ಬ್ರೇಕಿಂಗ್ ನ್ಯೂಸ್
21-12-24 08:16 pm Mangalore Correspondent ಕರಾವಳಿ
ಮಂಗಳೂರು, ಡಿ.21: ಕರಾವಳಿ ಉತ್ಸವ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಹೆಲಿಕಾಪ್ಟರ್ ನಲ್ಲಿ ಮಂಗಳೂರು ನಗರವನ್ನು ಪ್ರದಕ್ಷಿಣೆ ಹಾಕುವ ಅಪೂರ್ವ ಅವಕಾಶವನ್ನು ಸಾರ್ವಜನಿಕರಿಗೆ ನೀಡಲಾಗಿದೆ.
ಡಿ.21ರಿಂದ 9 ದಿನಗಳ ಕಾಲ ಹೆಲಿಟೂರಿಸಂ ಇರಲಿದ್ದು ಮಂಗಳೂರು ನಗರದ ಸೌಂದರ್ಯವನ್ನು ಬಾನಂಗಳದಿಂದ ಸವಿಯುವ ಅವಕಾಶವನ್ನು ಜನರಿಗೆ ಒದಗಿಸುತ್ತಿದೆ. ತುಂಬೆ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಆಯೋಜಿಸಿದೆ. ಡಿ.21ರ ಬೆಳಗ್ಗೆ ಮಂಗಳೂರು ನಗರದ ಮೇರಿಹಿಲ್ ಹೆಲಿಪ್ಯಾಡ್ ನಲ್ಲಿ ಹೆಲಿ ಟೂರಿಸಂ ಅನ್ನು ಉದ್ಘಾಟಿಸಲಾಯಿತು.
ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್, ದ.ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತೀ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಒಬ್ಬರಿಗೆ 4,500 ರೂ. ಪಾವತಿಸಬೇಕಾಗುತ್ತದೆ. ಒಂದು ರೌಂಡ್ 6-7 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಮಂಗಳೂರು ನಗರವನ್ನು ನೇತ್ರಾವತಿ ಮತ್ತು ಫಲ್ಗುಣಿ ನದಿ ಸುತ್ತುವರಿದಿದ್ದು ಮೇಲ್ಭಾಗದಲ್ಲಿ ನೋಡಿದರೆ ರಮಣೀಯ ದೃಶ್ಯ ಕಾಣಿಸುತ್ತದೆ.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಲಿಟೂರಿಸಂ ಸಕ್ಸಸ್ ಆದಲ್ಲಿ ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ. ಕೊಲ್ಲೂರು ಸೇರಿದಂತೆ ಪ್ರವಾಸಿ ತಾಣಗಳಾದ ಬೇಲೂರು -ಹಳೇಬೀಡು, ಬೇಕಲ್ ಫೋರ್ಟ್‌ಗಳಲ್ಲಿ ಹೆಲಿಟೂರಿಸಂ ಅಳವಡಿಸುವ ಬಗ್ಗೆ ಪ್ರಸ್ತಾಪಗಳಿದ್ದು ಪ್ರವಾಸಿಗರ ಆಸಕ್ತಿ ಅಳವಡಿಸಬಹುದಾಗಿದೆ ಎಂದರು.
District in-charge minister Dinesh Gundu Rao inaugurated the month-long Karavali Utsava on Saturday, December 21, at the Karavali Utsava Grounds, Lalbagh. The festival, running from December 21 to January 19, commenced with a grand and colorful procession from Aloysius PU College to the Utsava
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am