ಬ್ರೇಕಿಂಗ್ ನ್ಯೂಸ್
20-12-24 09:48 pm Mangalore Correspondent ಕರಾವಳಿ
ಮಂಗಳೂರು, ಡಿ.20: ಸಾಲಗಾರ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಜಾಮೀನು ಅರ್ಜಿ ಕೋರ್ಟಿನಲ್ಲಿ ತಿರಸ್ಕೃತವಾಗಿದೆ.
ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಎಸ್.ಕೆ. ಉಳ್ಳಾಲ್ ಎಂಬ ವಕೀಲ ಅನಿಲ್ ಲೋಬೊ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಹಂತದಲ್ಲಿ ಜಾಮೀನು ನೀಡುವ ಯಾವುದೇ ಸಕಾರಣ ಕಾಣುವುದಿಲ್ಲ. ಹಾಗಾಗಿ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಮಾಡುವುದಾಗಿ ಹೇಳಿ ಪ್ರಮುಖ ಅರ್ಜಿಯನ್ನು ಡಿ.27ಕ್ಕೆ ಮುಂದೂಡಿದೆ.
ಡಿ.18ರಂದು ಅನಿಲ್ ಲೋಬೊನನ್ನು ಕಂಕನಾಡಿ ಗ್ರಾಮಾಂತರ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಆತನಿಗೆ ಜಿಲ್ಲಾ ಕೋರ್ಟ್ ಡಿ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ, ಡಿ.19ರಂದು ಲೋಬೊ ಪರ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿ ಆತನಿಗೆ ಅನಾರೋಗ್ಯ ಕಾಡುತ್ತಿರುವುದಾಗಿ ಹೇಳಿದ್ದಲ್ಲದೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದರು. ಅದರಂತೆ, ಕೋರ್ಟ್ ಆತನ ಚಿಕಿತ್ಸೆಗೆ ಅನುಮತಿ ನೀಡಿದ್ದು, ಡಿ.19ರ ರಾತ್ರಿ ಹತ್ತು ಗಂಟೆ ವೇಳೆಗೆ ಜೈಲಿನಿಂದ ಯೇನಪೋಯ ಆಸ್ಪತ್ರೆಗೆ ಒಯ್ದು ದಾಖಲಿಸಲಾಗಿದೆ.
ಈ ಬಗ್ಗೆ ಜೈಲು ಅಧೀಕ್ಷಕರಲ್ಲಿ ಕೇಳಿದಾಗ, ಡಿ.18ರ ರಾತ್ರಿ 9 ಗಂಟೆ ವೇಳೆಗೆ ಅನಿಲ್ ಲೋಬೊನನ್ನು ಪೊಲೀಸರು ಜೈಲಿಗೆ ತಂದು ಒಪ್ಪಿಸಿದ್ದರು. ಮರುದಿನ ಡಿ.19ರಂದು ರಾತ್ರಿ ಕೋರ್ಟಿನಿಂದ ಆದೇಶ ತಂದಿದ್ದು, ಅದರಂತೆ ನಡೆದುಕೊಂಡಿದ್ದೇವೆ. ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆಯೆಂದು ಕೋರ್ಟ್ ಆದೇಶ ನೀಡಿದರೆ ಅದನ್ನು ಪಾಲಿಸಬೇಕಾಗುತ್ತದೆ. ಆದರೆ, ಅಲ್ಲಿನ ಪೊಲೀಸರ ಕಾವಲು ಸೇರಿದಂತೆ ಎಲ್ಲವನ್ನೂ ಖಾಸಗಿಯಾಗಿ ಆತನೇ ಭರಿಸಬೇಕಾಗುತ್ತದೆ ಎಂದು ಹೇಳಿದರು.
ಸಾಮಾನ್ಯವಾಗಿ ಜೈಲಿನಲ್ಲಿ ಕೈದಿಗಳಿಗೆ ಅನಾರೋಗ್ಯ ಉಂಟಾದರೆ ಸರಕಾರಿ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ. ವಿಐಪಿಗಳು ಜೈಲು ಪಾಲಾದ ಕೂಡಲೇ ಅವರು ಅನಾರೋಗ್ಯ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅದಕ್ಕಾಗಿ ಕೋರ್ಟಿನಲ್ಲಿ ಅನಾರೋಗ್ಯದ ಬಗ್ಗೆ ದಾಖಲೆ ಒದಗಿಸಿ ಅನುಮತಿಯನ್ನೂ ಪಡೆದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಅನಿಲ್ ಲೋಬೊ ನಡೆದುಕೊಂಡಿದ್ದಾನೆ. ಇದೇ ವೇಳೆ, ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು ಹಿನ್ನಡೆಯಾಗಿದೆ.
ಡಿ.17ರಂದು ಉಳಾಯಿಬೆಟ್ಟು ಬಳಿಯ ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ(47) ಎಂಬ ಅಂಗವಿಕಲ ವ್ಯಕ್ತಿ ತನ್ನ ಸಾವಿಗೆ ಅನಿಲ್ ಲೋಬೊ ಕಾರಣ ಎಂದು ಹೇಳಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ಸಾಲದ ವಿಚಾರದಲ್ಲಿ ಅನಿಲ್ ಲೋಬೊ ತನ್ನ ಮೇಲೆ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಅನಿಲ್ ಲೋಬೊ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯೆಂದು ಕೇಸು ದಾಖಲಿಸಿದ್ದರು.
MCC Bank's Anil Lobo had his bail plea rejected by a Mangalore court in connection with the suicide case of Manohar Pereira, who alleged torture by the director of the bank. Anil has been shifted to a private hospital for treatment, as he stated that he isn't well.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm