ಬ್ರೇಕಿಂಗ್ ನ್ಯೂಸ್
03-01-25 05:40 pm Mangalore Correspondent ಕರಾವಳಿ
ಮಂಗಳೂರು, ಜ.3: ಕಂಬಳಗಳಲ್ಲಿ ಕೋಣಗಳನ್ನು ಬಿಡುವಾಗ ಅನಗತ್ಯವಾಗಿ ವಿಳಂಬ ಮಾಡುವುದು, ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವುದಕ್ಕೆ ಕಡಿವಾಣ ಹಾಕಲು ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ. ಇಂತಹ ಪ್ರಕರಣಗಳು ಸಾಬೀತಾದಲ್ಲಿ ಅಂಥವರಿಗೆ ಮುಂದಿನ ಎರಡು ಕಂಬಳಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ.
ಮೂಡುಬಿದ್ರೆಯ ಒಂಟಿಕಟ್ಟೆಯ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ಸಮೀಪದ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆಯಲ್ಲಿ ಈ ಕುರಿತು ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳ ವಿನಾಕಾರಣ ವಿಳಂಬಗೊಳ್ಳುತ್ತಿದ್ದು, ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಲ್ಲ ಎಂದರು. ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಸಮಯ ಪಾಲನೆಯನ್ನು ಕಟ್ಟುನಿಟ್ಟು ಮಾಡಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಒಬ್ಬ ಓಟಗಾರನಿಗೆ ಪ್ರತಿ ವಿಭಾಗದಲ್ಲೂ ಒಂದು ಜತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜತೆ ಕೋಣಗಳನ್ನು ಓಡಿಸಬಹುದು. ಉಳಿದಂತೆ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದವರು ವಿವರಿಸಿದರು.
ಆ್ಯಂಬುಲೆನ್ಸ್, ಪ್ರಥಮ ಚಿಕಿತ್ಸೆ ಕೇಂದ್ರ ಕಡ್ಡಾಯ
ಕೋಣಗಳ ಯಜಮಾನ ತ್ರಿಶಾಲ್ ಪೂಜಾರಿ ಮಾತನಾಡಿ, ಮೂಲ್ಕಿಯಲ್ಲಿ ನಡೆದ ಕಂಬಳದಲ್ಲಿ ನಮ್ಮ ಓಟಗಾರನ ಕಾಲಿಗೆ ಬಲವಾದ ಪೆಟ್ಟಾಗಿ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಲಾಗಿತ್ತು. ಇಂತಹ ತುರ್ತು ಸಂದರ್ಭದಲ್ಲಿ ಕಂಬಳ ಆಯೋಜಕರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಆ್ಯಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರವನ್ನು ಎಲ್ಲ ಕಂಬಳಗಳಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ಸಮಿತಿ ಅಧ್ಯಕ್ಷರು ಹೇಳಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರ ವಿಜಯ ಕುಮಾರ್ ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಅಡ್ವೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
The District Kambala Committee has issued a stern warning that individuals who deliberately delay releasing buffaloes at the starting point or hit them during the race will face a ban from participating in the next two Kambala events.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 06:36 pm
Mangalore Correspondent
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm