ಬ್ರೇಕಿಂಗ್ ನ್ಯೂಸ್
07-01-25 11:13 pm Mangaluru Correspondent ಕರಾವಳಿ
ಮಂಗಳೂರು, ಜ.7: ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸಲ್ಲಿಸಿದ ಜಾಮೀನು ಅರ್ಜಿಯನ್ನು 3ನೇ ಜಿಲ್ಲಾ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಅನಿಲ್ ಲೋಬೊಗೆ ತೀವ್ರ ಹಿನ್ನಡೆಯಾಗಿದೆ.
ಡಿ.17ರಂದು ಉಳಾಯಿಬೆಟ್ಟು ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ ತನ್ನ ಸಾವಿಗೆ ಅನಿಲ್ ಲೋಬೊ ಕಾರಣವೆಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೋಹರ್ ಪಿರೇರಾ ಎಂಸಿಸಿ ಬ್ಯಾಂಕಿನಲ್ಲಿ ಸಾಲ ಪಡೆದು ಅದನ್ನು ಕಟ್ಟಲಾಗದೆ ಕಷ್ಟದಲ್ಲಿದ್ದರು. ಇದನ್ನರಿತು ಚಾರಿಟಿ ಸಂಸ್ಥೆಯೊಂದು 15 ಲಕ್ಷ ನೆರವು ನೀಡಿತ್ತು. ಈ ಹಣದಲ್ಲಿ 9 ಲಕ್ಷವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಡ್ರಾ ಮಾಡಿ ತನ್ನ ಸ್ವಂತಕ್ಕೆ ಬಳಸಿಕೊಂಡು ದ್ರೋಹ ಎಸಗಿದ್ದಾನೆಂದು ಆರೋಪಿಸಲಾಗಿತ್ತು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮರುದಿನವೇ ಅನಿಲ್ ಲೋಬೊ ಬಂಧನವಾಗಿತ್ತು. ಆದರೆ ಆತನಿಗೆ ಅನಾರೋಗ್ಯ ನೆಪವೊಡ್ಡಿ ಯೇನಪೊಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಈ ನಡುವೆ, ಆರೋಪಿ ಲೋಬೊಗೆ ಜಾಮೀನು ನೀಡಬಾರದೆಂದು ಕುಟುಂಬಸ್ಥರ ಕಡೆಯಿಂದಲೂ ಅರ್ಜಿ ಸಲ್ಲಿಸಲಾಗಿತ್ತು. ಈ ನಡುವೆ ಪೊಲೀಸರು ತನಿಖೆ ಬಿಗುಗೊಳಿಸಿದ್ದು, ಬ್ಯಾಂಕಿನಲ್ಲಿ ಪ್ರಕರಣ ಸಂಬಂಧಿಸಿ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇವೆಲ್ಲ ಕಾರಣದಿಂದ ಜಾಮೀನು ಅರ್ಜಿ ಪ್ರಕರಣ ಬಿಗಿಗೊಂಡಿತ್ತು. ಇದೀಗ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಇನ್ನು ಜಾಮೀನು ಪಡೆಯಲು ಹೈಕೋರ್ಟಿಗೆ ಅರ್ಜಿ ಹಾಕಬೇಕಿದೆ.
ಜಾಮೀನು ಅರ್ಜಿ ವಜಾಗೊಂಡಿದ್ದರಿಂದ ಅನಿಲ್ ಲೋಬೊ ನಡೆಸುತ್ತಿದ್ದ ಕುರಿ ಫಂಡ್ ಸದಸ್ಯರು ಕಂಗಾಲಾಗಿದ್ದಾರೆ. 3 ಕೋಟಿಗೂ ಹೆಚ್ಚು ಮೊತ್ತದ ಕುರಿ ಫಂಡ್ ನಡೆಸುತ್ತಿದ್ದ ಎನ್ನಲಾಗುತ್ತಿದ್ದು, ನೂರಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ತಿಂಗಳ ಕುರಿ ಫಂಡ್ ನಲ್ಲಿ ಹಣ ಕಟ್ಟುತ್ತಿದ್ದವರು ತಮ್ಮ ಹಣಕ್ಕೆ ಗ್ಯಾರಂಟಿ ಇಲ್ಲದೆ ಚಿಂತೆಯಲ್ಲಿ ಮುಳುಗಿದ್ದಾರೆ. ಇದಲ್ಲದೆ, ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೂ ಬದಲಿ ವ್ಯಕ್ತಿಯನ್ನು ನೇಮಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Mangalore MCC Bank Anil Lobo bail plea cancelled by Mangalore court in suicide case. The Mangaluru Rural police arrested Mr. Lobo following a complaint by Manohar’s brother Jeevan Pereira in which he referred to a video of Manohar sent on Whatapp a few minutes before his suicide.
19-04-25 12:24 pm
HK News Desk
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm