ಬ್ರೇಕಿಂಗ್ ನ್ಯೂಸ್
15-12-20 05:59 pm Mangalore Correspondent ಕರಾವಳಿ
ಮಂಗಳೂರು, ಡಿ.15: ರಸ್ತೆ ಬದಿ ಎಲ್ಲೆಂದರಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್ ವಾಹನದಲ್ಲಿ ಬರುವ ಪೊಲೀಸರು ಹೊತ್ತೊಯ್ಯುತ್ತಾರೆ. ಆದರೆ, ಹೀಗೆ ಟೋಯಿಂಗ್ ಮಾಡುವ ವಾಹನವೇ ಆರ್ ಟಿಓ ನಿಯಮಗಳನ್ನು ಉಲ್ಲಂಘಿಸಿದ್ದರೆ ಯಾರು ಅದಕ್ಕೆ ದಂಡ ಹಾಕಬೇಕು. ಮಂಗಳೂರಿನಲ್ಲಿ ಅಂಥದ್ದೇ ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರ ಆಕ್ರೋಶ ಪೊಲೀಸರ ಟೋಯಿಂಗ್ ವಾಹನದ ವಿರುದ್ಧವೇ ತಿರುಗಿದೆ.
ಹತ್ತಾರು ವಾಹನಗಳನ್ನು ಏಕಕಾಲದಲ್ಲಿ ಹೊತ್ತೊಯ್ಯುವ ಟೋಯಿಂಗ್ ವಾಹನವೊಂದು ವಿಮೆ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸದೆ ನಿಯಮಗಳನ್ನು ಉಲ್ಲಂಘಿಸಿ ಒಂದು ವರ್ಷದಿಂದ ಕಾರ್ಯಾಚರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ರಸ್ತೆ ಬದಿ ಪಾರ್ಕಿಂಗ್ ನಿಯಮ ಉಲ್ಲಂಘಿಸಿ ನಿಲ್ಲಿಸುವ ದ್ವಿಚಕ್ರ ವಾಹನಗಳನ್ನು ಟೋಯಿಂಗ್ ವಾಹನಗಳಿಂದ ಕಷ್ಟಕ್ಕೆ ಒಳಗಾಗದವರೇ ಇಲ್ಲ ಎನ್ನಬಹುದು. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಟೋಯಿಂಗ್ ಕಾರಣದಿಂದಾಗಿ ಸ್ವಲ್ಪ ಹೊತ್ತಲ್ಲಿ ಮಾಯ ಆಗಿಬಿಡುತ್ತದೆ.

ಟೋಯಿಂಗ್ ವಾಹನದಿಂದ ಕಿರಿಕಿರಿ ಅನುಭವಿಸಿದ ದ್ವಿಚಕ್ರ ವಾಹನ ಸವಾರರೊಬ್ಬರು, ಇದೀಗ ಟೋಯಿಂಗ್ ವಾಹನದ ಜಾತಕ ಹೇಗಿದೆ ಎಂದು ಆರ್ ಟಿಓದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ವಾಹನದ ಇನ್ಶೂರನ್ಸ್ 2019ರ ಮೇ ತಿಂಗಳಲ್ಲಿ ಲ್ಯಾಪ್ಸ್ ಆಗಿರುವುದು ಗಮನಕ್ಕೆ ಬಂದಿದೆ. ಫಿಟ್ನೆಸ್ ಚೆಕ್ ಮಾಡಿದಾಗ, ಅದೂ ನವೀಕರಣ ಆಗಿರಲಿಲ್ಲ. ಹೀಗಾಗಿ ಈ ವಿಚಾರವನ್ನು ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದು, ಪೊಲೀಸರ ಸೂಚನೆ ಮೇರೆಗೆ ಸದ್ರಿ ವಾಹನವನ್ನು ಕೆಲವು ದಿನಗಳಿಂದ ಟೋಯಿಂಗ್ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.
ಟೋಯಿಂಗ್ ಕರ್ತವ್ಯಕ್ಕೆ ಮಂಗಳೂರಿನಲ್ಲಿ ನಾಲ್ಕು ವಾಹನಗಳಿದ್ದು ಬೆಂಗಳೂರಿನ ವ್ಯಕ್ತಿ ಕಂಟ್ರಾಕ್ಟ್ ಪಡೆದಿದ್ದಾರೆ. ಅದರಲ್ಲಿ ಒಂದನ್ನು ಲಾಕ್ಡೌನ್ ಸಂದರ್ಭದಲ್ಲಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಕಳಿಸಿದ್ದು, ಅದಿನ್ನೂ ಮರಳಿ ಬಂದಿಲ್ಲ. ಮತ್ತೊಂದು ವಾಹನದಲ್ಲಿ ಕಳೆದ ಒಂದು ವರ್ಷದಿಂದ ವಿಮೆ ಮತ್ತು ಫಿಟ್ನೆಸ್ ಇಲ್ಲದೆ, ಆರ್ ಟಿಓ ನಿಯಮ ಉಲ್ಲಂಘಿಸಿ, ಪೊಲೀಸರೇ ಕರ್ತವ್ಯ ನಿಭಾಯಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಆಗಿರುವುದರಿಂದ ನಿಯಮ ಉಲ್ಲಂಘಿಸಿದ ಟೋಯಿಂಗ್ ವಾಹನಕ್ಕೂ ದಂಡ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
It is gathered that the towing vehicle which carried the vehicles in Mangalore found violating traffic rules or parked in ‘No Parking’ zones away, itself did not have insurance and fitness certificates.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
ಒಂದು ವರ್ಷದಲ್ಲಿ 400 ಡ್ರಗ್ ಪೆಡ್ಲರ್ಗಳ ಬಂಧನ ; 2,...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm