ಬ್ರೇಕಿಂಗ್ ನ್ಯೂಸ್
07-01-25 09:15 pm Mangalore Correspondent ಕರಾವಳಿ
ಧರ್ಮಸ್ಥಳ, ಜ.7: ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ದೇಶದ ಸಂಸ್ಕೃತಿ, ಸಂಸ್ಕಾರವನ್ನು ಮರೆಯಬಾರದು. ತಮ್ಮತನವನ್ನು ಬದಿಗಿಟ್ಟು ದೇಶ ಹಿತ, ದೇಶ ಸೇವೆಯತ್ತ ಜನಪ್ರತಿನಿಧಿಗಳು ಮುಂದಾಗಬೇಕು. 2047ರ ವೇಳೆಗೆ ಭಾರತವನ್ನು ಜಾಗತಿಕ ಶಕ್ತಿಯಾಗಿಸಬೇಕು. ಜೊತೆಗೆ, ದೇಶದಲ್ಲಿ ಸೌಹಾರ್ದ ವಾತಾವರಣವನ್ನು ಉಳಿಸಿಕೊಳ್ಳಬೇಕಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಕರೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲಿನ ಬದಲಿಗೆ ಹೊಸತಾಗಿ ಮಾಡಲ್ಪಟ್ಟ ಕ್ಯು ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯ ಸದನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಜಗದೀಪ್ ಧನ್ಕರ್ ಮಾತನಾಡಿದರು. ಜಗತ್ತಿನಲ್ಲಿ ಮೆಸಪೊಟೇಮಿಯಾ, ಚೀನಾದಂತಹ ನಾಗರಿಕತೆಗಳು ನಶಿಸಿದ್ದರೂ, ಅನಾದಿಕಾಲದ ಭಾರತದ ನಾಗರಿಕತೆ ಇನ್ನೂ ಬೆಳಗುತ್ತಿದೆ. ಪ್ರಜಾಪ್ರಭುತ್ವ ನಮ್ಮಲ್ಲಿ ಬೆಳೆದು ಬಂದ ಸಂಸ್ಕೃತಿ. ಜನರ ಅಭಿಪ್ರಾಯಕ್ಕೆ ಇಲ್ಲಿ ಬೆಲೆ ಇದೆ, ಜನಪ್ರತಿನಿಧಿಯಾದವರು ಜನರ ಆದ್ಯತೆಗೆ ಬೆಲೆ ನೀಡಬೇಕಿದೆ. ಆಗಮಾತ್ರ ಪ್ರಜಾಪ್ರಭುತ್ವ ಇನ್ನಷ್ಟು ಸಶಕ್ತವಾಗುತ್ತದೆ. ರಾಜಕಾರಣಿಗಳು 24 ಗಂಟೆ ರಾಜಕಾರಣವನ್ನೇ ಮಾಡುತ್ತಿರಬೇಕೇ ಎಂದು ಆಲೋಚನೆ ಮಾಡಬೇಕು. ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಧಾರ್ಮಿಕ ಕೇಂದ್ರಗಳು ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ. ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಧಾರ್ಮಿಕ ಕೇಂದ್ರಗಳೇ ಗ್ರಾಮೀಣ ಭಾರತದ ಶಕ್ತಿ ಎಂದು ಧರ್ಮಸ್ಥಳವನ್ನು ಉಲ್ಲೇಖಿಸಿದ ಅವರು, ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ, ಜಗತ್ತಿಗೆ ಸೌಹಾರ್ದ, ವೈವಿಧ್ಯತೆ, ವಿಭಿನ್ನ ಸಂಸ್ಕೃತಿಯನ್ನು ಕೊಟ್ಟ ದೇಶದಲ್ಲಿ ಹಿಂದಿನಿಂದ ಬಂದ ಸೌಹಾರ್ದ ವಾತಾವರಣವನ್ನು ಉಳಿಸಿಕೊಳ್ಳಬೇಕಾಗಿದೆ. ಜನರಲ್ಲಿ ದೇಶಕ್ಕೆ ನಾವು ಕೊಡಬೇಕಾದ ಕೊಡುಗೆಯೇನು, ಮೂಲಭೂತ ಕರ್ತವ್ಯಗಳೇನು ಎನ್ನುವ ಪರಿಜ್ಞಾನ ಬೆಳೆಯಬೇಕಾಗಿದೆ. ಆಧುನಿಕ ಯುವ ಜನಾಂಗ ನಮ್ಮ ಇತಿಹಾಸವನ್ನು ಅರಿತು ಮುಂದಡಿ ಇಡಬೇಕಿದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಸೇನಾ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಉಪ ರಾಷ್ಟ್ರಪತಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಸ್ವಾಗತಿಸಿದರು. ಸಂಸದ ಚೌಟ ಅವರನ್ನು ಉಪ ರಾಷ್ಟ್ರಪತಿ ಆಪ್ತವಾಗಿ ಮಾತನಾಡಿಸಿ ತನ್ನ ಪತ್ನಿಗೂ ಪರಿಚಯಿಸಿದರಲ್ಲದೆ ಕೈಹಿಡಿದು ಜೊತೆಗೆ ಹೆಲಿಕಾಪ್ಟರ್ ನಲ್ಲಿಯೇ ಧರ್ಮಸ್ಥಳಕ್ಕೆ ಕರೆದೊಯ್ದರು. ಧರ್ಮಸ್ಥಳದಲ್ಲಿ ದೇವರ ದರ್ಶನ ಪಡೆದ ಬಳಿಕ ಕ್ಯು ಕಾಂಪ್ಲೆಕ್ಸ್ ಕಟ್ಟಡದಲ್ಲಿ ಹೂವಿನ ಕುಂಚದಲ್ಲಿ ಅಪೂರ್ವ ಗಿಡವೊಂದನ್ನು ನೆಡುವ ಮೂಲಕ ಸಾನ್ನಿಧ್ಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಕ್ಯು ಕಾಂಪ್ಲೆಕ್ಸ್ ನಲ್ಲಿ ನೇರ ದರ್ಶನ ವ್ಯವಸ್ಥೆ
ಅಂದಹಾಗೆ, ದೇವಸ್ಥಾನದ ಹಿಂಭಾಗದ ವಿಶಾಲ ಜಾಗದಲ್ಲಿ ಸಾನ್ನಿಧ್ಯ ಭವನ ನಿರ್ಮಿಸಲಾಗಿದ್ದು, ಈ ಹಿಂದೆ ಇದ್ದ ಸರತಿ ಸಾಲಿನ ಪದ್ಧತಿಯನ್ನು ರದ್ದುಗೊಳಿಸಿ ತಿರುಪತಿ, ಶಿರಡಿ ಮಾದರಿಯಲ್ಲಿ ಕ್ಯು ನಿಲ್ಲುವುದಕ್ಕಾಗಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 16 ಹಾಲ್ ಗಳಿದ್ದು ಪ್ರತಿ ಕೊಠಡಿಯಲ್ಲಿ 600 ಜನರಿಗೆ ಆಸನ ಸಾಮರ್ಥ್ಯ ಇದೆ. ಏಕಕಾಲದಲ್ಲಿ 12 ಸಾವಿರ ಜನರಿಗೆ ಇರುವಷ್ಟು ಕಾಲಾವಕಾಶ ಇದ್ದು, ಎಷ್ಟೇ ರಶ್ ಇದ್ದರೂ ಒಂದೂವರೆ ಗಂಟೆಯಲ್ಲಿ ದೇವರ ದರ್ಶನಕ್ಕೆ ವ್ಯವಸ್ಥೆ ಆಗಲಿದೆ. ಪ್ರತಿ ಕೊಠಡಿಯಲ್ಲೂ ಸಣ್ಣ ಮಕ್ಕಳಿಗೆ ಮೊಲೆಯುಣಿಸಲು ಪ್ರತ್ಯೇಕ ರೂಮ್, ಟಾಯ್ಲೆಟ್, ಇನ್ನಿತರ ವ್ಯವಸ್ಥೆಗಳಿದ್ದು, ಪ್ರತಿ ಕೊಠಡಿಯಿಂದಲೂ ಮುಂದಿನ ಕೊಠಡಿಗೆ ತೆರಳುವ ಬದಲು ನೇರ ದರ್ಶನದ ವ್ಯವಸ್ಥೆ ಇರುತ್ತದೆ. ಎಲ್ಲ ಕಡೆಯೂ ಸಿಸಿಟಿವಿ ಮತ್ತು ಮಾಹಿತಿ ಕೇಂದ್ರಗಳನ್ನು ಇರಿಸಲಾಗಿದೆ. ಆಧುನಿಕ ರೀತಿಯಲ್ಲಿ ಎಐ ಟೆಕ್ನಾಲಜಿ ಬಳಸಿ ಆಟೊಮೆಟಿಕ್ ಸೂಚನೆಗಳನ್ನು ನೀಡುವಂತೆ ವ್ಯವಸ್ಥೆ ಮಾಡಲಾಗಿದೆ.
Vice President Jagdeep Dhankhar said on Tuesday that we should do away with the VIP culture, particularly in temples, as the very idea of VIP darshan militates against divinity. He also called upon the people to rise above the politics of disruption and help the country reach its objective of a developed India by 2047.
08-01-25 03:39 pm
Bangalore Correspondent
VHMP virus, CM Siddaramaiah: ಎಚ್ಎಂಪಿವಿ ಆತಂಕಾರ...
08-01-25 11:43 am
No emergecy in China, Virus News Kannada; ಚೀನ...
06-01-25 09:41 pm
Chamarajanagar, Heart Attack School Student:...
06-01-25 06:53 pm
Bangalore Suicide, Software engineer family:...
06-01-25 02:03 pm
07-01-25 06:32 pm
HK News Desk
ಹಾರ್ಟ್ ಅಟ್ಯಾಕ್ ಆಗಿ ಸತ್ತಿದ್ದಾನೆಂದು ತಿಳಿದು ಅಂತ್...
05-01-25 09:41 pm
Chhattisgarh Journalist Murder: ಛತ್ತೀಸ್ಗಢದಲ್ಲ...
04-01-25 06:01 pm
ಉತ್ತರ ಚೀನಾದಲ್ಲಿ ಮತ್ತೊಂದು ವೈರಸ್ ದಾಳಿ ; ಕೋವಿಡ್...
03-01-25 06:22 pm
ಅಮೆರಿಕದಲ್ಲಿ ಟ್ರಕ್ ನುಗ್ಗಿಸಿ ಭಯೋತ್ಪಾದಕ ಘಟನೆ ; ಐ...
03-01-25 11:57 am
08-01-25 06:13 pm
Mangaluru Correspondent
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
Mangalore University, Phd Admission: ಮಂಗಳೂರು...
07-01-25 10:22 pm
Vice President Jagdeep Dhankhar, Dharmasthala...
07-01-25 09:15 pm
08-01-25 05:58 pm
Mangaluru Correspondent
Cyber Fruad, CBI, Udupi, Karkala: ಸಿಬಿಐ ಹೆಸ್ರ...
08-01-25 03:14 pm
Mangalore crime, Court: ಸ್ನಾನ ಮಾಡುತ್ತಿದ್ದ ಅಪ್...
07-01-25 03:50 pm
Digital Arrest, I4C database, Cyber Frau: ಸೈಬ...
06-01-25 05:37 pm
Mangalore Robbery, Singari Beedi owner, Crime...
04-01-25 11:31 am