ಬ್ರೇಕಿಂಗ್ ನ್ಯೂಸ್
29-12-24 10:02 pm Mangalore Correspondent ಕರಾವಳಿ
ಉಳ್ಳಾಲ, ಡಿ.29: ಸಮುದ್ರ ಪಾಲಾಗುತ್ತಿದ್ದ ಅಣ್ಣನ ಮಗಳನ್ನ ರಕ್ಷಿಸಿ ದಡಕ್ಕೆ ಕರೆತಂದ ವ್ಯಕ್ತಿಯೇ ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮೇಶ್ವರ ಉಚ್ಚಿಲದ ಪೆರಿಬೈಲು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಬೆಂಗಳೂರಿನ ಶಿವಾಜಿ ನಗರದ ಶಿವಾಜಿ ರೋಡ್ ನಿವಾಸಿ ಕೆ.ಎಂ. ಸಜ್ಜದ್ ಆಲಿ (45)ಮೃತ ವ್ಯಕ್ತಿ. ಸಜ್ಜದ್ ಅವರ ಅತ್ತಿಗೆ, ಮಕ್ಕಳು ಮತ್ತು ಸಹೋದರ ನಿನ್ನೆ ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಸಂಬಂಧಿಕರ ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆ ಮುಗಿಸಿ ಸಜ್ಜದ್ ಅವರ ಪತ್ನಿ ಅಲಿಮಾ ರಶೀದಾರವರ ಮಂಗಳೂರಿನ ಪಡೀಲಿನಲ್ಲಿರುವ ತಾಯಿ ಮನೆಯಲ್ಲಿ ರಾತ್ರಿ ಉಳಿದಿದ್ದರು. ಇಂದು ಬೆಂಗಳೂರಿನಿಂದ ಬಂದ ಸಜ್ಜದ್ ಆಲಿರವರು ಕುಟಂಬಸ್ಥರೊಂದಿಗೆ ಒಟ್ಟು 11 ಜನರು ಒಟ್ಟಾಗಿ ಮದ್ಯಾಹ್ನ ವೇಳೆಗೆ ಸೋಮೇಶ್ವರದ ಉಚ್ಚಿಲ ಪೆರಿಬೈಲು ಬೀಚಿಗೆ ಬಂದಿದ್ದರು.
ಬೀಚ್ ನಲ್ಲಿ ಕುಟುಂಬಸ್ಥರು ನೀರಾಟವಾಡುತ್ತಿದ್ದಾಗ ಸಜ್ಜದ್ ಅವರ ಅಣ್ಣನಾದ ದಿವಂಗತ ಸಾದಿಕ್ ಆಲಿಯವರ ಮಗಳು ಉಮೈ ಆಸಿಯಾ ಎಂಬಾಕೆ ಏಕಾಏಕಿ ಆಯತಪ್ಪಿ ಸಮುದ್ರದ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು ಸ್ವಲ್ಪ ದೂರಕ್ಕೆ ಹೋಗಿದ್ದು ಪ್ರಾಣ ರಕ್ಷಣೆಗೆ ಬೊಬ್ಬಿಟ್ಟಿದ್ದಾಳೆ. ಕೂಡಲೇ ಸಜ್ಜದ್ ಅಲಿಯವರು ಸಮುದ್ರಕ್ಕೆ ಧುಮುಕಿ ಆಸಿಯಾಳನ್ನು ಎಳೆದು ತಂದು ದಡಕ್ಕೆ ಹಾಕಿದ್ದಾರೆ. ಅದೇ ಸಂದರ್ಭ ತೀರಕ್ಕೆ ಅಪ್ಪಳಿಸಿದ ದೈತ್ಯಾಕಾರದ ಮತ್ತೊಂದು ಅಲೆಯೊಂದು ಸಜ್ಜದ್ ಅವರನ್ನು
ಸಮುದ್ರದತ್ತ ಸೆಳೆದುಕೊಂಡಿದೆ. ಅದರ ಬೆನ್ನಲ್ಲೇ ಸಮುದ್ರದ ಅಲೆಯಲ್ಲಿ ಮತ್ತೆ ಸಜ್ಜದ್ ನೇರವಾಗಿ ತೀರಕ್ಕೆ ಬಂದು ಬಿದ್ದಿದ್ದಾರೆ. ಅಲೆಯಲ್ಲಿ ಅಪ್ಪಳಿಸಿದ ರೀತಿ ಬಿದ್ದಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನ ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತೆನ್ನಲಾಗಿದೆ. ಜೀವನ್ಮರಣ ಸ್ಥಿತಿಯಲ್ಲಿದ್ದ ಸಜ್ಜದ್ ಅವರನ್ನ ಆಸ್ಪತ್ರೆಗೆ ಒಯ್ಯುತ್ತಿದ್ದ ದಾರಿ ಮಧ್ಯದ ಸಂಕೊಲಿಗೆ ಎಂಬಲ್ಲಿ ರೈಲ್ವೇ ಗೇಟ್ ಹಾಕಿದ್ದ ಕಾರಣ ಆಸ್ಪತ್ರೆ ಸೇರಲು ವಿಳಂಬವಾಗಿದೆ ಎನ್ನಲಾಗಿದೆ.
ಮೃತ ಕೆ.ಎಂ. ಸಜ್ಜದ್ ಅವರು ಪುತ್ತೂರಿನ ಅಲಿಮಾ ರಶೀದಾರವರನ್ನು ಮದುವೆಯಾಗಿದ್ದು ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಮಕ್ಕಳ ವಿಧ್ಯಾಭ್ಯಾಸಕ್ಕಾಗಿ ಕಳೆದ 4 ವರುಷದಿಂದ ಪುತ್ತೂರಿನ ಬಾಡಿಗೆ ಫ್ಲ್ಯಾಟ್ ಒಂದರಲ್ಲಿ ಸಜ್ಜದ್ ಕುಟುಂಬ ವಾಸ ಮಾಡಿಕೊಂಡಿತ್ತು. ಸಜ್ಜದ್ ಆಲಿಯವರು ರಿಯಲ್ ಎಸ್ಟೇಟ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದು ವಾರಕ್ಕೊಮ್ಮೆ ಪುತ್ತೂರಿಗೆ ಬರುತ್ತಿದ್ದರು. ಮೃತ ಸಜ್ಜದ್ ಅವರ ತಮ್ಮ ಮಹಮ್ಮದ್ ಮುಜಮಿಲ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Mangalore 45 year old man from Bangalore drowned at Someshwara Beach trying to rescue brothers daughter. The deceased has been identified as Sajad Ali.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm