ಬ್ರೇಕಿಂಗ್ ನ್ಯೂಸ್
16-01-25 10:12 pm Mangalore Correspondent ಕರಾವಳಿ
ಮಂಗಳೂರು, ಜ.16: ನನ್ನ ಹೆಂಡ್ತಿಗೆ ತುಳು ಸಿನಿಮಾ ಮಾಡಬೇಕಿತ್ತು. ತನ್ನ ಮಾತೃಭಾಷೆಯಲ್ಲಿ ಸಿನಿಮಾ ಮಾಡಬೇಕು ಅಂತ ಹೇಳುತ್ತಿದ್ದಳು. ಈಗ ಒಳ್ಳೆ ಕತೆ ಸಿಕ್ಕಿದ್ದು ಸಿನಿಮಾ ಮಾಡಲು ಹೊರಟಿದ್ದಾಳೆ. ಆಕೆಯೇ ಪ್ರೊಡ್ಯೂಸರ್. ನಾನಲ್ಲ... ಇದು ಸ್ಯಾಂಡಲ್ವುಡ್ ಗೋಲ್ಡನ್ ಸ್ಟಾರ್ ಹೀರೋ ಗಣೇಶ್ ಅವರ ಮಾತು.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ ‘’ಪ್ರೊಡಕ್ಷನ್ ನಂಬರ್ 1’’ ಹೆಸರಿನ ಹೊಸ ತುಳು ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು. ಚಿತ್ರಕ್ಕೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರ ಪುತ್ರ ನಿತ್ಯಪ್ರಕಾಶ್ ನಾಯಕ ನಟನಾಗಿ ಆಯ್ಕೆಯಾಗಿದ್ದು, ಮುಹೂರ್ತ ಸಮಾರಂಭದಲ್ಲಿ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾಕ್ಕೆ ಹೊಸತಾಗಿ ನಟ ಆಗಬೇಕೆಂದು ಆಕೆಯ ಮನಸ್ಸಿನಲ್ಲಿ ಇತ್ತು. ಸೀರಿಯಲ್, ಸಿನಿಮಾದಲ್ಲಿ ನಟಿಸಿರುವವರನ್ನು ನಾಯಕನಾಗಿ ಆಯ್ಕೆ ಮಾಡಿದ್ದೇವೆ. ತುಳು ಸಿನಿಮಾವನ್ನು ಜನರು ನೋಡಿ ಆಶೀರ್ವದಿಸಬೇಕು ಎಂದು ಹೇಳಿದರು. ನೀವು ಮೊದಲ ಬಾರಿಗೆ ತುಳು ಸಿನಿಮಾ ಮಾಡಲು ಹೊರಟಿದ್ದೀರಾ, ನೀವು ನಟಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಈ ಬಗ್ಗೆ ಪ್ರೊಡ್ಯೂಸರ್ ಏನೂ ಹೇಳಿಲ್ಲ. ನಮ್ಮನ್ನು ಇಷ್ಟಪಡೋರು ಹೆಚ್ಚು ಜನ ತುಳುನಾಡಿನಲ್ಲಿ ಇದ್ದಾರೆ. ನನಗೆ ಆಸೆ ಇದೆ, ಅವರಿಗೋಸ್ಕರ ಆದ್ರೂ ನಟಿಸಬೇಕು ಅಂತ. ಖಂಡಿತವಾಗಿಯೂ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದರು.
ಸಿನಿಮಾದಲ್ಲಿ ಕತೆ ಏನಿರತ್ತೆ ಎಂದು ಕೇಳಿದ್ದಕ್ಕೆ, ಅದನ್ನು ಜನರು ಥಿಯೇಟರಲ್ಲಿ ನೋಡಬೇಕು. ತುಳುನಾಡಿನಲ್ಲಿ ನಡೆಯೋ ಫ್ಯಾಮಿಲಿ ಡ್ರಾಮಾವನ್ನು ತೋರಿಸುತ್ತಿದ್ದೇವೆ. ಎಲ್ಲರೂ ಕುಳಿತು ನೋಡುವಂತಹ ಸಿನಿಮಾ ಮಾಡುತ್ತೇವೆ ಎಂದರು. ನನಗೂ ಮಂಗಳೂರಿಗೂ ಅವಿನಾಭಾವ ಸಂಬಂಧ. ನನ್ನ ಮೊದಲ ಚಿತ್ರದ ನಿರ್ಮಾಪಕರು ಜಗದೀಶ್ ಕೋಟ್ಯಾನ್, ಡೈರೆಕ್ಟರ್, ಕ್ಯಾಮರಾಮನ್ ಎಲ್ಲರೂ ಮಂಗಳೂರಿನವರು. ನನಗೆ ಮದುವೆಯಾಗಿದ್ದೂ ಮಂಗಳೂರಿನವರನ್ನೇ. ಅವರೇ ಈಗ ಡೈರೆಕ್ಟ್ ಮಾಡುತ್ತಿದ್ದಾರೆ. ಅರ್ಜುನ್ ನನಗೆ ಮುಗುಳ್ನಗೆ ಶೂಟಿಂಗಲ್ಲಿ ಪರಿಚಯ. ಅರ್ಜುನ್ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ, ಬೇರೆ ಬೇರೆ ಪ್ಲಾನಿಂಗ್ ಇದೆ ಎಂದು ಹೇಳಿದರು.
ತುಳು ಸಿನಿಮಾದಲ್ಲಿ ಕಾಮಿಡಿ ಹೆಚ್ಚಿರತ್ತೆ, ನಿಮ್ದೂ ಹಾಗೇ ಇದೆಯಾ ಎಂದು ಕೇಳಿದ ಪ್ರಶ್ನೆಗೆ, ತುಳು ಸಿನಿಮಾ ಒಂದಷ್ಟು ನೋಡಿದ್ದೇನೆ. ನಮ್ಮ ಮನೇಲಿ ಓಡ್ತಾನೇ ಇರತ್ತೆ. ಕಾಪಿಕಾಡ್, ಬೋಳಾರ್ ಅವರ ಕಾಮಿಡಿ ನೋಡಿದ್ದೇನೆ. ಸೀರಿಯಸ್ ಪಿಕ್ಚರ್ ಮಾಡಬೇಡಿ, ಇಲ್ಲಿನ ಜನ ನೋಡಲ್ಲ ಅಂತ ಡೈರೆಕ್ಟರ್ ಹೇಳ್ತಾನೇ ಇದ್ದಾರೆ. ಫ್ಯಾಮಿಲಿ ಎಲ್ಲ ಸೇರಿ ನೋಡುವ ಸಿನಿಮಾ ಮಾಡುತ್ತಿದ್ದೇವೆ. ತುಳು ಸಿನಿಮಾ ರಂಗ ಒಳ್ಳೆದಾಗಿ ಬೆಳೀತಿದೆ. ಈ ಸಿನಿಮಾ ತುಳುವಿನಲ್ಲಿ ಈಗ ಮಾರ್ಕೆಟ್ ಹೇಗಿದೆಯೋ, ಅದಕ್ಕಿಂತ ಒಂದು ಸ್ಟೆಪ್ ಎತ್ತರಕ್ಕೆ ಹೋಗುವ ನಿರೀಕ್ಷೆಯಿದೆ ಎಂದು ಹೇಳಿದರು.
ನಿಮ್ಮ ಮುಂದಿನ ಚಿತ್ರ ಯಾವುದಿರತ್ತೆ ಎಂದು ಕೇಳಿದ್ದಕ್ಕೆ, ಸದ್ಯ ರಾಮ, ಪಿನಾಕ ಅಂತ ಚಿತ್ರದ ಶೂಟಿಂಗ್ ಆಗ್ತಾ ಇದೆ ಎಂದರು. ಕೊನೆಯದಾಗಿ ಏನು ಹೇಳಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಸಿನಿಮಾ ಬರತ್ತೆ, ಹೋಗತ್ತೆ. ನಮಗೆ ಮಾನವ ಸಂಬಂಧ ಮುಖ್ಯ. ಚಿತ್ರದ ಮುಹೂರ್ತಕ್ಕೆ ಹಲವಾರು ಮಿತ್ರರು, ಹಿರಿಯರು ಬಂದಿದ್ದಾರೆ. ಅವರೆಲ್ಲ ವಿಶಸ್ ಕೊಟ್ಟಿದ್ದಾರೆ, ಅದಕ್ಕಾಗಿ ಎಲ್ಲರಿಗೂ ಅಭಿನಂದನೆ ಹೇಳುತ್ತೇನೆ ಎಂದರು.
Actor Golden Star Ganesh in Mangalore, very first Tulu movie to be produced under golden movie banner. The grand muhurath ceremony for the movie was held at the revered Kudroli Gokarnatheshwara Temple in Mangaluru.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 06:36 pm
Mangalore Correspondent
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm