ಬ್ರೇಕಿಂಗ್ ನ್ಯೂಸ್
01-01-25 09:55 pm Mangalore Correspondent ಕರಾವಳಿ
ಮಂಗಳೂರು, ಜ.1: ನಗರದ ಶಿವಭಾಗ್ ನಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ (ಇಎಸ್ಐ) ಬುಧವಾರ ಸಂಜೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಅಲ್ಲಿದ್ದ ವೈದ್ಯರು ಮತ್ತು ಇತರ ಅಧಿಕಾರಿ ವರ್ಗದವರನ್ನು ಪ್ರಶ್ನಿಸಿ ತರಾಟೆಗೆತ್ತಿಕೊಂಡರು.
ಸರ್ವರ್ ಸಮಸ್ಯೆಯಿಂದಾಗಿ ಸ್ಥಳದಲ್ಲಿ ಕಷ್ಟ ಅನುಭವಿಸುತ್ತಿದ್ದ ರೋಗಿಗಳ ಸಂಬಂಧಿಕರು ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ಅನುಪಸ್ಥಿತಿ ಕಂಡುಬಂದಿದ್ದು ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಗೆ ಕಾರಣವಾದ ಸರ್ವರ್ ದೋಷವನ್ನು ಸರಿಪಡಿಸಲು ಸೂಚಿಸಿದರು. ಸರ್ವರ್ ಸಮಸ್ಯೆಯಿಂದಾಗಿ ಬೆಳಗ್ಗೆ ಬಂದವರು ಸಂಜೆಯ ವರೆಗೂ ಕಾಯುವ ಸ್ಥಿತಿಯಾಗಿದೆ, ಅಧಿಕಾರಿ ವರ್ಗ ಸ್ಪಂದನೆ ಮಾಡುತ್ತಿಲ್ಲ ಎಂದು ಅಲ್ಲಿದ್ದವರು ಕಷ್ಟ ಹೇಳಿಕೊಂಡರು.
ಹಲವಾರು ದಿನಗಳಿಂದ ಇಲ್ಲಿ ಇದೇ ಪರಿಸ್ಥಿತಿ ಇದೆ, ರೋಗಿಗಳನ್ನು ಇಲ್ಲಿ ಸೌಲಭ್ಯ ಇಲ್ಲವೆಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಆದರೆ ಇಎಸ್ಐ ಸೌಲಭ್ಯ ಸಿಗಲು ಇಲ್ಲಿಂದ ಆನ್ಲೈನ್ ನಲ್ಲಿ ದೃಢೀಕರಣ ಸಿಗಬೇಕಾಗಿದೆ. ಇಲ್ಲಿ ಸರ್ವರ್ ದೋಷವಿದೆ ಎಂದು ಹೇಳಿ ದೂರದ ಊರುಗಳಿಂದ ಬರುವ ರೋಗಿಗಳನ್ನು, ಅವರ ಸಂಬಂಧಿಕರನ್ನು ಸತಾಯಿಸುತ್ತಿದ್ದಾರೆ ಎಂದು ಕೆಲವರು ದೂರಿದಾಗ, ಸಂಸದರು ಸರ್ವರ್ ಸಮಸ್ಯೆ ಇದ್ದರೆ ಇತರ ಆಸ್ಪತ್ರೆಗಳಿಗೆ ನೀಡುವ ಪತ್ರಗಳನ್ನು ಅಂತರ್ಜಾಲದಲ್ಲಿ ಆಗದಿದ್ದರೆ ಕೈ ಬರಹ ಮೂಲಕ ನೀಡಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆ ನೀಡಬಾರದು ಎಂದು ತಾಕೀತು ಮಾಡಿದರು.
ಇದೇ ವೇಳೆ, ಸಂಬಂಧಪಟ್ಟ ಖಾಸಗಿ ಆಸ್ಪತ್ರೆಗಳ ಪ್ರಮುಖರಿಗೆ ಫೋನಾಯಿಸಿ ರೋಗಿಗಳಿಗೆ ಅಗತ್ಯದ ಇಎಸ್ಐ ಸೌಲಭ್ಯಕ್ಕಾಗಿ ಸದ್ಯಕ್ಕೆ ಕೈಬರಹದ ಪತ್ರಗಳನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದರು. ರೋಗಿಯ ಸಂಬಂಧಿಕರೊಬ್ಬರು ತನ್ನ ಸಮಸ್ಯೆ ಹೇಳಿಕೊಳ್ಳುತ್ತಾ, ಇಲ್ಲಿ ಹಲವು ವರ್ಷಗಳಿಂದ ಡಯಾಬಿಟೀಸ್ ರೋಗಿಗಳಿಗೆ
ಡಯಾಲಿಸಿಸ್ ಮಾಡಲು ಒಂದು ತಿಂಗಳಿಗೆ 12 ಟೋಕನ್ ನೀಡಲಾಗುತ್ತಿತ್ತು. ಆದರೆ ಈಗ ಮೂರು ತಿಂಗಳಿಗೆ ಟೋಕನ್ ನೀಡುತ್ತಿದ್ದಾರೆ. ಈಗ ಸರ್ವರ್ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಸಿಗದೇ ಖಾಸಗಿ ಆಸ್ಪತ್ರೆಯಲ್ಲಿ ನಗದು ಹಣ ನೀಡಿ ಡಯಾಲಿಸಿಸ್ ಮಾಡಿಕೊಳ್ಳುವ ಸ್ಥಿತಿಯಾಗಿದೆ ಎಂದರು.
ಬೆಳಗ್ಗೆ ಎಂಟು ಗಂಟೆಗೆ ಬಂದವರು ಇನ್ನೂ ಇವರ ಕ್ಲಿಯರೆನ್ಸ್ ಸಿಕ್ಕಿಲ್ಲ. ಅಲ್ಲದೆ, ರೋಗಿಯನ್ನು ಖುದ್ದಾಗಿ ಆಸ್ಪತ್ರೆಗೆ ಕರೆತಂದರೆ ಮಾತ್ರ ಟೋಕನ್ ನೀಡಲಾಗುವುದು ಎನ್ನುವ ನಿಯಮ ಮಾಡಿದ್ದಾರೆ. ಇದರಿಂದ ಸಮಸ್ಯೆಯಾಗಿದೆ ಎಂದು ಮತ್ತೊಬ್ಬರು ಹೇಳಿಕೊಂಡರು. ಬಳಿಕ ಸ್ಥಳಕ್ಕೆ ಬಂದ ವೈದ್ಯಾಧಿಕಾರಿ ಶೈಲಜಾ ಅವರು, ರೋಗಿಗಳಿಗೆ ಅವಶ್ಯವಿರುವ ದಾಖಲೆಗಳನ್ನು ಕೂಡಲೇ ಕೈಬರಹದಲ್ಲಿ ಮಾಡಿಸಿಕೊಡುವುದಾಗಿ ಸಂಸದರಿಗೆ ಭರವಸೆ ನೀಡಿದರು. ಅಲ್ಲದೆ, ಶೀಘ್ರದಲ್ಲೇ ಸರ್ವರ್ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದ್ದಾರೆ.
Dakshina Kannada MP Capt Brijesh Chowta paid a surprise visit to the Employees' State Insurance (ESI) Hospital in the city today to review its functioning. During the visit, patients present at the hospital shared their grievances with the MP.
04-01-25 01:28 pm
HK News Desk
BJP MLC Dhananjaya Sarji: ಹೊಸ ವರ್ಷಕ್ಕೆ ಬಿಜೆಪಿ...
03-01-25 10:47 pm
ಮಂಗಳೂರು, ಶಿವಮೊಗ್ಗ ಸೇರಿ ಆರು ಸ್ಮಾರ್ಟ್ ಸಿಟಿ ಯೋಜ...
03-01-25 08:33 pm
ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ ಹಣ ವಸೂಲಿ...
03-01-25 02:02 pm
KSRTC Bus Fare Hike; ಬಿಟ್ಟಿ ಭಾಗ್ಯ ಐಸಾ, "ಕೈ" ಕ...
02-01-25 11:03 pm
03-01-25 06:22 pm
HK News Desk
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
ಸ್ವಿಜರ್ಲ್ಯಾಂಡಿನಲ್ಲಿ ಜನವರಿ 1ರಿಂದಲೇ ಬುರ್ಖಾ ನಿಷೇ...
02-01-25 06:20 pm
ಅಮೆರಿಕದಲ್ಲಿ ಭೀಕರ ಅಪಘಾತ ; ನ್ಯೂ ಇಯರ್ ಸಂಭ್ರಮದಲ್...
02-01-25 12:02 pm
ಯೆಮನ್ ದೇಶದಲ್ಲಿ ಕೇರಳ ಮೂಲದ ನರ್ಸ್ ಗೆ ಮರಣದಂಡನೆ ;...
01-01-25 08:21 pm
03-01-25 10:14 pm
Mangalore Correspondent
Mangalore Kambala: ಕಂಬಳದಲ್ಲಿ ಅನಗತ್ಯ ವಿಳಂಬ ತಪ್...
03-01-25 05:40 pm
BJP, Pralhad Joshi, Mangalore: ರಾಹುಲ್ ಹೇಳಿದಂತ...
02-01-25 09:26 pm
Anil Lobo, MCC Bank, Robert Rosario, Mangalor...
02-01-25 03:16 pm
ರಾಜ್ಯದಲ್ಲಿ ತೆಂಗಿನಕಾಯಿ ಇಳುವರಿ ಕುಸಿತ ; ದರ ವಿಪರೀ...
02-01-25 02:09 pm
04-01-25 11:31 am
Mangalore Correspondent
Madhugiri DySP Ramachandrappa Arrest, Video:...
03-01-25 11:02 pm
Sri Bhagavathi Co Operative Bank fraud, Manga...
03-01-25 09:26 pm
Belagavi Murder, Crime; ಕುಡಿಯಲು ಹಣಕ್ಕಾಗಿ ಪೀಡಿ...
02-01-25 11:00 pm
Mangalore crime, Kankandy Police: ಹಾಡಹಗಲೇ ಚೂರ...
02-01-25 10:12 pm