ಬ್ರೇಕಿಂಗ್ ನ್ಯೂಸ್
18-01-25 09:27 pm Mangalore Correspondent ಕರಾವಳಿ
ಮಂಗಳೂರು, ಜ.18: ನಗರದ ತಣ್ಣೀರುಬಾವಿ ಬೀಚ್ ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದ್ದು ಕುದುರೆ, ಹುಲಿಗಳು, ಯಕ್ಷಗಾನ, ಕಥಕ್ಕಳಿ ಸೇರಿದಂತೆ ನೂರಾರು ಬಗೆಬಗೆಯ ಗಾಳಿಪಟಗಳು ಗಮನ ಸೆಳೆದವು. ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು 'ಕರಾವಳಿ ಉತ್ಸವ'ದ ಅಂಗವಾಗಿ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಈ ಸಲ ಎಂಟನೇ ಬಾರಿಗೆ ಅಂತಾರಾಷ್ಟ್ರೀಯ ಕೈಟ್ ಫೆಸ್ಟ್ ಆಯೋಜಿಸಿದೆ.
ಜನವರಿ 18 ಮತ್ತು 19 ರಂದು ಅಂತಾರಾಷ್ಟ್ರೀಯ ಗಾಳಿಪಟ ನಡೆಯುತ್ತಿದ್ದು ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟೆಲಿ, ಸ್ವೀಡನ್, ಇಂಡೋನೇಶಿಯಾ, ಪೊರ್ಚುಗಲ್ ದೇಶಗಳಿಂದ ಗಾಳಿಪಟ ತಂಡಗಳು ಆಗಮಿಸಿವೆ. ಒಡಿಶಾ, ರಾಜಸ್ತಾನ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದಲೂ ಗಾಳಿಪಟ ತಂಡಗಳು ಉತ್ಸವದಲ್ಲಿ ಪಾಲ್ಗೊಂಡಿವೆ.
ಟೀಮ್ ಮಂಗಳೂರು ತಂಡವು ಕರಾವಳಿಯ ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ರಚಿಸಿದ್ದು ಬಾನೆತ್ತರದಲ್ಲಿ ಕಮಾನು ಸೃಷ್ಟಿಸಿದೆ. ಈ ಬಾರಿ 'ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ' ಎಂಬ ಧ್ಯೇಯ ವಾಕ್ಯ ಮುಂದಿಟ್ಟು ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋ ಫಾಯ್ಸ್ ಗಾಳಿಪಟಗಳು ಜನರ ಗಮನಸೆಳೆದಿದೆ. ಮಧ್ಯಾಹ್ನ ಹೊತ್ತಿಗೆ ಶುರುವಾದರೆ ರಾತ್ರಿ 9ರ ವರೆಗೂ ಬಾನಂಗಳದಲ್ಲಿ ಗಾಳಿಪಟಗಳು ಚಿತ್ತಾರ ಮೂಡಿಸಿ ಹಾರಾಡುತ್ತಿದ್ದು ಜನರನ್ನು ಆಕರ್ಷಿಸಿದೆ.
ಕುದುರೆ, ಐಸ್ ಕ್ರೀಂ, ಮೀನು, ಅಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್ ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್ ರೂಪದ ಗಾಳಿಪಟಗಳು ಗಮನ ಸೆಳೆಯುತ್ತಿದೆ. ಇದರಲ್ಲಿ ಪಿನಾಕಿಯೋ ಕಾರ್ಟೂನ್ ಅತೀ ದೊಡ್ಡದಾಗಿದ್ದು, ಆಕರ್ಷಕವಾಗಿದೆ.
ಗಾಳಿಪಟ ಉತ್ಸವದಲ್ಲಿ ಹಲವಾರು ವಿದೇಶಿಗರು ಸಂತಸದಿಂದ ಭಾಗಿಯಾಗಿದ್ದಾರೆ. ಹಲವರು ಪ್ರತಿ ವರ್ಷವೂ ಭಾರತಕ್ಕೆ ಬಂದು ತಮ್ಮ ಕೈಚಳಕ ತೋರುತ್ತಾರೆ. ನಾವೇ ಗಾಳಿಪಟ ತಯಾರಿಸಿ, ನಾವೇ ಹಾರಿಸುತ್ತೇವೆ. ಇಲ್ಲಿ ಸನ್ ಫ್ಲವರ್, ಕ್ರಿಕೆಟ್, ಪಿನಾಕಿಯೊ, ಬೌಲ್ ಹಾರಿಸಿದ್ದೇವೆ. ಮಂಗಳೂರಿನಲ್ಲಿ ಗಾಳಿಪಟ ಹಾರಾಟಕ್ಕೆ ಉತ್ತಮ ವಾತಾವರಣ ಇದೆ ಎಂದು ರಷ್ಯಾ ಮೂಲದ ದಂಪತಿ ಸಂತಸ ವ್ಯಕ್ತಪಡಿಸಿದರು. ಈ ಬಾರಿ 11 ದೇಶಗಳಿಂದ 22 ವಿದೇಶಿಯರು ಬಂದಿದ್ದಾರೆ. ನಮ್ಮ ದೇಶದ ವಿವಿಧ ಭಾಗದಿಂದ 30 ಮಂದಿ ಬಂದಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
Massive crowds throngs to see the stunning displays at International Kite Festival 2025 at Thannirbhavi Beach in Mangalore. The 8th ONGC-MRPL International Kite Festival, held on January 18 and 19 at Thannirbhavi Beach, Mangaluru, was inaugurated by district in-charge minister Dinesh Gundurao.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm