Gas Tanker, Accident, Kotekar, Mangalore; ಗ್ಯಾಸ್‌ ಟ್ಯಾಂಕರ್‌ನಲ್ಲಿ ತಾಂತ್ರಿಕ ದೋಷ, ಕೋಟೆಕಾರು ಹೆದ್ದಾರಿ ಮಧ್ಯೆ ಹೈಡ್ರೋ ಕ್ಲೋರಿಕ್ ಆಸಿಡ್‌ ಸೋರಿಕೆ, ಸ್ಥಳಕ್ಕೆ ಎಂಆರ್ ಪಿಎಲ್ ತಜ್ಞರ ತಂಡ ದೌಡು 

09-12-24 03:11 pm       Mangalore Correspondent   ಕರಾವಳಿ

ರಾಷ್ಟ್ರೀಯ ಹೆದ್ದಾರಿ 66ರ  ಕೋಟೆಕಾರು, ಉಚ್ಚಿಲದಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ಹೈಡ್ರೋ ಕ್ಲೋರಿಕ್ ಆಸಿಡ್‌ ಸೋರಿಕೆಯಾಗಿದ್ದು, ಸ್ಥಳದಲ್ಲಿ  ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್‌ ಪಿಎಲ್‌ ತಜ್ಞರ ತಂಡ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಉಳ್ಳಾಲ, ಡಿ.9: ರಾಷ್ಟ್ರೀಯ ಹೆದ್ದಾರಿ 66ರ  ಕೋಟೆಕಾರು, ಉಚ್ಚಿಲದಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ಒಂದರಲ್ಲಿ ತಾಂತ್ರಿಕ ದೋಷದಿಂದಾಗಿ ಹೈಡ್ರೋ ಕ್ಲೋರಿಕ್ ಆಸಿಡ್‌ ಸೋರಿಕೆಯಾಗಿದ್ದು, ಸ್ಥಳದಲ್ಲಿ  ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್‌ ಪಿಎಲ್‌ ತಜ್ಞರ ತಂಡ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಕಾರವಾರದಿಂದ ಕೊಚ್ಚಿಗೆ ಹೈಡ್ರೋ ಕ್ಲೋರಿಕ್ ಆಸಿಡ್‌ ಹೊತ್ತೊಯ್ಯುತ್ತಿದ್ದ ಟ್ಯಾಂಕರಿನಲ್ಲಿ ತಾಂತ್ರಿಕ ದೋಷದಿಂದ ಆಸಿಡ್ ಸೋರಿಕೆಯುಂಟಾಗಿದೆ. ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗುವುದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರನ್ನು ನಿಲ್ಲಿಸಿದ್ದಾರೆ. ತಕ್ಷಣ  ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆಸಿಡ್ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಸ್ಥಳದಲ್ಲಿ ಅಗ್ನಿ ಶಾಮಕದಳ, ಉಳ್ಳಾಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಟ್ಯಾಂಕರನ್ನು ಸ್ಥಳೀಯ ನಿರ್ಮಾಣ ಹಂತದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದು ,ಅನಿಲ ಸೋರಿಕೆ ಭಾಗಕ್ಕೆ ಎಮ್ಸಿಲ್ ಅಂಟಿಸಿದರೂ ಸೋರಿಕೆ ಮುಂದುವರಿದಿದ್ದು ಎಂಆರ್‌ ಪಿಎಲ್‌ ತಜ್ಞರ ತಂಡವನ್ನ ಸ್ಥಳಕ್ಕೆ ಕರೆಸಲಾಗಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಸೂಚನೆಗಳನ್ನು ಸಂಬಂಧ ಪಟ್ಟ ಇಲಾಖೆ ಈವರೆಗೆ ಸ್ಥಳೀಯರಿಗೆ, ವಾಹನ ಸವಾರರಿಗೆ ನೀಡಿಲ್ಲ. ಏಸಿಡ್ ಸೋರಿಕೆಯಾದರೂ, ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಪೊಲೀಸರು ಗಂಭೀರ ವಹಿಸಿದಂತಿಲ್ಲ. ಸದ್ಯ ಟ್ಯಾಂಕರನ್ನು ಎಂಆರ್ ಪಿಎಲ್ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿರುವುದಾಗಿ ಉಳ್ಳಾಲ ತಹಸೀಲ್ದಾರ್ ತಿಳಿಸಿದ್ದಾರೆ.

Mangalore Gas tanker faces leakage of Hydrochloric acid at kotekar, MRPL team arrives, major accident averted