MCC Bank Anil Lobo, FIR, Manohar Pereira Suicide: ಚಾರಿಟಿ ಸಂಸ್ಥೆ ಕೊಟ್ಟಿದ್ದ 9 ಲಕ್ಷ ಹಣವನ್ನು ತಿಂದು ಹಾಕಿದ ಆರೋಪ, ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮನೋಹರ್ ಪಿರೇರಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲು

18-12-24 01:56 pm       Mangalore Correspondent   ಕರಾವಳಿ

ಬ್ಯಾಂಕ್ ಸಾಲದ ಕಾರಣಕ್ಕೆ ಕಿರುಕುಳ ಕೊಟ್ಟಿದ್ದಾನೆಂದು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರು, ಡಿ.18: ಬ್ಯಾಂಕ್ ಸಾಲದ ಕಾರಣಕ್ಕೆ ಕಿರುಕುಳ ಕೊಟ್ಟಿದ್ದಾನೆಂದು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ.

ಉಳಾಯಿಬೆಟ್ಟು ಕುಟಿನ್ಹೋ ಪದವು ನಿವಾಸಿ ಮನೋಹರ್ ಪಿರೇರಾ(47) ನಿನ್ನೆ ಸಂಜೆ ವಿಡಿಯೋ ಮಾಡಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರು ತನ್ನ 9 ಲಕ್ಷ ಹಣವನ್ನು ತಿಂದು ಹಾಕಿದ್ದಾನೆ. ಎರಡು ವರ್ಷಗಳಿಂದ ಕೆಲಸ ಮಾಡಲಾಗದೆ ಕಷ್ಟ ಪಡುತ್ತಿದ್ದೇನೆ, ಮನೆಯನ್ನು ಸೀಜ್ ಮಾಡಿದ್ದಾನೆ ಇತ್ಯಾದಿ ವಿಷಯಗಳನ್ನು ಹೇಳಿ ವಿಡಿಯೋ ಮಾಡಿದ್ದರು. ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದರು.

ಘಟನೆಗೆ ಸಂಬಂಧಿಸಿ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಹತ್ತು ವರ್ಷಗಳ ಹಿಂದೆ ಮನೆ ಖರೀದಿ ಮಾಡುವುದಕ್ಕಾಗಿ ಎಂಸಿಸಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಸಾಲದ ಕಂತನ್ನು ಮನೋಹರ್ ಅವರ ಅಣ್ಣ ಗುಜರಾತಿನಲ್ಲಿರುವ ಮೆಲ್ಕಮ್ ಪಿರೇರಾ ಬ್ಯಾಂಕಿಗೆ ಕಟ್ಟುತ್ತಿದ್ದರು. ಕೋವಿಡ್ ಬಳಿಕ ಆರ್ಥಿಕ ನಷ್ಟಗೊಂಡಿದ್ದರಿಂದ ಅವರು ಬ್ಯಾಂಕ್ ಸಾಲ ಪಾವತಿ ಮಾಡಿರಲಿಲ್ಲ. ಹೀಗಾಗಿ ಎರಡು ವರ್ಷಗಳ ಹಿಂದೆ ಎಂಸಿಸಿ ಬ್ಯಾಂಕ್ ಆಡಳಿತವು ಮನೆಯನ್ನು ಜಪ್ತಿ ಮಾಡಿತ್ತು.

ಆನಂತರ, ಮನೋಹರ್ ಪಿರೇರಾ ಅವರ ಅತ್ತೆಯೂ ಆಗಿರುವ ಸಿಸ್ಟರ್ ಕ್ರಿಸ್ಟಿನ್ ರವರು ಚಾರಿಟಿ ಸಂಸ್ಥೆಯೊಂದರಿಂದ ಮನೆ ಜಪ್ತಿಯನ್ನು ತಡೆಯುವುದಕ್ಕಾಗಿ 15 ಲಕ್ಷ ನೆರವು ನೀಡಿದ್ದರು. ಆ ಹಣವನ್ನು ಮನೋಹರ್ ಪಿರೇರಾ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು. ಆದರೆ, ಈ ಹಣವನ್ನು ಮನೋಹರ್ ಅವರು ತನ್ನ ಖಾತೆಯಿಂದ ಸೆಲ್ಫ್ ಚೆಕ್ ಮೂಲಕ ಸಾಲದ ಬಾಬ್ತು ಆಗಿ ಬ್ಯಾಂಕಿಗೆ ನೀಡಿದ್ದರು. ಈ ಹಣವನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡದೆ ಅಧ್ಯಕ್ಷ ಅನಿಲ್ ಲೋಬೊ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮನೋಹರ್ ಮಾಡಿದ್ದಾರೆ. ಆ ಹಣದಲ್ಲಿ 9 ಲಕ್ಷವನ್ನು ಅನಿಲ್ ಲೋಬೊ ತಿಂದಿದ್ದಾನೆ, ಈಗ ಮತ್ತೆ ಹಳೆ ಸಾಲ ಪಾವತಿಸುವಂತೆ ಕಿರುಕುಳ ನೀಡುತ್ತಿದ್ದಾರೆಂದು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ಮಾನಸಿಕ ಖಿನ್ನತೆರಾಗಿ ಮನೋಹರ್ ಪಿರೇರಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಜೀವನ್ ಪಿರೇರಾ ದೂರಿನಲ್ಲಿ ತಿಳಿಸಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಯೆಂದು ಪ್ರಕರಣ ದಾಖಲಿಸಿದ್ದಾರೆ.

The Kankandy Rural Police have filed an FIR against Anil Lobo, the President and Director of MCC Catholic Bank, following the suicide of Manohar Pereira in Fermai, Mangalore. A video that went viral on social media alleges that Anil is responsible for Pereira's death due to harassment and torture.