ಬ್ರೇಕಿಂಗ್ ನ್ಯೂಸ್
26-12-24 09:39 pm Mangalore Correspondent ಕರಾವಳಿ
ಮಂಗಳೂರು, ಡಿ.26: ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಮಂಗಳೂರು ಕಂಬಳಕ್ಕೆ ಈ ಬಾರಿ 8ನೇ ವರ್ಷದ ಸಂಭ್ರಮ. ಕುಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ ಲಕ್ಷ್ಮಣ ಜೋಡು ಕರೆಯಲ್ಲಿ ಡಿ.28-29ರಂದು 8ನೇ ವರ್ಷದ ಮಂಗಳೂರು ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಂಬಳದ ಕುರಿತು ಮಾಹಿತಿ ನೀಡಿದ ಅವರು, ಕಾಶ್ಮೀರದಲ್ಲಿ ಉಗ್ರರ ಜೊತೆಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ತಂದೆ, ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕ ಎಂ.ವೆಂಕಟೇಶ್ ಡಿ.28ರ ಬೆಳಗ್ಗೆ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಕಂಕನಾಡಿ ಗರೋಡಿ ಅಧ್ಯಕ್ಷ ಕೆ.ಚಿತ್ತರಂಜನ್ ದೀಪ ಪ್ರಜ್ವಲನೆ ಮಾಡಲಿದ್ದು, ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಮಠದ ಯೋಗಾನಂದ ಸರಸ್ವತಿ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅದೇ ದಿನ ಸಂಜೆ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಎಂ.ಆರ್.ಜಿ ಗ್ರೂಪ್ ಅಧ್ಯಕ್ಷ ಹಾಗೂ ಮಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ ವಹಿಸಲಿದ್ದಾರೆ. ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಇತರ ಗಣ್ಯರು ಭಾಗವಹಿಸುವರು ಎಂದರು.
ಪೇಟಾದಿಂದ ಕಂಬಳಕ್ಕೆ ತೊಂದರೆಯಾದ ಸಂದರ್ಭದಲ್ಲಿ ಮಂಗಳೂರು ಕಂಬಳ ಹುಟ್ಟಿಗೆ ಕಾರಣವಾಗಿತ್ತು. ನಗರದ ಜನತೆಗೂ ಕಂಬಳದ ಸವಿ ಸಿಗಬೇಕು, ದೇಶ- ವಿದೇಶಕ್ಕೆ ಕಂಬಳದ ಕಂಪು ಹರಡಬೇಕು ಎನ್ನುವ ಉದ್ದೇಶದಲ್ಲಿ ಕಂಬಳ ಆರಂಭಿಸಲಾಗಿತ್ತು. ಆನಂತರ, ಪೇಟಾ ಕ್ಯಾತೆಯನ್ನು ಮೆಟ್ಟಿ ನಿಂತು ಕೇಂದ್ರ ಮತ್ತು ರಾಜ್ಯ ಸರಕಾರದ ಒತ್ತಾಸೆಯಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಎಂಟನೇ ವರ್ಷವೂ ಅದೇ ಹುಮ್ಮಸ್ಸಿನಲ್ಲಿ ಕಂಬಳ ನಡೆಸುತ್ತಿದ್ದೇವೆ. ಈ ಬಾರಿಯೂ ಆರು ವಿಭಾಗದಲ್ಲಿ 150ಕ್ಕೂ ಹೆಚ್ಚು ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಕಂಬಳ ಸಮಿತಿ ಉಪಾಧ್ಯಕ್ಷ ಈಶ್ವರ್ ಪ್ರಸಾದ್ ಶೆಟ್ಟಿ ಮಾತನಾಡಿ, 'ಕಂಬಳದ ಅಂಗವಾಗಿ ಮಕ್ಕಳಿಗಾಗಿ ಕಲರ್ ಕೂಟ ಡ್ರಾಯಿಂಗ್ ಸ್ಪರ್ಧೆ ನಡೆಯಲಿದೆ. 10 ವರ್ಷದ ವರೆಗಿನ ಮಕ್ಕಳು 'ರಂಗ್‌ದ ಎಲ್ಯ', 10ರಿಂದ 15 ವರ್ಷದೊಳಗಿನ ಮಕ್ಕಳು 'ರಂಗ್‌ದ ಮಲ್ಲ' ವಿಭಾಗದಲ್ಲಿ ಭಾಗವಹಿಸಬಹುದು. ರಂಗ್ ಕೂಟ ವಿಭಾಗದಲ್ಲಿ ವಯೋಮಿತಿಯ ನಿರ್ಬಂಧ ಇಲ್ಲ. ಫೋಟೊಗ್ರಫಿ ಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆಗಳೂ ನಡೆಯಲಿವೆ. ರೀಲ್ಸ್ ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ #mangalurukambala8 ಹ್ಯಾಷ್ ಟ್ಯಾಗ್ ಬಳಸಬೇಕು ಎಂದರು.
ಕ್ರೂಸ್ ಟೂರಿಸಂ ಬೆಳೆಯಬೇಕಿದೆ
ಕಂಬಳದಿಂದ ಪ್ರವಾಸೋದ್ಯಮ ಉತ್ತೇಜನಕ್ಕೆ ಸಂಸದನಾಗಿ ಏನು ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಚೌಟ, ಈ ಬಾರಿ ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕಾಗಿ ಬಹಳಷ್ಟು ಜನರು ವಿದೇಶಗಳಿಂದ ಆಗಮಿಸಿದ್ದಾರೆ. ವಿದೇಶಿಗರು ಬರುವುದಕ್ಕಾಗಿ ಕ್ರೂಸ್ ಟೂರಿಸಂ ಬೆಳೆಯಬೇಕಾಗಿದೆ. ಕ್ರೂಸ್ ಗಳಲ್ಲಿ ಪ್ರವಾಸಿಗರು ಬರುತ್ತಿದ್ದರೂ, ಅದು ಒಂದು ದಿನಕ್ಕೆ ಬಂದು ಹೋಗುವ ಪ್ರೋಗ್ರಾಂ ಆಗಿದೆ. ಕ್ರೂಸ್ ಇಲ್ಲಿಯೇ ನಿಲ್ಲುವಂತಾದರೆ ಪ್ರವಾಸೋದ್ಯಮಕ್ಕೆ ಇನ್ನಷ್ಟು ಒತ್ತು ಸಿಗಬಹುದು. ಕ್ರೂಸ್ ವೇಳಾಪಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರವಾಗುತ್ತಿದ್ದು, ಈ ಬಗ್ಗೆ ಕೇಂದ್ರ ಸಚಿವರಿಗೂ ಮನವರಿಕೆ ಮಾಡಿದ್ದೇನೆ. ಇದಲ್ಲದೆ, ಮಂಗಳೂರು ಏರ್ಪೋರ್ಟಿಗೆ ವಿದೇಶಿ ವಿಮಾನಗಳು ಬರುವಂತಾಗಲು ಸ್ಟೇಟಸ್ ಆಫ್ ಕಾಲ್ ಎನ್ನುವ ಮಾನ್ಯತೆ ದೊರಕಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದ ಬೋಯಿಂಗ್ ಇನ್ನಿತರ ಆಧುನಿಕ ವಿಮಾನಗಳು ಮಂಗಳೂರಿಗೆ ಬರುವಂತಾದರೆ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಇವೆಲ್ಲ ಒಂದೇ ಹಂತದಲ್ಲಿ ಆಗುವುದಿಲ್ಲ. ನಿರಂತರ ಪ್ರಯತ್ನದಿಂದ ಆಗಬೇಕಷ್ಟೇ ಎಂದು ಹೇಳಿದರು.
ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಂಬಳವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಲ್ಲಿ ಕಂಬಳ ಒಕ್ಕೂಟ ಸೇರಿದಂತೆ ಎಲ್ಲರ ಜವಾಬ್ದಾರಿಯಿದೆ. ಒಲಿಂಪಿಕ್ ಸ್ಪರ್ಧೆಗೆ ಸೇರಿಸಬೇಕೆಂಬ ಪ್ರಯತ್ನವೂ ಆಗುತ್ತಿದೆ. ಇದಕ್ಕಾಗಿ ಕಂಬಳವನ್ನು ಕ್ರೀಡೆಯನ್ನಾಗಿಸುವಲ್ಲಿ ಕಾನೂನು ಚೌಕಟ್ಟು ಬದಲಾಗಬೇಕಿದೆ. ಈಗಾಗಲೇ ಬೆಂಗಳೂರು ಕಂಬಳ ನಡೆಸಬಾರದೆಂದು ಪೇಟಾ ಕೋರ್ಟ್ ಕಟ್ಟೆ ಹತ್ತಿದೆ. ಯಾಕಂದ್ರೆ, ಕಳೆದ ಬಾರಿ ಕಾನೂನು ತಿದ್ದುಪಡಿ ಆದ ಸಂದರ್ಭದಲ್ಲಿ ಕರಾವಳಿಗೆ ಸೀಮಿತ ಎನ್ನುವಂತೆ ಪ್ರಾದೇಶಿಕ ಚೌಕಟ್ಟು ನೀಡಲಾಗಿತ್ತು. ಇದೇ ಹುಳುಕನ್ನು ಹಿಡಿದು ಪೇಟಾ ಬೆಂಗಳೂರು ಕಂಬಳ ವಿರುದ್ಧ ಕ್ಯಾತೆ ತೆಗೆದಿದೆ. ಕರಾವಳಿಗೆ ಸೀಮಿತಗೊಳಿಸದೆ ದೇಶ ಮಟ್ಟದಲ್ಲಿ ಆಯೋಜನೆ ಆಗುವಂತಾಗಲು ಕಾನೂನು ಮತ್ತಷ್ಟು ಪ್ರಬಲವಾಗಬೇಕಾಗಿದೆ ಎಂದು ಹೇಳಿದರು.
29ರಂದು ಕಂಬಳದ ಫೈನಲ್ ಸ್ಪರ್ಧೆ
ಎರಡು ದಿನಗಳ ಮಂಗಳೂರು ಕಂಬಳದಲ್ಲಿ ಎಲ್ಲ ವಿಭಾಗದ ಫೈನಲ್ ಸ್ಪರ್ಧೆ ಡಿ.29ರಂದು ಬೆಳಗ್ಗೆ ನಡೆಯುತ್ತದೆ. ಕಂಬಳವನ್ನು ಹತ್ತಿರದಿಂದ ಬಲ್ಲವರಿಗೆ ಹೊರತಾಗಿ ಜನಸಾಮಾನ್ಯರಿಗೆ ಭಾನುವಾರ ಕಂಬಳದ ಫೈನಲ್ ನಡೆಯುತ್ತದೆ ಎನ್ನುವುದು ತಿಳಿದಿಲ್ಲ. ಈ ಕಾರಣಕ್ಕೆ ಹೊಸ ವರ್ಷಕ್ಕಾಗಿ ಕರಾವಳಿಗೆ ಬಂದವರೆಲ್ಲ 29ರ ಬೆಳಗ್ಗೆಯೂ ಫೈನಲ್ ಸ್ಪರ್ಧೆಯ ಹಣಾಹಣಿಯನ್ನು ಕಣ್ತುಂಬಿಕೊಳ್ಳಬಹುದು ಎಂದು ಸಂಸದ ಚೌಟ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುಜಿತ್ ಪ್ರತಾಪ್, ನಂದನ್ ಮಲ್ಯ, ಅಶೋಕ್ ಕೃಷ್ಣಾಪುರ, ಕಿರಣ್ ಕೋಡಿಕಲ್, ವಸಂತ ಪೂಜಾರಿ, ಪ್ರಕಾಶ್ ಗರೋಡಿ ಮತ್ತಿತರರಿದ್ದರು.
The eighth annual Mangaluru Kambala organised by Mangaluru Kambala Samithi will be held for two days at Goldfinch City at Bangra Kuloor from September 28, according to Capt. Brijesh Chowta, MP, Dakshina Kannada and president of the samithi.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm