ಬ್ರೇಕಿಂಗ್ ನ್ಯೂಸ್
04-01-25 08:57 pm Mangalore Correspondent ಕರಾವಳಿ
ಮಂಗಳೂರು, ಜ.4: ಪುತ್ತೂರಿನ ಕಬಕದಲ್ಲಿರುವ ಮಹಮ್ಮದಿಯಾ ಟ್ರಾವೆಲ್ ಏಜೆನ್ಸಿ ಹೆಸರಲ್ಲಿ ಆಶ್ರಫ್ ಸಖಾಫಿ ಪರ್ಪುಂಜೆ ಎಂಬವರು ಉಮಾ ಯಾತ್ರೆಗಾಗಿ ಸುಮಾರು 172 ಜನರನ್ನು ಪವಿತ್ರ ಮೆಕ್ಕಾಕ್ಕೆ ಕರೆದೊಯ್ದು ಮದೀನಾದಲ್ಲಿ ಬಿಟ್ಟು ಬಂದು ವಂಚನೆ ಮಾಡಿದ್ದಾರೆ. ಮದೀನಾದಲ್ಲಿ ಸಿಕ್ಕಿಬಿದ್ದು ಅನ್ನಾಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದು ನನ್ನ ಗಮನಕ್ಕೆ ಬರುತ್ತಲೇ ಸೌದಿಯಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಯಾತ್ರಾರ್ಥಿಗಳನ್ನು ತಾಯ್ನಾಡಿಗೆ ತಲುಪಿಸುವ ವ್ಯವಸ್ಥೆ ಮಾಡಿರುತ್ತೇನೆ. ಈ ಸಂಸ್ಥೆಯ ಲೈಸನ್ಸ್ ಕೂಡಲೇ ರದ್ದುಪಡಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಮೊಯಿದೀನ್ ಬಾವಾ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಕ್ಕಿಬಿದ್ದ ಯಾತ್ರಾರ್ಥಿಗಳಲ್ಲಿ ಕೆಲವರು ತಮ್ಮ ಸ್ವಂತ ಖರ್ಚಿನಲ್ಲಿ ರಿಟರ್ನ್ ಟಿಕೆಟ್ ಪಡೆದು ಬಂದಿದ್ದರೆ ಇನ್ನುಳಿದ 58 ಮಂದಿಗೆ ನನ್ನ ಸ್ನೇಹಿತರ ಮುಖಾಂತರ ಟಿಕೆಟ್ ತೆಗೆಸಿ ಊರಿಗೆ ಮರಳಿಸುವ ವ್ಯವಸ್ಥೆಯನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ರಿಟರ್ನ್ ಟಿಕೇಟ್ ಪಡೆಯದೇ ಡಮ್ಮಿ ಟಿಕೇಟ್ ತೋರಿಸಿ ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಯ ವಿರುದ್ದ ಹಾಗೂ ಇದಕ್ಕೆ ಅನುವು ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಾರ್ವಜನಿಕರನ್ನು ವಂಚಿಸುವ ಇಂತಹ ಟ್ರಾವೆಲ್ ಏಜೆನ್ಸಿಗಳ ಲೈಸನ್ಸ್ ರದ್ದು ಪಡಿಸಬೇಕೆಂದು ಮೊಯ್ದೀನ್ ಬಾವಾ ಒತ್ತಾಯಿಸಿದ್ದಾರೆ.
ಅಲ್ಲಿ ಸಿಕ್ಕಿಬಿದ್ದ ಉಮ್ರಾ ಯಾತ್ರಾರ್ಥಿಗಳ ಪರಿಸ್ಥಿತಿ ತೀರಾ ಕೆಟ್ಟದ್ದಾಗಿತ್ತು. ಶುಗರ್ ಇನ್ನಿತರ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಸೂಕ್ತ ಚಿಕಿತ್ಸೆ ಯಾವುದೂ ಸಿಕ್ಕಿರಲಿಲ್ಲ. ನಾಮ್ ಕೆ ವಾಸ್ತೆ ಫಲಕ ಹಾಕಿಕೊಂಡು ಕಡಿಮೆ ಖರ್ಚಿಗೆ ಉಮ್ರಾ ಕರೆದುಕೊಂಡು ಹೋಗುತ್ತೇವೆ ಎಂದು ಜನರನ್ನು ಮಂಗ ಮಾಡುತ್ತಾರೆ. ಬುದ್ಧಿವಂತ ಜಿಲ್ಲೆಯ ಜನರು ಇದನ್ನು ನಂಬಬಾರದು. ರಿಟರ್ನ್ ಟಿಕೆಟ್ ಖಚಿತ ಪಡಿಸಿಕೊಂಡೇ ಹೋಗಬೇಕು ಎಂದು ಹೇಳಿದರು.
ಯಾವುದೇ ರೀತಿಯಲ್ಲಿ ಜನ ಮೋಸ ಹೋಗಬಾರದು. ದೇಶದಲ್ಲೇ ಈ ರೀತಿಯಾದರೆ ಪರವಾಗಿಲ್ಲ. ವಿದೇಶಕ್ಕೆ ಕರೆದುಕೊಂಡು ಹೋಗಿ ಮೋಸ ಮಾಡಿದರೆ ಇದಕ್ಕೆ ಹೊಣೆ ಯಾರು? ಇದರ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಕರೆದುಕೊಂಡು ಹೋದ ಜನ ಊರಲ್ಲಿ ಬಂದು ಎಲ್ಲವನ್ನು ತಾನೇ ನಿಭಾಯಿಸಿದ್ದಾಗಿ ಹೇಳುತ್ತಾರೆ. ಇದು ಖಂಡನೀಯ“ ಎಂದು ಬಾವಾ ಕಿಡಿಕಾರಿದ್ದಾರೆ.
Puttur kabaka Travel Agency MUHAMMADIYA cheats 172 Muslim pilgrims slams Mohiuddin Bava by issuing no return ticket to the Haj pilgrims. Demands action against the travel agency.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm