ಬ್ರೇಕಿಂಗ್ ನ್ಯೂಸ್
01-01-25 11:18 am Mangalore Correspondent ಕರಾವಳಿ
ಮಂಗಳೂರು, ಜ.1: ನಗರ ಹೊರವಲಯದ ಅರ್ಕುಳ ಬಳಿ ನಡೆದ ಅಪಘಾತದಲ್ಲಿ ಸಸಿಹಿತ್ಲು ಯಕ್ಷಗಾನ ಮೇಳದ ಸ್ತ್ರೀ ವೇಷಧಾರಿ ಪ್ರವೀತ್ ಆಚಾರ್ಯ (22) ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ ಡಬ್ಲ್ಯು ಮಾಡುತ್ತಿದ್ದ ಪ್ರವೀತ್ ಇದರ ಜೊತೆಗೆ ಸಸಿಹಿತ್ಲು ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿದ್ದರು. ಮಂಗಳವಾರ ಬೈಕ್ ನಲ್ಲಿ ಬಿಸಿ ರೋಡಿನಿಂದ ಮಂಗಳೂರಿನತ್ತ ಬರುತ್ತಿದ್ದಾಗ ಅರ್ಕುಳ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಐಸ್ ಕ್ರೀಮ್ ಸಾಗಿಸುತ್ತಿದ್ದ ಟೆಂಪೋ ಪ್ರವೀತ್ ತಲೆಯ ಮೇಲೆ ಚಲಿಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಮೇಲಂತಬೆಟ್ಟು ಮುಂಡೂರು ನಿವಾಸಿ ಶೇಖರ ಆಚಾರ್ಯ ಮತ್ತು ಭಾರತಿ ಆಚಾರ್ಯ ಅವರ ಪುತ್ರ ಪ್ರವೀತ್ ವಿಟ್ಲಕ್ಕೆ ಎಂಎಸ್ ಡಬ್ಲ್ಯು ಕಲಿಯಲು ಬರುತ್ತಿದ್ದರು. ಯಕ್ಷಗಾನ ವೇಷಧಾರಿಯಾಗಿ ಹೋಗಬೇಕಾದ ಕಾರಣ ಮಂಗಳೂರು ಸಮೀಪದ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಕೆಲವೊಮ್ಮೆ ಪಡೀಲ್ ಮತ್ತು ಬಿಸಿ ರೋಡ್ ನಲ್ಲಿ ವಾಹನ ನಿಲ್ಲಿಸಿ ವಿಟ್ಲ ಕಾಲೇಜಿಗೆ ಹೋಗುತ್ತಿದ್ದರು. ಮಂಗಳವಾರ ಬಿಸಿ ರೋಡ್ ನಲ್ಲಿ ಬೈಕ್ ನಿಲ್ಲಿಸಿ ವಿಟ್ಲ ಕಾಲೇಜಿಗೆ ತೆರಳಿದ್ದು ಸಂಜೆಯ ವೇಳೆಗೆ ಸ್ನೇಹಿತನೊಂದಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ಬೈಕಿನಲ್ಲಿ ಮಂಗಳೂರಿಗೆ ಬರುತ್ತಿದ್ದರು.
ಮೂರು ವರ್ಷಗಳಿಂದ ಸಸಿಹಿತ್ಲು ಭಗವತಿ ಮೇಳದಲ್ಲಿ ಯಕ್ಷಗಾನ ಕಲಾವಿದನಾಗಿದ್ದು, ಮಂಗಳವಾರ ಗುರುಪುರ ಬಳಿಯ ಕಂದಾವರದಲ್ಲಿ ಯಕ್ಷಗಾನದಲ್ಲಿ ಭಾಗವಹಿಸಬೇಕಿತ್ತು. ಸ್ತ್ರೀವೇಷಧಾರಿಯಾಗಿ ದೇವಿ, ಇನ್ನಿತರ ಪ್ರಧಾನ ಪಾತ್ರಗಳನ್ನು ಮಾಡುತ್ತಿದ್ದ ಪ್ರವೀತ್ ಆಚಾರ್ಯ ಕಿರಿಯ ವಯಸ್ಸಿನಲ್ಲಿಯೇ ಭರವಸೆ ಮೂಡಿಸಿದ್ದರು. ಕಾಲೇಜು ಕಲಿಕೆಗೆ ಹಣಕಾಸು ಅಗತ್ಯವಿದ್ದುದರಿಂದ ಯಕ್ಷಗಾನ ಕಲಾವಿದನಾಗಿ ತೆರಳುತ್ತಿದ್ದರು. ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಯುವ ಕಲಾವಿದ ಜೀವ ತೆತ್ತಿದ್ದಾರೆ.
Mangalore 22 year old Yakshagana artiste dies of road accident at arkula. The deceased has been identified as Pravith Acharaya.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
14-05-26 10:48 pm
HK News Staffer
ರಿಯಲ್ ಎಸ್ಟೇಟ್ ಉದ್ಯಮಿ, ‘ಲ್ಯಾನ್ಸಿ ಕನ್ಸ್ಟ್ರಕ್ಷನ...
14-05-26 05:39 pm
ಮಂಗಳೂರಿನಲ್ಲೂ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಜಾರಿ...
13-05-26 11:02 pm
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm