ಬ್ರೇಕಿಂಗ್ ನ್ಯೂಸ್
11-01-25 10:34 pm Mangalore Correspondent ಕರಾವಳಿ
ಉಳ್ಳಾಲ, ಜ.11: ಎಲ್ಲಾ ಜಾತಿ, ಧರ್ಮದವರನ್ನ ಒಟ್ಟುಗೂಡಿಸಿ ನಡೆಯುವ ಕರಾವಳಿಯ ಕಂಬಳ ಕ್ರೀಡೆ ಜಾತ್ಯಾತೀತ ಕ್ರೀಡೆಯಾಗಿದೆ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಮಾಡಲು ಸ್ಪೀಕರ್ ಯು.ಟಿ ಖಾದರ್ ಮತ್ತು ಶಾಸಕ ಅಶೋಕ್ ರೈ ಒತ್ತಾಯಿಸಿದ್ದು, ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಿದೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಜನರ ಆಶೀರ್ವಾದ ಇದ್ದರೆ ಮಾತ್ರ ಕುರ್ಚಿಯಲ್ಲಿ ಕೂತ್ಕೋಬಹುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ತೃತೀಯ ವರ್ಷದ ಹೊನಲು ಬೆಳಕಿನ ನರಿಂಗಾನ ಲವ-ಕುಶ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಂಬಳವು ಕರಾವಳಿಯ ಪುರಾತನ ಜನಪ್ರಿಯ ಗ್ರಾಮೀಣ ಕ್ರೀಡೆ. ಕಂಬಳವನ್ನ ಸುಪ್ರೀಮ್ ಕೋರ್ಟ್ ನಿಷೇಧಗೊಳಿಸಿತ್ತು. ನಮ್ಮ ಅಂದಿನ ಕಾಂಗ್ರೆಸ್ ಸರಕಾರವು ಕಂಬಳಕ್ಕೆ ವಿಧಿಸಲಾಗಿದ್ದ ನಿಷೇಧವನ್ನ ತೆರವುಗೊಳಿಸಿತ್ತು. ರೈತರಿಗೆ ಪ್ರಾಣಿಗಳ ಜೊತೆ ಅವಿನಾಭಾವ ಸಂಬಂಧ ಇದೆ. ಅದರ ಭಾಗವಾಗಿ ಈ ಕಂಬಳ ಕ್ರೀಡೆ ನಡೆಯುತ್ತಿದೆ. ರೈತರು ಕಂಬಳದ ಕೋಣಗಳನ್ನ ಬಹಳಷ್ಟು ಮುತುವರ್ಜಿ ವಹಿಸಿ ಸಾಕುತ್ತಾರೆ. ತುಳುವರು ಎಷ್ಟೇ ವಿದ್ಯಾವಂತರಾದರೂ ಕಂಬಳ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಾರೆ.
ಕಂಬಳ ಕ್ರೀಡೆಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳಕ್ಕೆ ಒಂದೂವರೆ ಕೋಟಿ ರೂಪಾಯಿ ಅನುದಾನ, ರಾಜ್ಯದಲ್ಲಿ ನಡೆಯುವ ಇಪ್ಪತ್ತನಾಲ್ಕು ಕಂಬಳ ಉತ್ಸವಗಳಿಗೆ ತಲಾ 5 ಲಕ್ಷ ಅನುದಾನವನ್ನು ರಾಜ್ಯ ಸರಕಾರ ನೀಡಿದೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ಹಿರಿಯರು ಪರಿಚಯಿಸಿದ ಕಂಬಳ ಸಂಸ್ಕೃತಿಯನ್ನ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕಾರ್ಯ ನರಿಂಗಾನ ಕಂಬಳದ ಮುಖೇನ ನಡೆಯುತ್ತಿದೆ. ಆರ್ಥಿಕ ಕಷ್ಟ ಇದ್ದರೂ ಕಂಬಳ ಪ್ರೇಮಿಗಳು ಕಂಬಳವನ್ನ ಕೈಬಿಟ್ಟಿಲ್ಲ. ಕಂಬಳ ಕ್ರೀಡೆಯು ಪ್ರಾಣಿಗಳಿಗೆ ಎಂದಿಗೂ ಹಿಂಸೆ ನೀಡಿಲ್ಲ, ಬದಲಾಗಿ ಪ್ರಾಣಿಗಳನ್ನ ಪ್ರೀತಿಸಲು ಕಲಿಸಿದೆ ಎಂದರು. ಕಂಬಳಕ್ಕೆ ಐದು ಲಕ್ಷ ಅನುದಾನ ಮತ್ತು ತಾನು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಒಂದು ಸಾವಿರ ಕೋಟಿ ಅನುದಾನ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನ ಖಾದರ್ ಅಭಿನಂದಿಸಿದರು.
ಕಂಬಳ ಕ್ಷೇತ್ರದ ಸಾಧಕರಾದ ಗುಣಪಾಲ ಕಡಂಬ, ರಾಜೀವ ಶೆಟ್ಟಿ ಎಡ್ತೂರು, ಅಪ್ಪು ಯಾನೆ ಜಾನ್ ಸಿರಿಲ್ ಡಿ ಸೋಜ, ಚಂದ್ರಹಾಸ್ ಶೆಟ್ಟಿ ಮೋರ್ಲ, ಚಿತ್ರನಟಿ ಸಾನ್ವಿ ಶ್ರೀವಾತ್ಸವ ಅವರನ್ನ ಮುಖ್ಯಮಂತ್ರಿಗಳು ಸನ್ಮಾನಿಸಿದರು. ಸಚಿವರಾದ ದಿನೇಶ್ ಗುಂಡೂರಾವ್, ರಹೀಂ ಖಾನ್, ಕಾಸರಗೋಡು ಸಂಸದ ಉನ್ನಿತ್ತಾನ್, ಶಾಸಕರಾದ ಅಶೋಕ್ ರೈ, ಎಮ್ಮೆಲ್ಸಿಗಳಾದ ಮಂಜುನಾಥ್ ಭಂಡಾರಿ, ನಝೀರ್ ಅಹ್ಮದ್, ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಳ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Chief Minister Siddaramaiah on Saturday, said Kambala has been a secular and traditional sport of coastal Karnataka that unites people. It was his government that eventually lifted the ban on Kambala, he stated.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm