ಬ್ರೇಕಿಂಗ್ ನ್ಯೂಸ್
31-12-24 10:10 pm Mangalore Correspondent ಕರಾವಳಿ
ಉಳ್ಳಾಲ, ಡಿ.31: ತಾನು ಪ್ರತಿನಿಧಿಸುತ್ತಿರುವ 18ನೇ ವಾರ್ಡನ್ನು ಉಳ್ಳಾಲ ನಗರಸಭೆ ಸಂಪೂರ್ಣ ನಿರ್ಲಕ್ಷಿಸಿದ್ದು, ಮುನ್ಸಿಪಾಲಿಟಿ ಸದಸ್ಯನ ಕರ್ತವ್ಯ ನಿಭಾಯಿಸಲು ತಡೆದದ್ದಲ್ಲದೆ, ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿ ನಗರಸಭೆ ಸದಸ್ಯ ದಿನಕರ್ ಉಳ್ಳಾಲ್ ಸಾಮಾನ್ಯ ಸಭೆಯಲ್ಲಿ ಏಕಾಂಗಿ ಪ್ರತಿಭಟನೆ ನಡೆಸಿ, ಸಭಾತ್ಯಾಗ ಮಾಡಿದ್ದಾರೆ.
ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರ ಸದಸ್ಯ ದಿನಕರ್ ಉಳ್ಳಾಲ್ ಅವರು ಸಭಾಧ್ಯಕ್ಷರ ಆಸನದ ಮುಂದೆ ಕಪ್ಪು ಪಟ್ಟಿ ಧರಿಸಿ ಧರಣಿ ಕುಳಿತು "ಗಾಂಧೀಜಿ ನಾನು ಈಗಲೂ ಗುಲಾಮ" ಎಂದು ಬರೆದಿರುವ ಭಿತ್ತಿ ಪತ್ರವನ್ನ ಪ್ರದರ್ಶಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಇಂಜಿನಿಯರ್ ತುಳಸೀದಾಸ್ ಅವರು, ದಿನಕರ್ ಅವರ ವಾರ್ಡ್ ನಲ್ಲಿ 2021- 22ರ ಸಾಲಿನಲ್ಲಿ 4.5 ಲಕ್ಷದ ಕಾಮಗಾರಿ ಮಾಡಲಾಗಿದೆ. 15 ನೇ ಹಣಕಾಸಿನಲ್ಲಿ ಪೈಪ್ ಲೈನ್ ಗೆ 4 ಲಕ್ಷ, ಚರಂಡಿ ಕಾಮಗಾರಿಗೆ 2.5 ಲಕ್ಷ ಸಹಿತ ಒಟ್ಟು 17.5 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲಾಗಿದೆ ಎಂದು ಸಬೂಬು ನೀಡಿದರು. ಇಂಜಿನಿಯರ್ ಸಬೂಬಿಗೆ ಮತ್ತಷ್ಟು ಅಸಮಾಧಾನಗೊಂಡ ದಿನಕರ್ ಅವರು ಸುಳ್ಳು ಹೇಳಲು ಗಾಂಧೀಜಿ ಕಲಿಸಲಿಲ್ಲ. ಅಷ್ಟೊಂದು ಮೊತ್ತದ ಕಾಮಗಾರಿ ಆಗಿದ್ದೇ ಆದಲ್ಲಿ ಮಂಜೂರು ಮಾಡಲಾದ ಹಣದ ಬಗ್ಗೆ ದಾಖಲೆ ತೋರಿಸಿ ಎಂದು ಪ್ರಶ್ನಿಸಿದರು. ಪ್ರತಿಭಟನೆ ಮುಂದುವರಿಸಿದ ಅವರು ಸಭಾಧ್ಯಕ್ಷರು ಮತ್ತು ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ರಸ್ತೆ ಧೂಳಿಂದ ನಾನೇ ರೋಗಗ್ರಸ್ಥ!ಇಂಜಿನಿಯರ್ಗೆ ಭಾರತ ರತ್ನ ನೀಡಿ
ಆಡಳಿತ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ ಮಾತನಾಡಿ ನನ್ನ ವಾರ್ಡಿನ ಹಿಲರಿ ನಗರದ ರಸ್ತೆಯ ಧೂಳು ತಿಂದೇ ನಾನು ಅರ್ಧ ರೋಗಗ್ರಸ್ಥನಾಗಿದ್ದೇನೆ. ವಾರ್ಡ್ ವ್ಯಾಪ್ತಿಯಲ್ಲಿ ಏಳು ಲಕ್ಷದ ಕಾಮಗಾರಿ ಬಿಟ್ಟು ಬೇರೇನೂ ಆಗಿಲ್ಲ. ನನಗೆ ವಯಸ್ಸಾಯಿತು. ಇನ್ನು ಯಾರಲ್ಲೂ ಹೋರಾಡುವ ಶಕ್ತಿ ಇಲ್ಲ. ನಗರಸಭೆಯ ಇಂಜಿನಿಯರ್ ಅವರಿಗೆ ಒಂದು ಭಾರತ ರತ್ನ ಪ್ರಶಸ್ತಿ ನೀಡಿ ಕಳುಹಿಸಿ ಕೊಡಿ ಎಂದು ಕರ್ತವ್ಯ ನಿಭಾಯಿಸದ ಅಧಿಕಾರಿಯನ್ನ ಪರೋಕ್ಷವಾಗಿ ಕುಟುಕಿದರು. ನಗರಸಭೆ ವ್ಯಾಪ್ತಿಗೊಳಪಡುವ ತೊಕ್ಕೊಟ್ಟು ಕೇಂದ್ರ ಬಸ್ಸು ತಂಗುದಾಣದಲ್ಲಿ ದಿವಸಕ್ಕೆ ನೂರಾರು ಖಾಸಗಿ ಬಸ್ಸುಗಳು ಓಡಾಡುತ್ತವೆ. ಮಂಗಳೂರು ಮಹಾನಗರ ಪಾಲಿಕೆ ಶೈಲಿಯಲ್ಲೇ ಬಸ್ಸುಗಳಿಂದ ನಿಲುಗಡೆ ಶುಲ್ಕ ಸಂಗ್ರಹಿಸಬೇಕೆಂದರು. ಟ್ರೇಡ್ ಲೈಸೆನ್ಸ್ ಅದಾಲತ್ ಮಾಡಿದಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನಗರಸಭೆಗೆ ಆದಾಯ ಬರುವುದೆಂದು ಮಹಮ್ಮದ್ ಮುಕ್ಕಚ್ಚೇರಿ ಸಲಹೆ ನೀಡಿದರು.
ಶೀಟ್ ಕಳ್ಳತನ; ಬಿಜೆಪಿ ಸದಸ್ಯೆಯ ಅರಣ್ಯರೋದನ!
ನಗರಸಭೆ ಕಟ್ಟಡದ ಪಕ್ಕದಲ್ಲಿ ಹೊಸ ಗ್ರಂಥಾಲಯ ಕಟ್ಟುವ ಸಲುವಾಗಿ ಹಳೆಯ ಕಟ್ಟಡ ನೆಲಸಮಗೊಳಿಸಲಾಗಿತ್ತು. ನೆಲಸಮ ಕಾಮಗಾರಿ ನೆಪದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಗಾಗಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಿಲಿಕಾನ್ ಶೀಟ್ ಟೆಂಟನ್ನೆ ಅಕ್ರಮವಾಗಿ ಕೆಡವಿ ಸೊತ್ತುಗಳನ್ನ ಮಾರಾಟ ಮಾಡಲಾಗಿತ್ತು. ಹಿಂದಿನ ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಗರ ಸದಸ್ಯರು ಶೀಟ್ ಕಳ್ಳತನ ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸಲು ಆಗ್ರಹಿಸಿದ್ದರು. ಬಿಜೆಪಿ ಮತ್ತು ಎಸ್ಡಿಪಿಐ ಪಕ್ಷದ ಕೌನ್ಸಿಲರ್ ಗಳು ಶೀಟ್ ಕಳ್ಳತನದ ಬಗ್ಗೆ ಧ್ವನಿ ಎತ್ತಿದ್ದರು. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತ್ರ ವಿರೋಧ ಪಕ್ಷ ಬಿಜೆಪಿ ಸದಸ್ಯೆ ನಮಿತಾ ಗಟ್ಟಿ ಏಕಾಂಗಿಯಾಗಿ ಶೀಟ್ ಕಳ್ಳತನದ ಬಗ್ಗೆ ಧ್ವನಿಯೆತ್ತಿದ್ದಾರೆ. ನಮಿತ ಅವರ ಪ್ರಶ್ನೆಗೆ ಸಭಾಧ್ಯಕ್ಷರು ಮತ್ತು ಪೌರಾಯುಕ್ತರು ತಮಗೇನೂ ಗೊತ್ತೇ ಇಲ್ಲವೆಂಬಂತೆ ಏನೂ ಉತ್ತರಿಸದೆ ಮೌನಕ್ಕೆ ಜಾರಿದ್ದಾರೆ.
Negeligence towards development of the ward, man does lonely protest inside the panchayat office at Ullal in Mangalore.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm