ಬ್ರೇಕಿಂಗ್ ನ್ಯೂಸ್
04-12-24 10:20 pm Mangalore Correspondent ಕರಾವಳಿ
ಮಂಗಳೂರು, ಡಿ.4: ಮತಾಂಧ ಮನಸ್ಥಿತಿ ಹೆಚ್ಚಾದರೆ ಯಾವ ಸ್ಥಿತಿಯಾಗುತ್ತದೆ ಎನ್ನುವುದಕ್ಕೆ ಬಾಂಗ್ಲಾ ಸ್ಥಿತಿಯೇ ನಿದರ್ಶನ. ಮೀಸಲಾತಿಯ ವಿಚಾರದಲ್ಲಿ ಆರಂಭಗೊಂಡಿದ್ದ ಪ್ರತಿಭಟನೆ ಪ್ರಧಾನಿ ಶೇಕ್ ಹಸೀನಾ ಹೊರಬಿದ್ದೊಡನೆ ಹಿಂದುಗಳ ಮೇಲೆ ತಿರುಗಿತ್ತು. ಬಾಂಗ್ಲಾದಿಂದಲೇ ಹಿಂದುಗಳನ್ನು ಹೊರಕ್ಕಟ್ಟುವ ಯತ್ನ ಮಾಡುತ್ತಿದ್ದಾರೆ. ಆರು ತಿಂಗಳಲ್ಲಿ 80ಕ್ಕೂ ಹೆಚ್ಚು ದೇವಸ್ಥಾನಗಳನ್ನು ಲೂಟಿ ಮಾಡಿದ್ದಾರೆ. ಹಿಂದುಗಳ ಮೇಲೆ ಎರಡು ಸಾವಿರಕ್ಕೂ ಹೆಚ್ಚು ದಾಳಿಗಳಾಗಿದ್ದು ಅವರ ಆಸ್ತಿಗಳನ್ನು ಕಬಳಿಸುತ್ತಿದ್ದಾರೆ. ಹಿಂದು ಮೌನವಾಗಿದ್ದರೆ, ಇದೇ ರೀತಿಯ ಸ್ಥಿತಿ ಭಾರತದಲ್ಲೂ ಆದೀತು ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿ ನಗರದ ಕ್ಲಾಕ್ ಟವರ್ ನಲ್ಲಿ ರಸ್ತೆ ತಡೆದು ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಇಸ್ಕಾನ್ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ನಡೆಸಿ, ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯ ಬಳಿಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ವಿರೋಧಿಸಿ ಇಸ್ಕಾನ್ ಸಂಸ್ಥೆಯ ಚಿನ್ಮಯಾನಂದ ಸ್ವಾಮಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಾಂಗ್ಲಾ ಧ್ವಜದ ಜೊತೆಗೆ ಕೇಸರಿ ಧ್ವಜವನ್ನು ಹಾಕಿದ್ದಾರೆ ಎಂಬ ಕಾರಣಕ್ಕೆ ಚಿನ್ಮಯಾನಂದ ಸ್ವಾಮಿ ವಿರುದ್ಧ ದೇಶದ್ರೋಹದ ಕೇಸು ಹಾಕಿದ್ದಾರೆ. ಬಾಂಗ್ಲಾದ ರಾಷ್ಟ್ರಗೀತೆಯನ್ನು ಬರೆದು ರವೀಂದ್ರನಾಥ ಠಾಗೋರ್ ಅವರ ಪ್ರತಿಮೆ ಹಾಳುಗೆಡವಿದ ಮತಾಂಧರ ಮೇಲೆ ಕೇಸು ಹಾಕಿಲ್ಲ.
2047ಕ್ಕೆ ಭಾರತವನ್ನು ಇಸ್ಲಾಂ ಮಾಡಬೇಕೆಂಬ ಅಜೆಂಡಾ ಇಟ್ಟುಕೊಂಡು ದಾಳಿ ನಡೆಸುತ್ತಿದ್ದಾರೆ. ನೆರೆದೇಶಗಳಾದ ಬರ್ಮಾ, ಮಾಲ್ದೀವ್ಸ್ ನಮ್ಮ ಪರವಾಗಿದೆ, ಉಳಿದವೆಲ್ಲ ನಮ್ಮ ವಿರೋಧಿಗಳಾಗಿವೆ. ಭಾರತವನ್ನು ಗೆಲ್ಲಲು ಈಗ ಗೆರಿಲ್ಲಾ ಯುದ್ಧ ಹೂಡಿದ್ದಾರೆ. ಭಾರತಕ್ಕೆ ಅಕ್ರಮ ನುಸುಳುಕೋರರನ್ನು ಕಳಿಸುತ್ತಿದ್ದಾರೆ. ಇಸ್ಲಾಂ ಹೋದಲ್ಲೆಲ್ಲ ಅಲ್ಲಿನ ಸಂಸ್ಕೃತಿ, ಪರಂಪರೆ ನಾಶವಾಗಿದೆ. ಎಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೋ ಅಲ್ಲಿ ಪೆಟ್ಟು ತಿನ್ನುತ್ತಿದ್ದಾರೆ. ಕೇರಳದ ಬಳಿಕ ದಕ್ಷಿಣ ಕನ್ನಡದಲ್ಲೂ ಮುಸ್ಲಿಮರ ಸಂಖ್ಯೆ 35 ಶೇಕಡಾ ಆಗಿದೆ. ಬಾಂಗ್ಲಾದ ಸ್ಥಿತಿ ನಾಳೆ ಇಲ್ಲಿಗೂ ಬರಬಹುದು. ಇಷ್ಟೆಲ್ಲ ಆಗುತ್ತಿದ್ದರೆ ಬುದ್ಧಿಜೀವಿಗಳ ಬಾಯಿಗೆ ಬೀಗ ಬಿದ್ದಿದೆ. ಪ್ಯಾಲೆಸ್ತೀನ್ ಮೇಲೆ ದಾಳಿಯಾದಾಗ ಇಲ್ಲಿ ಪ್ರತಿಭಟನೆ ನಡೆಸಿದ್ದರು. ಇಲ್ಲಿ ಚರ್ಚ್ ಮೇಲೆ ದಾಳಿಯಾದರೆ, ಲಂಡನ್ನಲ್ಲಿ ಪ್ರತಿಭಟನೆ ನಡೆದಿತ್ತು. ಈಗ ಬಾಂಗ್ಲಾದಲ್ಲಿ ಚರ್ಚ್ ಮೇಲೆಯೂ ದಾಳಿಯಾಗುತ್ತಿದೆ, ಇವರು ಮೌನವಾಗಿ ನೋಡುತ್ತಿದ್ದಾರೆ ಎಂದು ಹೇಳಿದರು.
ಬಟೇಂಗೇ ತೊ ಕಟೇಂಗೇ..
ಹಿಂದು ಜಾಗರಣ ವೇದಿಕೆಯ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಯನ್ನು ಖಂಡಿಸಿ 87 ದೇಶಗಳಲ್ಲಿ ಹಿಂದುಗಳ ಧ್ವನಿ ಎತ್ತಿದ್ದಾರೆ. ನಾವು ಕೂಡ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಹಿಂದುಗಳು ಯೋಗಿಯವರು ಹೇಳಿದ ಬಟೇಂಗೇ ತೊ ಕಟೇಂಗೇ ಮಾತು ನೆನಪಿಡಬೇಕು. ನಾವು ಒಗ್ಗಟ್ಟಿನಲ್ಲಿ ಇರದೇ ಇದ್ದರೆ ಸಾಯುತ್ತೇವೆ. ದೇಶಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಅವರಿಗೆ ವ್ಯವಸ್ಥಿತ ರೀತಿಯಲ್ಲಿ ಆಧಾರ್ ಕಾರ್ಡ್ ಮಾಡಿಸಿಕೊಡುವ ಮಸೀದಿ, ಮದ್ರಸಾಗಳಿವೆ. ಗಲ್ಲಿ ಗಲ್ಲಿಯಲ್ಲಿರುವ ಬಾಂಗ್ಲಾ ವಲಸಿಗರನ್ನು ಸರ್ಕಾರವೇ ಹಿಡಿದು ಹೊರಕ್ಕಟ್ಟದಿದ್ದರೆ ಹಿಂದುಗಳೇ ಅದನ್ನು ಮಾಡಬೇಕಾಗುತ್ತದೆ.
ನಾವು ವಿನಾಶದತ್ತ ಹೋಗುತ್ತಿದ್ದೇವೆ
2019ರಲ್ಲಿ ಬಾಂಗ್ಲಾ, ಪಾಕಿಸ್ಥಾನದ ಹಿಂದುಗಳಿಗೆ ನಾಗರಿಕತ್ವ ಕೊಡುವ ಎನ್ ಆರ್ ಸಿ ಕಾಯ್ದೆ ಜಾರಿಗೆ ತಂದಾಗ ಮಂಗಳೂರಿನಲ್ಲಿ ಮುಸ್ಲಿಮರು, ಪಾಕಿಸ್ಥಾನದ ಮುಸ್ಲಿಮರಿಗೂ ನಾಗರಿಕತ್ವ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದರು. ಇಲ್ಲಿನ ಮುಸ್ಲಿಮರಿಗೆ ಬಾಂಗ್ಲಾದ ಮುಸ್ಲಿಮರ ಮೇಲೆ ಪ್ರೀತಿಯಿದೆ. ಈಗ ನಾವು ಅಲ್ಲಿನ ಹಿಂದುಗಳ ಬಗ್ಗೆ ಧ್ವನಿ ಎತ್ತಿದ್ದೇವೆ. ಬಾಂಗ್ಲಾವನ್ನು ಸೃಷ್ಟಿ ಮಾಡಿದ್ದೇ ಭಾರತ. ಆದರೆ ಈಗ ಅದೇ ಬಾಂಗ್ಲಾವನ್ನು ಭಾರತವೇ ಒಡೆದು ಹಿಂದುಗಳಿಗಾಗಿಯೇ ಮತ್ತೊಂದು ಬಾಂಗ್ಲಾ ಸೃಷ್ಟಿಸಬೇಕು ಎಂದು ಆಗ್ರಹಿಸಿದರು. ನಾವಿಲ್ಲಿ ಸ್ಮಾರ್ಟ್ ಸಿಟಿ ಸೇರಿ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುತ್ತಿದ್ದೇವೆ, ಆದರೆ ಇದೇ ಸ್ಮಾರ್ಟ್ ಸಿಟಿಯನ್ನು ಮುಂದೆ ಅನುಭವಿಸೋರು ಯಾರು ಎಂದೂ ಹಿಂದುಗಳು ಯೋಚಿಸಬೇಕಾಗಿದೆ ಎಂದು ಹೇಳಿದರು. ನಾವು ವಿನಾಶದತ್ತ ಮುನ್ನುಗ್ಗುತ್ತಿದ್ದೇವೆ, 2080ರ ವೇಳೆಗೆ ಭಾರತ ಭಾರತವಾಗಿ ಉಳಿಯುತ್ತೆ ಎನ್ನುವ ಖಾತ್ರಿಯಿಲ್ಲ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಬಾಂಗ್ಲಾ ದಂಗೆಯ ಹಿಂದೆ ಅಮೆರಿಕ
ಆರೆಸ್ಸೆಸ್ ಮುಖಂಡ ರವೀಂದ್ರ ಪುತ್ತೂರು ಮಾತನಾಡಿ, ಬಾಂಗ್ಲಾದ ಘಟನೆಯ ಹಿಂದೆ ಅಮೆರಿಕದ ಪಿತೂರಿ ಇದೆ. ಬಾಂಗ್ಲಾ ಬಳಿಯ ದ್ವೀಪವನ್ನು ಬಿಟ್ಟು ಕೊಡದೇ ಇದ್ದುದಕ್ಕಾಗಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಪಿತೂರಿ ಮಾಡಿದ್ದರು. ಅವರನ್ನು ಚುನಾವಣೆಯಲ್ಲಿ ಸೋಲಿಸಲು ಆಗಲಿಲ್ಲ. ಮೀಸಲಾತಿ ವಿಚಾರದಲ್ಲಿ ಪ್ರತಿಭಟನೆ ಎಬ್ಬಿಸಿ ಪ್ರಧಾನಿ ನಿವಾಸದಿಂದಲೇ ಓಡಿಸುವಂತೆ ಮಾಡಿದ್ದಾರೆ. ಆದರೆ ಈಗ ಅಮೆರಿಕದಲ್ಲಿ ಹಿಂದುಗಳ ಪರ ಇರುವ ಟ್ರಂಪ್ ಸರ್ಕಾರ ಬಂದಿದೆ, ಬಾಂಗ್ಲಾದಲ್ಲಿ ಚಿನ್ಮಯಾನಂದ ಸ್ವಾಮಿಯನ್ನು ಡಿ.20ರ ಒಳಗೆ ಬಿಡುಗಡೆ ಮಾಡದಿದ್ದರೆ ಏನು ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ. ಅಷ್ಟರಮಟ್ಟಿಗೆ ಹಿಂದುಗಳ ಪರವಾಗಿ ಅಮೆರಿಕವೇ ಧ್ವನಿಯೆತ್ತುವ ಸ್ಥಿತಿ ಬಂದಿದೆ ಎಂದರು.
The Hindu Hitarakshana Samiti on Wednesday carried out protest in Mangaluru and Udupi against atrocities on Hindus in Bangladesh. Addressing the protesters near the Clock Tower Circle in Mangaluru, Sharan Pumpwell, Mangaluru Pranta Karyadarshi of Vishwa Hindu Parishat, said the atrocities on Hindus in Bangladesh was a continuation of attacks on Hindus across the world. Attacks are more in countries where Hindus are minority, he said.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm