Mangalore News, Shaheen death: ಶಟ್ಲ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ಪದವಿ ಓದುತ್ತಿದ್ದ ಯುವಕ ; ಅತ್ತಾವರದಲ್ಲಿ ಘಟನೆ 

16-01-25 03:54 pm       Mangalore Correspondent   ಕರಾವಳಿ

ಗೆಳೆಯರೊಂದಿಗೆ ಶಟ್ಲ್ ಬ್ಯಾಡ್ಮಿಂಟನ್ ಆಟವಾಡುತ್ತಿದ್ದಾಗ ಪದವಿ ಓದುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಬುಧವಾರ ಸಂಜೆ ನಡೆದಿದೆ. 

ಮಂಗಳೂರು, ಜ.16: ಗೆಳೆಯರೊಂದಿಗೆ ಶಟ್ಲ್ ಬ್ಯಾಡ್ಮಿಂಟನ್ ಆಟವಾಡುತ್ತಿದ್ದಾಗ ಪದವಿ ಓದುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟ ಘಟನೆ ಫಳ್ನೀರ್‌ನಲ್ಲಿ ಬುಧವಾರ ಸಂಜೆ ನಡೆದಿದೆ. 

ಅತ್ತಾವರದ ಐವರಿ ಟವರ್ ನಲ್ಲಿ ವಾಸಿಸುತ್ತಿರುವ ಶರೀಫ್ ಅವರ ಪುತ್ರ ಶಹೀಮ್ (20) ಮೃತ ಯುವಕ. ಗೆಳೆಯರೊಂದಿಗೆ ಬುಧವಾರ ಸಂಜೆ ಎಂದಿನಂತೆ ಶಟ್ಲ್ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದಾಗ ದಿಢೀರ್ ಆಗಿ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ. ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದವನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 

ಆದರೆ ಅಷ್ಟರಲ್ಲಿ ಶಹೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಶಹೀಮ್ ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದರು. ಶಟ್ಲ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಯುವಕ ಎಂದಿನಂತೆ ಗೆಳೆಯರೊಂದಿಗೆ ಆಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದು ಸ್ಥಳೀಯರನ್ನು ಆಘಾತಕ್ಕೀಡು ಮಾಡಿದೆ.

20 year old youth dies while playing shuttle Badminton in Mangalore. The deceased has been identified as Shaheem. son of Shareef, a native of Addur and a current resident of Ivory Tower, Attavar.