Mangalore Manjanady gas explosion; ಮಂಜನಾಡಿ ಗ್ಯಾಸ್ ಸಿಲಿಂಡರ್ ಸ್ಫೋಟ ; ಮತ್ತೋರ್ವ ಬಾಲಕಿಯೂ ಸಾವು, ತಾಯಿ ಮತ್ತು ಇಬ್ಬರು ಪುತ್ರಿಯರು ದುರ್ಮರಣ 

29-12-24 03:22 am       Mangaluru Correspondent   ಕರಾವಳಿ

ಮಂಜನಾಡಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ (9) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದು, ದುರಂತದಲ್ಲಿ ತಾಯಿ, ಇಬ್ಬರು ಪುತ್ರಿಯರು ದಾರುಣ ಮೃತಪಟ್ಟಿದ್ದಾರೆ. 

ಉಳ್ಳಾಲ, ಡಿ.29: ಮಂಜನಾಡಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಾತಿಮತ್ ಮಾಯಿಝ (9) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಂಜೆ ಮೃತಪಟ್ಟಿದ್ದು, ದುರಂತದಲ್ಲಿ ತಾಯಿ, ಇಬ್ಬರು ಪುತ್ರಿಯರು ದಾರುಣ ಮೃತಪಟ್ಟಿದ್ದಾರೆ. 

ಡಿಸೆಂಬರ್ 8ರಂದು ಮಂಜನಾಡಿ ಗ್ರಾಮದ ಖಂಡಿಕ ನಿವಾಸಿಯಾಗಿದ್ದ ಮುತ್ತಲಿಬ್ ಅವರ ಮನೆಯಲ್ಲಿ ತಡರಾತ್ರಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಪೋಟಿಸಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಕೋಣೆಯಲ್ಲಿ ಮಲಗಿದ್ದ ಮುತ್ತಲಿಬ್ ಅವರ ಪತ್ನಿ ಖುಬ್ರಾ ಮತ್ತು ಮಕ್ಕಳಾದ ಮೆಅದಿಯಾ, ಮಾಝಿಯಾ ಮತ್ತು ಮಾಯಿದಾ ಸುಟ್ಟು ಗಾಯಗೊಂಡಿದ್ದು, ಅವರನ್ನ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪೋಟದ ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿತ್ತು.

ಮುತ್ತಲಿಬ್ ಅವರ ಪತ್ನಿ ಖುಬ್ರಾ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿ.13ರಂದು ಮೃತಪಟ್ಟಿದ್ದರು. ಕಳೆದ ಗುರುವಾರ ಖುಬ್ರಾ ಅವರ ಹಿರಿಯ ಮಗಳು ಝುಲೇಕ ಮೆಅದಿಯ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. 

ಮತ್ತೋರ್ವ ಮಗಳು ಮಾಯಿದಾ ಚಿಕಿತ್ಸೆಗೆ ಸ್ಪಂದಿಸಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಮಗಳು ಫಾತಿಮತ್ ಮಾಯಿಝ ಶನಿವಾರ ಮೃತಪಟ್ಟಿದ್ದಾಳೆ. ಮೃತಳು ಮೊಂಟೆಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಮುತ್ತಲೀಬ್ ಅವರ ಏಕೈಕ ಪುತ್ರಿ ಮಾಯಿದಾ ಬದುಕುಳಿದಿದ್ದು, ಆಕೆ ಆಸ್ಪತ್ರೆಯಿಂದ ಬಿಡುಗಡೆ ಆಗಿ ಅಜ್ಜಿ ಜೊತೆ ಆಶ್ರಯ ಪಡೆದಿದ್ದಾಳೆ.

ಘಟನಾ ಸ್ಥಳಕ್ಕೆ ಶನಿವಾರ ಬೆಳಗ್ಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಳಿಕ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಗ್ಯಾಸ್ ಸೋರಿಕೆಯಿಂದ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಸಂಬಂಧಿಸಿ ಶಿಷ್ಟಾಚಾರ ಪ್ರಕಾರ ದಾಖಲೆ ಸಹಿತ ವರದಿ ನೀಡಬೇಕು ಎಂದು ಎಚ್.ಪಿ ಗ್ಯಾಸ್ ನ ವಲಯ ಮಾರುಕಟ್ಟೆ ಸಿಬ್ಬಂದಿ ರಾಹುಲ್ ಗೆ ಖಾದರ್ ಸೂಚನೆ ನೀಡಿದ್ದಾರೆ. ಆಯಾ ಇಲಾಖೆಗೆ ಸಂಬಂಧಿಸಿದ ವರದಿ ಶೀಘ್ರ ನೀಡಬೇಕು ಎಂದು ಅಧಿಕಾರಿಗಳಿಗೂ ಖಾದರ್ ಸೂಚಿಸಿದ್ದಾರೆ.

The tragic gas explosion that occurred at a house in Khandige, Manjanady village, on December 8 has claimed another life. Fatimath Maizha (9), who was undergoing treatment at a private hospital, has passed away, raising the death toll to three. In the incident, the mother and three daughters had sustained severe burns and injuries.