ಬ್ರೇಕಿಂಗ್ ನ್ಯೂಸ್
08-01-25 09:51 pm Mangalore Correspondent ಕರಾವಳಿ
ಮಂಗಳೂರು, ಜ.9: ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿ "ಲಿಟ್ ಫೆಸ್ಟ್" ಈ ಬಾರಿ ಜನವರಿ 11 ಮತ್ತು 12ರಂದು ನಗರದ ಡಾ.ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ನನ್ ಸೆಂಟರ್‌ನಲ್ಲಿ ಜರುಗಲಿದೆ. ನಾಡಿನ ಖ್ಯಾತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಉದ್ಘಾಟಿಸಲಿದ್ದಾರೆ.
ಮಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ, ಆರ್ಥಿಕ ಮತ್ತು ಸಿನಿಮಾ ಸಹಿತ ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಹೊಸ ಆವಿಷ್ಕಾರ, ಬೆಳವಣಿಗೆಗಳನ್ನ ತಿಳಿಯಲು ಅವಕಾಶವಿದೆ. ಅಲ್ಲದೆ, ಚಲನಚಿತ್ರಗಳ ಪ್ರದರ್ಶನಗಳು, ಪರಂಪರೆಯ ಕುರಿತು ಚರ್ಚೆಗಳು ಮತ್ತು ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಸ್ತುತಿಗಳು ಸಹ ನಡೆಯಲಿದೆ.
ಈ ಬಾರಿಯ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪಾಲ್ಗೊಳ್ಳುವರು. "Energy for Survival - Security and Climate" ಕುರಿತು ಸಂವಾದ ಇರಲಿದ್ದು, ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸುವರು. ಜೊತೆಗೆ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಇತಿಹಾಸಕಾರ ಡಾ. ವಿಕ್ರಂ ಸಂಪತ್, ಶತಾವಧಾನಿ ಡಾ. ಗಣೇಶ್, ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್, ಹಿಮಾಲಯ ಭೌಗೋಳಿಕ ರಾಜಕೀಯ ತಜ್ಞ ಡಾ. ಕ್ಲಾಡ್ ಅರ್ಪಿ, ರಾಜಕೀಯ ವಿಶ್ಲೇಷಕ, ಮಾಜಿ ಸಂಸದ ಡಾ. ವಿನಯ ಸಹಸ್ರಬುದ್ಧೆ, ಸಂಸ್ಕೃತ ವಿದ್ವಾಂಸ ಡಾ. ವಿಶ್ವಾಸ್ ಸೇರಿದಂತೆ ಹೆಸರಾಂತ 60ಕ್ಕೂ ಹೆಚ್ಚು ಪ್ರಮುಖರು ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವರು. ಈ ಬಾರಿಯ ಲಿಟ್ ಫೆಸ್ಟ್ ಗೌರವಕ್ಕೆ ಡಾ. ಬಾಲಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಯೋಜಕ ಸಂಸ್ಥೆ ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಒಟ್ಟು 29 ಸೆಶನ್ ಇರಲಿದ್ದು ಪ್ರತಿ ಗೋಷ್ಟಿಯಲ್ಲೂ ವಿಭಿನ್ನ ವೈಚಾರಿಕ ನಿಲುವುಗಳ ಮಂಥನ ನಡೆಯಲಿದೆ. ಎರಡನೇ ದಿನ ಬೆಳಗ್ಗೆ ಮಾಗಧ ಲೋಕಾರ್ಪಣ ಮತ್ತು ಅವಲೋಕನದಲ್ಲಿ ಸಹನಾ ವಿಜಯಕುಮಾರ, ಡಾ. ಅಜಕ್ಕಳ ಗಿರೀಶ್ ಭಟ್ ಭಾಗವಹಿಸುವರು. ಮಧ್ಯಾಹ್ನ 12.15ಕ್ಕೆ ಐಕಾನ್ಸ್ ಫಾರ್ ಟುಡೇ - ಡೂಸ್ ಆಂಡ್ ಡೋಂಟ್ಸ್,( ಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂರ್ ಇಂಟರ್ಜೆನಮ್) 1760-1799 ಪುಸ್ತಕ ಲೋಕಾರ್ಪಣೆ, ಸಂವಾದವಿದ್ದು, ಡಾ. ವಿಕ್ರಮ್ ಸಂಪತ್, ಪ್ರಕಾಶ್ ಬೆಳವಾಡಿ ಸಂವಾದ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಸಿನಿಮಾ ತಾಂತ್ರಿಕತೆ ಕುರಿತು ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ ಮಾತನಾಡಲಿದ್ದು, ಅರುಣ್ ಭಾರಧ್ವಾಜ್ ಸಂವಹನಕಾರರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುಜಿತ್ ಪ್ರತಾಪ್, ಈಶ್ವರಪ್ರಸಾದ್ ಶೆಟ್ಟಿ, ಭಾರತ್ ಫೌಂಡೇಶನ್ ಟ್ರಸ್ಟಿ ಶ್ರೀರಾಜ್ ಗುಡಿ, ದುರ್ಗಾಪ್ರಸಾದ್ ಕಟೀಲ್ ಇದ್ದರು.
Senior litterateur S.L. Bhyrappa will inaugurate the seventh edition of the two-day Mangaluru Lit Fest at TMA Pai International Convention Centre here on January 11.
19-04-25 12:24 pm
HK News Desk
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 10:51 am
Mangalore Correspondent
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
19-04-25 11:01 am
Bangalore Correspondent
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm