ಬ್ರೇಕಿಂಗ್ ನ್ಯೂಸ್
15-12-24 05:27 pm Mangalore Correspondent ಕರಾವಳಿ
ಮಂಗಳೂರು, ಡಿ.15: ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಮುಚ್ಚಿ ಹಾಕಲು ಅನ್ವರ್ ಮಾಣಿಪ್ಪಾಡಿಗೆ ಬಿವೈ ವಿಜಯೇಂದ್ರ 150 ಕೋಟಿ ಆಮಿಷ ಒಡ್ಡಿದ್ದರೆಂಬ ಸಿಎಂ ಸಿದ್ದರಾಮಯ್ಯ ಆರೋಪವನ್ನು ವಕ್ಫ್ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ನಿರಾಕರಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅನ್ವರ್ ಮಾಣಿಪ್ಪಾಡಿ, 2012-13ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ರೆಡಿ ಮಾಡುತ್ತಿದ್ದಾಗ ವಿಜಯೇಂದ್ರ ಏನೂ ಆಗಿರಲಿಲ್ಲ. ಯಡಿಯೂರಪ್ಪ ಪುತ್ರ ಅಷ್ಟೇ ಆಗಿದ್ದರು. 2019ರಲ್ಲಿ ಯಡಿಯೂರಪ್ಪ ಸರ್ಕಾರ ಇದ್ದಾಗ ವಕ್ಫ್ ಆಸ್ತಿ ಕುರಿತ ವರದಿ ಜಾರಿಗೊಳಿಸಬೇಕೆಂದು ಆಗ್ರಹ ಮಾಡಿದ್ದೆ. ಈ ವಿಷಯದಲ್ಲಿ ಬಿಜೆಪಿ ನಾಯಕರ ಬಗ್ಗೆ ಕೋಪಗೊಂಡಿದ್ದೆ. ಆಗ ಪಕ್ಷದ ಕಚೇರಿಯಲ್ಲಿ ವಿಜಯೇಂದ್ರ ನನ್ನ ಜೊತೆಗೆ ಮಾತುಕತೆ ನಡೆಸಿದ್ದು ಹೌದು. ಆದರೆ ಯಾವುದೇ ಆಮಿಷವೊಡ್ಡಿದ್ದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಅದರ ಬದಲಾಗಿ ವರದಿ ಬಹಿರಂಗ ಮಾಡದಂತೆ ನನಗೆ ಕಾಂಗ್ರೆಸಿಗರೇ ಸಾವಿರ ಕೋಟಿ ಆಫರ್ ಮಾಡಿದ್ದರು. ಯಾಕಂದ್ರೆ, ವಕ್ಪ್ ಆಸ್ತಿ ಹಗರಣದಲ್ಲಿ ಕಾಂಗ್ರೆಸ್ ನಾಯಕರದ್ದೇ ಹೆಸರಿವೆ. ವರದಿ ಜಾರಿ ಮಾಡುತ್ತಿದ್ದರೆ ಕಾಂಗ್ರೆಸಿಗೇ ಮುಳುವಾಗುತ್ತಿತ್ತು. ಹಲವು ನಾಯಕರು ಜೈಲಿಗೆ ಹೋಗುವ ಸ್ಥಿತಿ ಬರುತ್ತಿತ್ತು. ಇದರಿಂದ ಬಚಾವ್ ಆಗಲು ನನಗೆ ಬಹಳಷ್ಟು ಆಮಿಷ ಒಡ್ಡಿದ್ದರು. 150 ಅಲ್ಲ, ಸಾವಿರಾರು ಕೋಟಿ ಕೊಡುವುದಕ್ಕೂ ರೆಡಿ ಇದ್ದರು. ಅಮೆರಿಕದಲ್ಲಿ ಹೋಗಿ ಸೆಟ್ಲ್ ಆಗುವುದಿದ್ದರೂ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಆದರೆ ನಾನು ಎಲ್ಲವನ್ನೂ ನಿರಾಕರಿಸಿದ್ದೇನೆ. ನ್ಯಾಯಯುತ ತನಿಖೆಗೆ ಆಗ್ರಹಿಸಿದ್ದೇನೆ. ಇದರ ಬಗ್ಗೆ ಪ್ರಧಾನಿಯವರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ವಕ್ಫ್ ಆಸ್ತಿ ಕಬಳಿಕೆ ವರದಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಹ್ಯಾರಿಸ್, ರೋಷನ್ ಬೇಗ್ ಮತ್ತಿತರರ ಹೆಸರು ಇರೋದು ಸತ್ಯ. ವರದಿಯಲ್ಲಿ ಹೆಸರು ಬಂದವರು ಪ್ರಕರಣ ಮುಚ್ಚಿ ಹಾಕಲು ಆಫರ್ ನೀಡಲು ಬಂದಿದ್ದರು. ಅದು ಬಿಟ್ಟರೆ ಬಿಜೆಪಿ ಕಡೆಯಿಂದ ಆಫರ್ ಆಮಿಷ ಬಂದಿಲ್ಲ. ವರದಿ ಜಾರಿಗೊಳ್ತಿದ್ದರೆ ಕಾಂಗ್ರೆಸಿನ ದೊಡ್ಡ ಕುಳಗಳೇ ಸಿಕ್ಕಿಬೀಳುತ್ತಿದ್ದರು. ಬಿಜೆಪಿಯವರು ಮಾಡಿರಲಿಲ್ಲ.
ಈಗ ಸಿದ್ದರಾಮಯ್ಯ 1.60 ಲಕ್ಷ ಎಕರೆ ಆಸ್ತಿಗೆ ನೋಟಿಸ್ ಕೊಟ್ಟಿದ್ದು ಒಂದು ರೀತಿಯ ಬೋಗಸ್. ನಾವು ಕೊಟ್ಟ ವರದಿಯಲ್ಲಿ 27 ಸಾವಿರ ಎಕರೆ ವಕ್ಪ್ ಆಸ್ತಿ ಕಬಳಿಕೆ ಬಗ್ಗೆ ದಾಖಲೆ ಇದೆ. ಅದು ಬಿಟ್ಟು ಸಿದ್ದರಾಮಯ್ಯ ಒಂದೂವರೆ ಲಕ್ಷ ಎಕರೆಗೆ ನೋಟಿಸ್ ಕೊಟ್ಟಿದ್ದು ಹೇಗೆ ? ಅಷ್ಟೊಂದು ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಆಸ್ತಿ ಕಬಳಿಸಿದ ಪ್ರಭಾವಿಗಳಿಗೆ ನೋಟಿಸ್ ಕೊಟ್ಟಿದ್ದಾರೆಯೇ. ಇವರಿಗೆ ವಕ್ಪ್ ಆಸ್ತಿ ತನಿಖೆ ಮಾಡಬೇಕೆಂಬ ಆಸಕ್ತಿ ಇಲ್ಲ, ಹೀಗೆ ಆರೋಪ ಮಾಡುತ್ತಾರೆ ಬಿಟ್ಟರೆ ತನಿಖೆ ಮಾಡಿಸುವುದಿಲ್ಲ. ಹಾಗಿದ್ದರೆ ಸಿಬಿಐ ತನಿಖೆಗೆ ಕೊಡಲಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
Mangalore Anwar Manippady makes shoking allegations on waqf, says congress leaders offered thousands of crores to close the issue.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm