ಬ್ರೇಕಿಂಗ್ ನ್ಯೂಸ್
19-12-24 01:53 pm Mangalore Correspondent ಕರಾವಳಿ
ಉಳ್ಳಾಲ, ಡಿ.18: ರಾ.ಹೆ. 66ರ ನೇತ್ರಾವತಿ ನದಿಯ ಹಳೆ ಸೇತುವೆಯಲ್ಲಿ ತೇಪೆ ಕಾಮಗಾರಿ ನಡೆಯುತ್ತಿದ್ದು ತೊಕ್ಕೊಟ್ಟಿನಿಂದ ನೇತ್ರಾವತಿ ಸೇತುವೆ ಸಂಪರ್ಕದ ಹೆದ್ದಾರಿಯ ಎಡ ಪಾರ್ಶ್ವದ ರಸ್ತೆಯುದ್ದಕ್ಕೂ ಕಳೆದೆರಡು ದಿನಗಳಿಂದ ದಿನವಿಡೀ ಸಂಚಾರ ವ್ಯತ್ಯಯವಾಗಿದೆ. ಟ್ರಾಫಿಕ್ ಜಾಮಲ್ಲಿ ಸಿಲುಕಿ ಸುಸ್ತಾದ ವಾಹನ ಸವಾರರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಹಳೆಯ ನೇತ್ರಾವತಿ ಸೇತುವೆಯ ಗುಂಡಿಗಳಲ್ಲಿ ಕಬ್ಬಿಣದ ಸಲಾಕೆಗಳು ಎದ್ದು ನಿಂತಿದ್ದರಿಂದ ಕಾರಿನ ಟಯರ್ ಸಿಡಿದಿದ್ದು, ಸೇತುವೆಯ ದುಸ್ಥಿತಿಯ ಬಗ್ಗೆ ಕಾರು ಚಾಲಕ ಉಗಿದು ಮಾಡಿದ ವೀಡಿಯೋ ತುಣುಕೊಂದು ಎರಡು ದಿನಗಳ ಹಿಂದೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿ ಎಚ್ಚೆತ್ತ ಅಧಿಕಾರಿಗಳು ಸೇತುವೆಯ ತೇಪೆ ಕಾಮಗಾರಿ ನಡೆಸಲಾರಂಭಿಸಿದ್ದಾರೆ.
ಬುಧವಾರ ಬೆಳಗ್ಗಿನಿಂದಲೂ ಸೇತುವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇಂದು ಗುರುವಾರವೂ ಅದೇ ಸ್ಥಿತಿ ಮುಂದುವರಿದಿದೆ. ಬೆಳಗ್ಗೆ ಶಾಲೆ, ಕಾಲೇಜು, ಕೆಲಸಗಳಿಗೆ ತೆರಳುವವರು ಪರದಾಡುವ ಸ್ಥಿತಿಯಾಗಿದೆ. ಸಹಸ್ರಾರು ವಾಹನಗಳು ಓಡಾಡುವ ಸೇತುವೆಯಲ್ಲಿ ಹಗಲಿನ ವೇಳೆ ದುರಸ್ತಿ ಕಾಮಗಾರಿ ನಡೆಸುವುದು ಎಷ್ಟು ಸರಿ ಎಂದು ಟ್ರಾಫಿಕ್ ಜಾಮಲ್ಲಿ ಸಿಲುಕಿದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೆಳಗ್ಗಿನಿಂದ ರಾತ್ರಿ ವರೆಗೂ ಸೇತುವೆಯಲ್ಲಿ ಮೊಕ್ಕಾಂ ಹೂಡಿದ್ದು ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟಿದ್ದಾರೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ತುರ್ತು ವಾಹನಗಳು ಕಲ್ಲಾಪುವಿನಿಂದ ವಿರುದ್ಧ ದಿಕ್ಕಿನ ರಸ್ತೆಯಿಂದ ಅಪಾಯಗಳನ್ನ ಲೆಕ್ಕಿಸದೆ ಸಾಗಿವೆ. ಕೆಲವು ದ್ವಿಚಕ್ರ ವಾಹನ ಸವಾರರು ಕೂಡ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ನಿರಂತರ ಟ್ರಾಫಿಕ್ ಜಾಮ್ ನಿಂದ ಎಚ್ಚೆತ್ತ ಸಂಚಾರಿ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಖುದ್ದಾಗಿ ಕಲ್ಲಾಪು ಹೆದ್ದಾರಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಮುಂದಾಗಿದ್ದಾರೆ.
ಕಲ್ಲಾಪಿನಿಂದ ಮಂಗಳೂರಿಗೆ ತೆರಳಲು ಎರಡು ಬದಿಯ ಹೆದ್ದಾರಿ ರಸ್ತೆಯಿಂದಲೂ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ತೆರಳುವ ಸರಕು ಘನ ವಾಹನಗಳನ್ನ ಮಾತ್ರ ಹಳೆಯ ಸೇತುವೆಯ ಮೇಲಿಂದ ಬಿಡಲಾಗಿದೆ. ಒಟ್ಟು ನಾಲ್ಕು ದಿವಸ ಕಾಲ ಸೇತುವೆಯ ಕಾಮಗಾರಿ ನಡೆಯಲಿದ್ದು, ಪೂರ್ವ ಸಿದ್ಧತೆ ಇಲ್ಲದೆ ಕಾಮಗಾರಿ ನಡೆಸಿದ್ದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.
"There is a huge traffic blockage on the Ullal Bridge road due to tar fixing. The old road was in poor condition, with exposed iron rods that caused tire blowouts in cars. The roads have now been repaired, but this has resulted in significant traffic jams."
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm