ಬ್ರೇಕಿಂಗ್ ನ್ಯೂಸ್
26-12-24 11:57 am Mangalore Correspondent ಕರಾವಳಿ
ಮಂಗಳೂರು, ಡಿ.26: ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಬುಧವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಸಂಸದ ಬ್ರಿಜೇಶ್ ಚೌಟ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿ, ಶವ ಪೆಟ್ಟಿಗೆ ಹೊತ್ತುಕೊಂಡು ಸೇನಾ ವಾಹನದತ್ತ ಬಂದರು. ಈ ಸಂದರ್ಭದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಜೊತೆಗಿದ್ದು ಅಗಲಿದ ಯೋಧನಿಗೆ ನಮಿಸಿ ಸೇನಾ ಸಿಬಂದಿ ಜೊತೆಗೆ ನಿಂತರು. ಮಾಜಿ ಯೋಧ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು.



ಯೋಧನ ಪಾರ್ಥಿವ ಶರೀರವನ್ನು ಇಂದು (ಡಿ.26)ರ ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತಂದು ಮನೆಯಲ್ಲಿ ಸಕಲ ವಿಧಿಗಳನ್ನು ನೆರವೇರಿಸಲಾಗುವುದು. ಅಂತಿಮ ಸಂಸ್ಕಾರಕ್ಕೆ ಮೊದಲು ಬೀಜಾಡಿ ಪಡು ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಅನಂತರ ಬೀಜಾಡಿ ಕಡಲ ಕಿನಾರೆಯ ಸರಕಾರಿ ಜಾಗದಲ್ಲಿ ಸರಕಾರದ ಗೌರವದೊಡನೆ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ.
ಪೆರ್ಡೂರು ಮುಳ್ಳುಗುಡ್ಡೆಯ ಮಂಜುಶ್ರೀಯನ್ನು ಮದುವೆಯಾಗಿದ್ದ ಅನೂಪ್ ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಡಿಸೆಂಬರ್‌ನಲ್ಲಿ ರಜೆ ಪಡೆದು ಊರಿಗೆ ಬಂದಿದ್ದ ಅನೂಪ್ ಅವರು ಕೋಟೇಶ್ವರದ ಕೊಡಿಹಬ್ಬದಲ್ಲಿ ಪಾಲ್ಗೊಂಡು ಮಿತ್ರರೊಡನೆ ಸಮಯ ಕಳೆದಿದ್ದರು. ಕೊಡಿಹಬ್ಬಕ್ಕೆ ಬಂದವರು ಅದೇ ಸಂದರ್ಭದಲ್ಲಿ ಮಗಳ ಹುಟ್ಟುಹಬ್ಬವನ್ನೂ ಆಚರಿಸಿದ್ದರು.
Mangalore Mortal remains of martyr Anoop Poojary brought to Udupi with full honours, Mp Brijesh Chowta pays tribute. The mortal remains of martyr soldier Anoop Poojary, who made the ultimate sacrifice while serving in Poonch, Jammu & Kashmir, were brought to Udupi with full military honours on Thursday. Member of Parliament (MP) Kota Srinivas Poojary received the soldier’s body at Mangalore International Airport and oversaw its dignified transfer to Udupi
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 02:31 pm
HK News Staffer
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm