajnath Singh: ರ...
05-01-25 02:13 pm
06-01-25 05:37 pm
HK News Desk
Mangalore Robbery, Singari Beedi owner, Crime...
04-01-25 11:31 am
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm