ಬ್ರೇಕಿಂಗ್ ನ್ಯೂಸ್
16-01-25 12:58 pm Mangalore Correspondent ಕರಾವಳಿ
ಉಳ್ಳಾಲ, ಜ.16: ಎಲ್ಲರನ್ನೂ ಒಂದಾಗಿ ಕೊಂಡೋಗುತ್ತಿದ್ದೇನೆಂದು ಹೇಳುತ್ತಿರುವ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರೇ ದನದ ಕೆಚ್ಚಲನ್ನ ಕಡಿದ ಪ್ರಕರಣ ಮತ್ತು ವಿಧಾನಸಭೆಯ ಒಳಗಡೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಬಗೆಗೆ ನಿಮ್ಮ ನಿಲುವೇನು? ಉಳ್ಳಾಲದಲ್ಲಿ ಬಿಜೆಪಿ ಸೋತಿದೆ ಹೌದು, ಆದರೆ ಬಿಜೆಪಿಗರ ಮತಗಳೇನು ಕಡಿಮೆ ಆಗಿಲ್ಲ. ಕತ್ತಲು ಕವಿದಿದೆಯೆಂದು ದೀಪ ಹಚ್ಚೋದನ್ನ ನಿಲ್ಲಿಸಬೇಡಿ. ಮತದಾರರಿಗೋಸ್ಕರವಾದರೂ ಬಣ, ಗುಂಪುಗಾರಿಕೆ ಬಿಟ್ಟು ಒಂದಾಗಿ ಎಂದು ಸಂಸದ ಬ್ರಿಜೇಶ್ ಚೌಟ ಅವರು ಬಣ, ಗುಂಪುಗಾರಿಕೆಯಿಂದ ನಲುಗಿರುವ ಉಳ್ಳಾಲ ಬಿಜೆಪಿ ಪಾಳಯಕ್ಕೆ ಶಕ್ತಿ ಮದ್ದು ನೀಡುವ ಮಾತುಗಳನ್ನಾಡಿದ್ದಾರೆ.
ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರ ವತಿಯಿಂದ ಅಸೈಗೋಳಿಯ ಬಂಟರ ಭವನದಲ್ಲಿ ಬುಧವಾರ ನಡೆದ ಸಂಘಟನಾ ಪರ್ವ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕೇರಳ-ತಲಪಾಡಿ ಗಡಿ ಪ್ರದೇಶವು ಹಿಂದೂ ಸಮಾಜ ವಿರೋಧಿ ಚಟುವಟಿಕೆಯ ಜಿಹಾದಿ ಶಕ್ತಿಗಳ ಕೇಂದ್ರವಾಗುತ್ತಿರುವ ಆತಂಕ ಇದೆ. ಇದಕ್ಕೆ ಕ್ಷೇತ್ರದ ಶಾಸಕರೇ ವಿಶೇಷವಾದ ಪ್ರೋತ್ಸಾಹ ನೀಡುತ್ತಿದ್ದಾರೆ. ಉಳ್ಳಾಲದ ಬಿಜೆಪಿ ಕಾರ್ಯಕರ್ತರು ಈ ಸವಾಲನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದ ರಾಜಧಾನಿಯಲ್ಲೇ ಪೂಜನೀಯ ಗೋಮಾತೆಯ ಕೆಚ್ಚಲನ್ನ ಕಡಿಯುವ ಸ್ಥಿತಿ ಎದುರಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರವು ಇಂತಹ ಜಿಹಾದಿ ಮಾನಸಿಕತೆಯನ್ನೇ ಪೋಷಿಸುತ್ತಿದೆ. ವಿಧಾನ ಸಭೆಯೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ಸಮಜಾಯಿಷಿ ಕೊಡುತ್ತಾರೆ. ದನದ ಕೆಚ್ಚಲನ್ನೇ ಕಡಿದ ವ್ಯಕ್ತಿಗೆ ಗೃಹಸಚಿವರು ಸಮಜಾಯಿಷಿ ಕೊಡುತ್ತಾರೆ. ಎಲ್ಲರನ್ನೂ ಜತೆಯಲ್ಲಿ ಕೊಂಡೋಗುತ್ತೇನೆಂದು ಹೇಳುವ ಸ್ಪೀಕರ್ ಖಾದರ್ ಅವರೇ ಪಾಕಿಸ್ತಾನಕ್ಕೆ ಜೈ, ದನದ ಕೆಚ್ಚಲನ್ನು ಕಡಿದ ಬಗ್ಗೆ ನಿಮ್ಮ ನಿಲುವೇನೆಂದು ಪ್ರಶ್ನಿಸಿದರು.




ಮುಂದಿನ ದಿನಗಳಲ್ಲಿ ಉಳ್ಳಾಲ ಕ್ಷೇತ್ರವನ್ನ ಸವಾಲಾಗಿ ತಗೊಳ್ಳುವ ಅನಿವಾರ್ಯತೆ ಇದೆ. ಆ ದೊಡ್ಡ ಜವಾಬ್ದಾರಿ ಬಿಜೆಪಿ ಕ್ಷೇತ್ರಾಧ್ಯಕ್ಷರಾಗಿ ಮರು ಆಯ್ಕೆಗೊಂಡ ಜಗದೀಶ ಆಳ್ವರ ಮೇಲಿದೆ. ವೈಯಕ್ತಿಕ ದ್ವೇಷಗಳನ್ನ ಬದಿಗಿರಿಸಿ ಹಿಂದುತ್ವ, ರಾಷ್ಟ್ರೀಯವಾದಕ್ಕಾಗಿ ಒಂದಾಗಿ ಒಗ್ಗಟ್ಟಾಗೋಣ. ಉಳ್ಳಾಲ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಈಗಲೂ ಬಿಜೆಪಿ ಮತದಾರರಿದ್ದಾರೆ. ನಾನಂತೂ ಉಳ್ಳಾಲ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತೇನೆಂದು ಬ್ರಿಜೇಶ್ ಚೌಟ ಹೇಳಿದರು.
ಜಿಲ್ಲೆಯ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ಅವರು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಮೂರು ವರುಷಗಳ ಅವಧಿಗೆ ಅಧ್ಯಕ್ಷರಾಗಿ ಜಗದೀಶ್ ಆಳ್ವರವರ ಹೆಸರನ್ನು ಘೋಷಣೆ ಮಾಡಿದರು.
ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮತ್ತು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಆಳ್ವ ಕುವೆತ್ತಬೈಲ್ ಅವರನ್ನು ಅಭಿನಂದಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾರ್ಯಕರ್ತರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
slashing udders of 3 cows, what is UT khader opinions asks MP Brijesh Chowta in Mangalore during the meeting held by BJP at Bantara bavana.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
14-05-26 10:48 pm
HK News Staffer
ರಿಯಲ್ ಎಸ್ಟೇಟ್ ಉದ್ಯಮಿ, ‘ಲ್ಯಾನ್ಸಿ ಕನ್ಸ್ಟ್ರಕ್ಷನ...
14-05-26 05:39 pm
ಮಂಗಳೂರಿನಲ್ಲೂ "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಜಾರಿ...
13-05-26 11:02 pm
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm