ಬ್ರೇಕಿಂಗ್ ನ್ಯೂಸ್
10-01-25 03:31 pm Mangalore Correspondent ಕರಾವಳಿ
ಮಂಗಳೂರು, ಜ.10: ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗವನ್ನು ದಾನ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡ ಗ್ರಾಮದ ನಿವಾಸಿ ರೇಖಾ(41) ಎಂಬವರ ಲಿವರ್ ಅನ್ನು ಮೈಸೂರಿಗೆ ಮತ್ತು ಕಣ್ಣಿನ ಕಾರ್ನಿಯಾಗಳನ್ನು ಅತ್ತಾವರ ಕೆಎಂಸಿ ಆಸ್ಪತ್ರೆಗೆ ನೀಡಲಾಗಿದೆ.
ಕುಸಿದು ಬಿದ್ದು ಬ್ರೇನ್ ಹೇಮರೇಜ್ ಆಗಿದ್ದ ಮಹಿಳೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಸರ್ಜಿಕಲ್ ಬ್ಲಾಕ್ ಗೆ ಕರೆತರಲಾಗಿತ್ತು. ಜನವರಿ 6ರಂದು ಮಂಗಳೂರಿಗೆ ಕರೆತಂದಿದ್ದು, ಅದಾಗಲೇ ಆಕೆಯ ಸ್ಥಿತಿ ಗಂಭೀರವಾಗಿತ್ತು. ನ್ಯೂರೋ ಸರ್ಜರಿ ಮಾಡಿದರೆ ಬದುಕುಳಿಯಬಹುದೆಂದು ಶಿವಮೊಗ್ಗದ ವೈದ್ಯರು ತಿಳಿಸಿದ್ದರು. ಆದರೆ, ಮಂಗಳೂರು ತಲುಪಿದಾಗ ಮಹಿಳೆಯ ಸ್ಥಿತಿ ಬಿಗಡಾಯಿಸಿದ್ದರಿಂದ ವೈದ್ಯರು ಸರ್ಜರಿಗೆ ಮುಂದಾಗಿರಲಿಲ್ಲ.
ಕೆಎಂಸಿ ಆಸ್ಪತ್ರೆಯ ವೈದ್ಯರು ವೆನ್ಲಾಕ್ ಆಸ್ಪತ್ರೆಯ ನಿರ್ವಹಣೆ ಮಾಡುತ್ತಿರುವುದರಿಂದ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿದ್ದರು. ಆನಂತರ, ಮಹಿಳೆಯ ಮೆದುಳು ನಿಷ್ಕ್ರಿಯ ಆಗಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಅಂಗಾಂಗ ದಾನದ ಬಗ್ಗೆ ಮನವರಿಕೆ ಮಾಡಲಾಗಿತ್ತು. ಜೀವ ಸಾರ್ಥಕತೆ ಪೋರ್ಟಲ್ ಮೂಲಕ ಅಂಗಾಂಗ ಕಸಿಗೆ ನೋಂದಣಿ ಮಾಡಿರುವ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ, ಮಹಿಳೆಯ ಬ್ಲಡ್ ಗ್ರೂಪ್ ಮತ್ತು ಇತರ ಮಾಹಿತಿಗಳನ್ನು ಹಂಚಿಕೊಳ್ಳಲಾಗಿತ್ತು. ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯರು ಯಕೃತ್ (ಲಿವರ್) ಕಸಿ ಮಾಡಲು ಮುಂದಾಗಿದ್ದು, ಅಲ್ಲಿನ ಬೇರೊಬ್ಬ ಮಹಿಳೆಗೆ ಕಸಿ ಮಾಡಲು ರೆಡಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಅಪೋಲೊ ಆಸ್ಪತ್ರೆಯ ಸರ್ಜನ್ ಡಾ.ರಾಜು ಗೌಡ ಅವರ ನೇತೃತ್ವದ ತಂಡ ಮಂಗಳೂರಿಗೆ ಬಂದು ಶುಕ್ರವಾರ ಬೆಳಗ್ಗೆ ಮಹಿಳೆಯ ಲಿವರನ್ನು ತೆಗೆದಿದ್ದು ಮಧ್ಯಾಹ್ನ 12.30ಕ್ಕೆ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮೈಸೂರಿಗೆ ರಸ್ತೆ ಮೂಲಕ ಒಯ್ದಿದ್ದಾರೆ. 6ರಿಂದ 10 ಗಂಟೆಯ ಒಳಗಡೆ ಲಿವರ್ ಕಸಿ ಮಾಡಲು ಅವಕಾಶ ಇರುತ್ತದೆ. ಕಣ್ಣಿನ ಕಾರ್ನಿಯಾಗಳನ್ನು ಅತ್ತಾವರ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ. ಸಾಮಾನ್ಯವಾಗಿ ಶ್ವಾಸಕೋಶ, ಹಾರ್ಟ್, ಕಿಡ್ನಿ, ಲಿವರ್, ಕಾರ್ನಿಯಾಗಳನ್ನು ಕಸಿ ಮಾಡಲು ಸಾಧ್ಯವಿದೆ. ಆದರೆ ಇಬ್ಬರು ವ್ಯಕ್ತಿಗಳ ಬ್ಲಡ್ ಗ್ರೂಪ್ ಮ್ಯಾಚ್ ಆಗಬೇಕಾಗುತ್ತದೆ. ಅಲ್ಲದೆ, ದಾನ ಮಾಡುವ ವ್ಯಕ್ತಿಗಳ ಅಂಗಗಳು ಸ್ವಸ್ಥವಿರಬೇಕಾಗುತ್ತದೆ ಎಂದು ವೆನ್ಲಾಕ್ ಸರ್ಜಿಕಲ್ ಬ್ಲಾಕ್ ಮುಖ್ಯಸ್ಥೆ, ಅತ್ತಾವರ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಮೇಘನಾ ಮಡಿ ಹೇಳಿದರು.
ರೇಖಾ ಅವರದ್ದು ಬಡ ಕುಟುಂಬವಾಗಿದ್ದು, ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದಕ್ಕಾಗಿ ವೆನ್ಲಾಕ್ ಆಸ್ಪತ್ರೆಯ ಡಿಎಂಓ ಡಾ.ಶಿವಪ್ರಕಾಶ್ ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು. ಸಾವು ಎಲ್ಲರಿಗೂ ಬರುತ್ತದೆ, ಆದರೆ ಸಾವಿನ ಸಂದರ್ಭದಲ್ಲಿ ಅಂಗಾಂಗ ದಾನದ ಮೂಲಕ ಇನ್ನೊಬ್ಬರಿಗೆ ಜೀವ ಕೊಡುವುದು ಶ್ರೇಷ್ಠವಾದದ್ದು ಎಂದು ಶವವನ್ನು ಆಸ್ಪತ್ರೆಯಿಂದ ಬಿಟ್ಟು ಕೊಡುವ ಸಂದರ್ಭದಲ್ಲಿ ಡಾ.ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಇದೇ ವೇಳೆ, ಐಎಂಎ ವೈದ್ಯರ ಸಂಘದ ಅಣ್ಣಯ್ಯ ಕುಲಾಲ್ ಮತ್ತು ಇತರ ವೈದ್ಯರು ಸೇರಿ ಬಡ ಕುಟುಂಬಕ್ಕೆ ಒಂದಷ್ಟು ಧನಸಹಾಯ ಮಾಡಿದ್ದಲ್ಲದೆ ಶಿವಮೊಗ್ಗಕ್ಕೆ ಶವ ಒಯ್ಯಲು ಆಂಬುಲೆನ್ಸ್ ಮಾಡಿಕೊಟ್ಟು ಅಂತ್ಯಕ್ರಿಯೆಗೆ ನೆರವಾಗಿದ್ದಾರೆ. ಕೆಎಂಸಿ ಆಸ್ಪತ್ರೆ ವೈದ್ಯರಾದ ಡಾ.ಮೇಘನಾ ಮಡಿ, ಮಧುರ ಮುಂದ್ರಾ, ತರುಣ್ ಗುಪ್ತಾ ಅವರು ವೆನ್ಲಾಕ್ ಸರ್ಜಿಕಲ್ ವಿಭಾಗದ ಎಂಐಸಿಯು ನೋಡಿಕೊಳ್ಳುತ್ತಿದ್ದಾರೆ. ಡಾ.ಸುಮನಾ ಕಾಮತ್ ನೇತೃತ್ವದಲ್ಲಿ ಕಣ್ಣಿನ ಸರ್ಜರಿ ಮಾಡಿದ್ದು, ಕಾರ್ನಿಯಾಗಳನ್ನು ಇನ್ನೊಬ್ಬರಿಗೆ ಕಸಿ ಮಾಡಿದ್ದಾರೆ.
The 176-year-old govt Wenlock Hospital in the city successfully conducted its first organ harvesting procedure from a 41-year-old woman, who was declared brain dead following a brain haemorrhage.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm