ಬ್ರೇಕಿಂಗ್ ನ್ಯೂಸ್
11-01-25 07:19 pm Mangaluru Correspondent ಕರಾವಳಿ
ಮಂಗಳೂರು, ಜ.11: ದೇಶದಲ್ಲಿ ಪೆಟ್ರೋಲಿಯಂ ತೈಲದ ಮೇಲಿನ ಅವಲಂಬನೆ ತಪ್ಪಿಸಲು ಬಯೋ ಇಂಧನ ಬಳಕೆಯತ್ತ ಮೋದಿ ಸರ್ಕಾರ ಆದ್ಯತೆ ಕೊಟ್ಟಿದೆ. ತೈಲದ ಭದ್ರತೆಗಾಗಿ 5 ಮಿಲಿಯನ್ ಮೆಟ್ರಿಕ್ ಟನ್ ಬಯೋ ಇಂಧನ ಉತ್ಪಾದಿಸುವ ಗುರಿಯಿದ್ದು, ಐಓಸಿಎಲ್ ಗೆ ಟೆಂಡರ್ ನೀಡಲಾಗಿದೆ. ದೇಶಾದ್ಯಂತ ಸಿಎನ್ ಜಿ ಮತ್ತು ಸಿಬಿಜಿ (ಬಯೋ ಗ್ಯಾಸ್) ಸ್ಟೇಶನ್ ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲಿಯೂ ಬಯೋ ಫುಯೆಲ್ ಇಂಧನ ಬಳಕೆಗೆ ಆದ್ಯತೆ ನೀಡಬೇಕಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಮಂಗಳೂರಿನ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಲಿಟ್ ಫೆಸ್ಟ್ 7ನೇ ಆವೃತ್ತಿಯ ಸಮ್ಮೇಳನದಲ್ಲಿ ಹರ್ದೀಪ್ ಸಿಂಗ್ ಪುರಿ ಅವರು ‘ಎನರ್ಜಿ ಫಾರ್ ಸರ್ವೈವಲ್ – ಸೆಕ್ಯುರಿಟಿ ಅಂಡ್ ಕ್ಲೈಮೆಟ್ ಡಿಬೇಟ್’ ಕುರಿತ ಗೋಷ್ಟಿಯಲ್ಲಿ ಮಾತನಾಡಿದರು. ಒಟ್ಟು ತೈಲ ಬಳಕೆಯಲ್ಲಿ 20 ಶೇ.ದಷ್ಟು ಜೈವಿಕ ಇಂಧನ ಬಳಸಿಕೊಳ್ಳಬೇಕಿದೆ. 2025ರಲ್ಲಿ ದೇಶಾದ್ಯಂತ 5 ಸಾವಿರ ಸಿಎನ್ ಜಿ ಸ್ಟೇಶನ್ ಸ್ಥಾಪನೆ ಗುರಿಯಿದೆ. ಉತ್ತರ ಪ್ರದೇಶದಲ್ಲಿ ಈ ವರ್ಷ ನೂರು ಸಿಎನ್ ಜಿ- ಸಿಬಿಜಿ ಸ್ಟೇಶನ್ ಸ್ಥಾಪಿಸುತ್ತಿದ್ದು ಕರ್ನಾಟಕದಲ್ಲಿಯೂ ಬಯೋ ಗ್ಯಾಸ್ ಬಳಕೆಗೆ ಉತ್ತೇಜನ ನೀಡಬೇಕಾಗಿದೆ ಎಂದು ಹೇಳಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಉಲ್ಲೇಖಿಸಿ ಈ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ಮಾಡಿದರು. ಇದಲ್ಲದೆ, ಗೋವಾ ರೀತಿಯಲ್ಲಿ ಮಂಗಳೂರಿನಲ್ಲೂ ಬಯೋ ಫುಯೆಲ್ ಉತ್ಪಾದಕರನ್ನು ಒಳಗೊಂಡ ಬಯೋ ಸಮ್ಮಿಟ್ ಮಾಡುವಂತೆ ಸಂಸದ ಚೌಟರಿಗೆ ಸೂಚಿಸಿದರು
.
ಕ್ಲೀನ್ ಕುಕ್ಕಿಂಗ್ ಎನ್ನುವ ಪರಿಕಲ್ಪನೆ ಹಿಂದಿನ ಕಾಲದಲ್ಲಿ ಇರಲಿಲ್ಲ. ಇಸ್ರೇಲ್ ನಂತಹ ಕೆಲವು ದೇಶಗಳಲ್ಲಿ ಮಾತ್ರ ಇತ್ತು. ಈಗಲೂ ಜಗತ್ತಿನಲ್ಲಿ 30 ಶೇಕಡಾ ಜನರು ಕಟ್ಟಿಗೆ, ಕಲ್ಲಿದ್ದಲು ಉರಿಸಿ ಅಡುಗೆ ಮಾಡುತ್ತಾರೆ. ಕಾರ್ಪೊರೇಟ್ ವಲಯದಲ್ಲಿ 90 ಗಂಟೆಗಳ ಕೆಲಸದ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ನಾವು ಯಾವ ರೀತಿಯ ವಾತಾವರಣದಲ್ಲಿ ಬದುಕುತ್ತಿದ್ದೇವೆ ಎನ್ನುವುದು ಮುಖ್ಯ. ಮೋದಿ ಸರಕಾರ ಬರುವ ಮೊದಲು ದೇಶದಲ್ಲಿ 14 ಕೋಟಿ ಎಲ್ ಪಿಜಿ ಗ್ಯಾಸ್ ಸಂಪರ್ಕ ಇತ್ತು. ಈಗ 33.5 ಕೋಟಿ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್ ಆಗಿದೆ. ಒಂದು ಕುಟುಂಬದಲ್ಲಿ 3-4 ಸದಸ್ಯರನ್ನು ಲೆಕ್ಕ ಹಾಕಿದರೆ ಬಹುತೇಕ 90 ಶೇಕಡಾ ಜನರು ಗ್ಯಾಸ್ ಬಳಸುತ್ತಿದ್ದಾರೆ ಎಂದು ಹೇಳಿದರು.
ಭಾರತಕ್ಕೆ ದಿನದಲ್ಲಿ 6-7 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಬೇಕಾಗುತ್ತದೆ. ಸದ್ಯಕ್ಕೆ ಜಗತ್ತಿನಲ್ಲಿ ಕ್ರೂಡ್ ಆಯಿಲ್ ಶಾರ್ಟೇಜ್ ಇಲ್ಲ. ಅಂದಾಜು 100 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ದಿನವೊಂದಕ್ಕೆ ಉತ್ಪಾದನೆಯಾಗುತ್ತದೆ. ಆದರೆ ನಾವು ವಾತಾವರಣ ಶುದ್ಧಿಗಾಗಿ ಪೆಟ್ರೋಲಿಯಂ ಬಳಕೆ ತಗ್ಗಿಸಲೇಬೇಕು. ಜಪಾನ್ ಗ್ಯಾಸ್ ಆಧರಿತ ಇಕಾನಮಿಯಾಗಿ ಬೆಳೆದು ನಿಂತಿದೆ. ಅದು ಸಣ್ಣ ರಾಷ್ಟ್ರವಾಗಿದ್ದರಿಂದ ಸಾಧ್ಯವಾಗಿದೆ. ಈಗ ನಮ್ಮ ಓಎನ್ ಜಿಸಿ ಸೇರಿ ರಿಫೈನರಿಗಳಲ್ಲಿ ಉತ್ಪಾದನೆ ಹೆಚ್ಚಿದ್ದು, 2026-27ರ ನಂತರ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.
ಭಾರತ 4 ಪ್ಲಸ್ ಟ್ರಿಲಿಯನ್ ಡಾಲರ್ ಇಕಾನಮಿಯಾಗುತ್ತಿದೆ. ದೇಶದಲ್ಲಿ 1.4 ಬಿಲಿಯನ್ ಜನರಿದ್ದು ಈ ಪೈಕಿ 67 ಮಿಲಿಯನ್ ಜನರು ಪೆಟ್ರೋಲ್ ಇನ್ನಿತರ ಅಗತ್ಯಕ್ಕೆ ರಿಟೇಲ್ ಅಂಗಡಿಯನ್ನೇ ಅವಲಂಬಿಸಿದ್ದಾರೆ. ಇಷ್ಟೊಂದು ಜನಸಂಖ್ಯೆ ಇರುವ ಬೇರೆ ರಾಷ್ಟ್ರ ಇರಲಿಕ್ಕಿಲ್ಲ. ಅಮೆರಿಕ ಅಭಿವೃದ್ಧಿಯಲ್ಲಿ ಮುಂದಿರುವುದರಿಂದ ದಿನಕ್ಕೆ 13 ಮಿಲಿಯನ್ ಬ್ಯಾರಲ್ ಕಚ್ಚಾ ತೈಲದ ಅಗತ್ಯವಿದೆ. ಆದರೆ ಭಾರತವು 80 ಪರ್ಸೆಂಟ್ ಕ್ರೂಡ್ ಆಯಿಲನ್ನು ವಿದೇಶದಿಂದಲೇ ಆಮದು ಮಾಡುತ್ತಿದ್ದು, ಇದು ನಮ್ಮ ಆರ್ಥಿಕತೆಗೆ ಪೆಟ್ಟು ಕೊಡುತ್ತಿದೆ. ಹಾಗಾಗಿ ಗ್ರೀನ್ ಹೈಡ್ರಜನ್ ಬಳಕೆ ಹೆಚ್ಚಿಸಬೇಕಿದ್ದು, ನಾವೇ ತಯಾರಿಸಿ ನಾವೇ ಬಳಕೆ ಮಾಡಬೇಕಿದೆ ಎಂದು ಹೇಳಿದರು. ಹರ್ದೀಪ್ ಸಿಂಗ್ ಪುರಿ ಅವರು ದೇಶದಲ್ಲಿ 13 ಪ್ರಧಾನಿಗಳ ಅಡಿಯಲ್ಲಿ ಐಎಫ್ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಎಂಟು ವರ್ಷಗಳಿಂದ ಮೋದಿ ಸರಕಾರದಲ್ಲಿ ಸಂಸದರಾಗಿ ನ್ಯಾಚುರಲ್ ಗ್ಯಾಸ್ ಸಚಿವರಾಗಿದ್ದಾರೆ. ಗೋಷ್ಟಿಯಲ್ಲಿ ಸಂಯೋಜಕರಾಗಿ ಡಾ.ನಂದಕಿಶೋರ್ ಕೆ.ಎಸ್ ಭಾಗವಹಿಸಿದರು.
ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಯನ್ನು ಹಿರಿಯ ಸಾಹಿತಿ, 93ರ ಹರೆಯದ ಎಸ್.ಎಲ್ ಭೈರಪ್ಪ ನೆರವೇರಿಸಿದರು. ಮೊದಲ ಆವೃತ್ತಿಯ ಉದ್ಘಾಟನೆಗೆ ಬಂದಿದ್ದೆ. ಈ ಬಾರಿ ಭಾಷಣ ಬೇಡ, ಭಾಷಣ ಮಾಡಿದರೆ ಏನೇನೋ ಆಗುತ್ತದೆ. ಬರೆದುಕೊಂಡು ಬನ್ನಿ ಎಂದು ಹೇಳಿದ್ದರು. ಅದರಂತೆ ಬರೆದು ತಂದಿದ್ದೇನೆ, ಮಂಗಳೂರು ಜನರು ಶಿಸ್ತಿನವರು. ಲಿಟರೇಚರ್ ಫೆಸ್ಟ್ ಇದೇ ರೀತಿ ಶಿಸ್ತಿನಿಂದ ಆಗುತ್ತಲೇ ಇರಲಿ ಎಂದು ಹೇಳಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ.ನಾಗರಾಜ್ ಉಪಸ್ಥಿತರಿದ್ದರು. ಲಿಟ್ ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ. ಲಿಟ್ ಫೆಸ್ಟ್ ನಲ್ಲಿ ಖ್ಯಾತನಾಮರ ಪ್ರಮುಖ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿದ್ದು ಅವನ್ನೂ ಮಾರಾಟಕ್ಕಿಡಲಾಗಿದೆ.
ತುಳು ಲಿಪಿಯಲ್ಲಿ ಹೆಸರು ಬರೆದ ಸಂಸದ
ಇದಲ್ಲದೆ, ಜೈ ತುಳುನಾಡು ಸಂಘಟನೆ ವತಿಯಿಂದ ತುಳು ಲಿಪಿಯಲ್ಲಿ ಬರೆಯುವಂತೆ ಪ್ರೇರೇಪಿಸಲು ಪ್ರತ್ಯೇಕ ಸ್ಟಾಲ್ ಇಡಲಾಗಿದೆ. ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿ ತುಳು ಲಿಪಿಯನ್ನು ತಿಳಿದುಕೊಂಡು ತನ್ನ ಹೆಸರನ್ನು ಬೋರ್ಡಿನಲ್ಲಿ ಬರೆದರು. ಯುವಕರು, ಯುವತಿಯರು ಕೂಡ ತುಳು ಲಿಪಿಯನ್ನು ಉತ್ಸಾಹದಿಂದ ತಿಳಿದು ತಮ್ಮ ಹೆಸರನ್ನು ಬರೆಯಲು ಕಲಿತುಕೊಂಡರು. ಜೈ ತುಳುನಾಡು ಸಂಸ್ಥೆ ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ತುಳು ಲಿಪಿಯನ್ನು ಕಲಿಸುತ್ತಿದ್ದು, ಸ್ಟಾಲ್ ನಲ್ಲಿ ಸಂಘಟನೆಯ ಮನೀಶ್ ಅಂಚನ್, ಚೇತನ್ ಅಂಚನ್, ಕಿರಣ್ ತುಳುವೆ, ಸಾಗರ್ ಉಡುಪಿ, ನಾಗರಾಜ್, ನಿರಂಜನ ಕರ್ಕೇರ, ಶರತ್ ರಾಜ್ ಮತ್ತಿತರರಿದ್ದರು.
Mangalore Lit Fest 2025 inaugurated, Minister Hardeep Singh Puri appreciates efforts of MP Brijesh Chowta. The 7th edition of the Mangaluru Literature Festival was inaugurated with grandeur at the T.M.A. Pai Auditorium on Saturday. The ceremony brought together literary stalwarts and intellectuals, marking the beginning of a two-day celebration of ideas and culture.Renowned author S.L. Bhyrappa and Dr. Ravi, Secretary of the Mythic Society, presided as chief guests. Sunil Kulkarni, Trustee of the Bharat Foundation Trust, opened the event with a warm welcome speech.
11-01-25 09:14 pm
Bangalore Correspondent
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm