ಬ್ರೇಕಿಂಗ್ ನ್ಯೂಸ್
30-12-24 03:41 pm Mangalore Correspondent ಕರಾವಳಿ
ಮಂಗಳೂರು, ಡಿ.30: ಹೊಸ ವರ್ಷದ ಸಂದರ್ಭದಲ್ಲಿ ಶುಭ ಕೋರುವ ಸಂದೇಶಗಳು ಮೊಬೈಲ್ ನಲ್ಲಿ ರಾಶಿ ಬೀಳುವುದು ಕಾಮನ್. ಆದರೆ ಈ ಬಾರಿ ಸೈಬರ್ ಖದೀಮರು ಹೊಸ ವರ್ಷದ ಸಡಗರದಲ್ಲೇ ನಿಮ್ಮನ್ನು ಯಾಮಾರಿಸಲು ರೆಡಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸರು ಸಾರ್ವಜನಿಕರಿಗೆ ಹೊಸ ವರ್ಷದ ಸಂದೇಶಗಳ ಬಗ್ಗೆ ಜಾಗ್ರತೆ ಇರುವಂತೆ ಸೂಚನೆ ನೀಡಿದ್ದಾರೆ.
ಹೊಸ ವರ್ಷಕ್ಕೆ ಶುಭಕೋರುವ ನೆಪದಲ್ಲಿ ಹಾನಿಕಾರಕ ಲಿಂಕ್ ಅಥವಾ APK ಫೈಲ್ ಗಳನ್ನು ಮೊಬೈಲಿಗೆ ಕಳುಹಿಸುವ ಸಾಧ್ಯತೆಯಿದೆ. ಹಾನಿಕಾರಕ ಮೆಸೇಜ್ ಗಳನ್ನು ಕಳುಹಿಸಿ ಮೊಬೈಲ್ ಫೋನ್ ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯೂ ಇರುತ್ತದೆ. ಹ್ಯಾಕ್ ಮಾಡಿದ ಮೊಬೈಲಿನಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಅಥವಾ ಎಪಿಕೆ ಫೈಲ್ ಗಳನ್ನು ದೊಡ್ಡ ಮಟ್ಟದಲ್ಲಿ ಷೇರ್ ಮಾಡುವ ಸಾಧ್ಯತೆ ಇರುತ್ತದೆ.
ಸಾರ್ವಜನಿಕರು ಶಂಕಾಸ್ಪದ ರೀತಿಯ ಹೊಸ ವರ್ಷಕ್ಕೆ ಶುಭಕೋರುವ ಮೆಸೇಜ್ ಗಳನ್ನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಸ್ವೀಕರಿಸಿದಲ್ಲಿ ತಕ್ಷಣ ಡಿಲೀಟ್ ಮಾಡಬೇಕು. ಯಾವುದೇ ಕಾರಣಕ್ಕೂ ಇಂತಹ ಲಿಂಕ್ ಗಳನ್ನು ಇತರರಿಗೆ ಫಾರ್ವರ್ಡ್ ಮಾಡಬೇಡಿ ಮತ್ತು ಅಂತಹ ಲಿಂಕ್ ಮೇಲೆ ಕ್ಲಿಕ್ ಮಾಡಲೇಬೇಡಿ ಎಂದು ಸೈಬರ್ ಪೊಲೀಸರು ಸೂಚಿಸಿದ್ದಾರೆ.
ಶಂಕಾಸ್ಪದ ರೀತಿಯ ಲಿಂಕ್ ಅಥವಾ ಎಪಿಕೆ ಫೈಲ್ ವಾಟ್ಸಾಪ್ ಗ್ರೂಪ್ ಗಳಲ್ಲಿ ಕಂಡುಬಂದ ಕೂಡಲೇ ಗ್ರೂಪ್ ಅಡ್ಮಿನ್ ಗಳು ಮುಂಜಾಗ್ರತೆ ವಹಿಸಬೇಕು. ಪರಿಚಿತ ಮೊಬೈಲ್ ನಂಬರಿನಿಂದಲೇ ಇಂತಹ ಲಿಂಕ್ ಷೇರ್ ಆದರೂ, ಅದನ್ನು ಡೌನ್ಲೋಡ್ ಮಾಡಿಕೊಳ್ಳಬಾರದು. ಅಂತಹ ಫೈಲ್ ಗಳನ್ನು ಸಾಧ್ಯವಾದರೆ ಡಿಲೀಟ್ ಮಾಡಬೇಕು. ಕ್ಲಿಕ್ ಮಾಡಿದ ಕೂಡಲೇ ಸುಲಭದಲ್ಲಿ ಡೌನ್ಲೋಗ್ ಆಗಬಲ್ಲ ಸಾಧ್ಯತೆಗಳಿದ್ದು, ಅವು ತಕ್ಷಣವೇ ನಿಮ್ಮ ಸಂಪರ್ಕದಲ್ಲಿರುವ ಎಲ್ಲರ ನಂಬರಿಗೂ ರವಾನೆಯಾದೀತು. ಹಾಗಾಗಿ, ಸೈಬರ್ ಅಟ್ಯಾಕ್ ಸುಲಭದಲ್ಲಿ ಆಗಬಹುದಾಗಿದೆ.
ಸೈಬರ್ ವಂಚಕರು ಈ ರೀತಿಯ ಲಿಂಕ್ ನಿಂದಲೇ ನಿಮ್ಮ ಮೊಬೈಲಿನಲ್ಲಿ ಇರಬಹುದಾದ ಎಲ್ಲ ಮಾಹಿತಿಗಳನ್ನೂ ಪಡೆಯಬಹುದು. ಇದಕ್ಕಾಗಿ ಸಾರ್ವಜನಿಕರು ಜಾಗ್ರತೆ ವಹಿಸಬೇಕು ಮತ್ತು ಯಾವುದೇ ರೀತಿಯ ಸೈಬರ್ ಅಪರಾಧಕ್ಕೆ ಒಳಗಾದಲ್ಲಿ ತಕ್ಷಣವೇ 1930 ನಂಬರಿಗೆ ಕರೆ ಮಾಡಿ. ಅಥವಾ www.cybercrime.gov.in ಈ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬಹುದು ಎಂದು ಪೊಲೀಸರು ಕೋರಿದ್ದಾರೆ.
ಕಳೆದ ವರ್ಷವೂ ಆಗಿತ್ತು ಸೈಬರ್ ಅಟ್ಯಾಕ್
ಕಳೆದ ವರ್ಷವೂ ಹೊಸ ವರ್ಷ ಸಡಗರದ ಸಂದರ್ಭದಲ್ಲಿ ಕೆಲವು ಶಂಕಾಸ್ಪದ ಶುಭಕೋರುವ ಮೆಸೇಜ್ಗಳು ಬಂದಿದ್ದವು. ವಾಟ್ಸಪ್ ನಲ್ಲಿ ಬಂದ ಈ ಮೆಸೇಜ್ ಗಳನ್ನು ಕ್ಲಿಕ್ ಮಾಡಿದ ಕೂಡಲೇ ನಮ್ಮ ಸಂಪರ್ಕದಲ್ಲಿರುವ ಎಲ್ಲ ವಾಟ್ಸಪ್ ಗ್ರೂಪ್ ಗಳಿಗೂ ರವಾನೆಯಾಗುತ್ತದೆ. ಅಲ್ಲದೆ, ಅವರ ಸ್ನೇಹಿತರ ಲಿಸ್ಟ್ ನಲ್ಲಿರುವ ಎಲ್ಲರಿಗೂ ರವಾನೆಯಾಗುತ್ತದೆ. ಈ ರೀತಿಯ ಫೈಲ್ ಬಂದಲ್ಲಿ ಅದನ್ನು ಮುಟ್ಟಲು ಹೋಗದೆ ದೂರವಿದ್ದರೆ ಒಳ್ಳೆಯದು. ಈ ಬಾರಿ ಸೈಬರ್ ಅಪರಾಧಗಳು ವಿಪರೀತವಾಗಿ ಹೆಚ್ಚಿರುವುದರಿಂದ ಪೊಲೀಸರೇ ಜಾಗ್ರತೆಯಲ್ಲಿರುವಂತೆ ಕೇಳಿಕೊಂಡಿದ್ದಾರೆ.
Mangaluru Police Commissioner Anupam Agarwal has urged the residents of the city to be vigilant and cautious as there are possibilities of cyber fraudsters targeting people on the occasion of New Year.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm