ಬ್ರೇಕಿಂಗ್ ನ್ಯೂಸ್
20-01-25 11:05 pm Mangalore Correspondent ಕರಾವಳಿ
ಉಳ್ಳಾಲ, ಜ.20: ಕೋಟೆಕಾರು ಸಹಕಾರ ಬ್ಯಾಂಕಿನ ದರೋಡೆ ಹಿನ್ನೆಲೆಯಲ್ಲಿ ಅಡವಿಟ್ಟ ಚಿನ್ನಾಭರಣದ ಮಾಲೀಕರು ಹಾಗೂ ಎಸ್‌ಡಿಪಿಐ ಮುಖಂಡರು ಕೆಸಿ ರೋಡ್ ಶಾಖೆಯ ಕಚೇರಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷರು ಮತ್ತು ನಿರ್ದೇಶಕರ ಜೊತೆ ಚರ್ಚೆ ನಡೆಸಿದರು. ಅಡವಿಟ್ಟ ಚಿನ್ನಾಭರಣವನ್ನು ಮರಳಿಸಬೇಕು ಎಂದು ಗ್ರಾಹಕರು ಒತ್ತಾಯ ಮಾಡಿದ್ದಾರೆ.
ಇದಕ್ಕೆ ಅಧ್ಯಕ್ಷ ಕೃಷ್ಣ ಶೆಟ್ಟಿ ಸಮಯ ಕೇಳಿದ್ದಕ್ಕೆ ಎಸ್‌ಡಿಪಿಐ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಹಕರಿಗೆ ಕಾಯಲು ಸಮಯವಿಲ್ಲ, ತಕ್ಷಣಕ್ಕೆ ಆಡಳಿತ ಮಂಡಳಿ ಸಭೆ ಕರೆದು ಗ್ರಾಹಕರು ಅಡವಿಟ್ಟ ಚಿನ್ನಾಭರಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಅಡವಿಟ್ಟ ಚಿನ್ನದ ಮೌಲ್ಯಕ್ಕೆ ತಕ್ಕಂತೆ ಈಗಿನ ಮೌಲ್ಯವನ್ನು ಅಥವಾ ಚಿನ್ನ ನೀಡುವುದಾಗಿ ಅಧ್ಯಕ್ಷರು ಹೇಳಿದರೂ ಚಿನ್ನದ ಜೊತೆಯಲ್ಲಿ ತೇಮಾನು, ವೇಸ್ಟೇಜ್, ಜಿಎಸ್‌ಟಿ ಎಲ್ಲವನ್ನು ಭರಿಸಬೇಕೆಂದು ಹೇಳಿದರು.
ಅಂದಾಜು 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ಅಡವಿಟ್ಟ ಬ್ಯಾಂಕ್ ಕಚೇರಿಯಲ್ಲಿ ಕನಿಷ್ಠ ಒಬ್ಬ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದು ಬ್ಯಾಂಕ್ ಸುರಕ್ಷತೆ ಬಗ್ಗೆ ಸಂಶಯ ಹುಟ್ಟಿಸಿದೆ ಎಂದು ಎಸ್‌ಡಿಪಿಐ ನಾಯಕ ಇದಾಯತ್ ಮಾರಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಗ್ರಾಹಕರ ಚಿನ್ನಾಭರಣದ ಮೌಲ್ಯಕ್ಕೆ ಸಮನಾಗಿ ಚಿನ್ನ ಅಥವಾ ಮೌಲ್ಯವನ್ನು ನೀಡಲಿದ್ದೇವೆ. ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ಕೆಲವು ದಿನದ ಮಟ್ಟಿಗೆ ಗ್ರಾಹಕರು ಸಹಕರಿಸಬೇಕು. ಕೂಡಲೇ ಆಡಳಿತ ಮಂಡಳಿ ಸಭೆ ಕರೆಯಲಿದ್ದೇವೆ ಎಂದು ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ತಿಳಿಸಿದರು.
ಎಲ್ಲ ಠಾಣೆ ವ್ಯಾಪ್ತಿಯಲ್ಲಿ ಸುರಕ್ಷತೆ ಬಗ್ಗೆ ಸಭೆ
ಕೋಟೆಕಾರು ಬ್ಯಾಂಕಿನ ದರೋಡೆ ಹಿನ್ನಲೆಯಲ್ಲಿ ಸೋಮವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಡಿಸಿಪಿ ರವಿಶಂಕರ್ ನೇತೃತ್ವದಲ್ಲಿ ಠಾಣೆ ವ್ಯಾಪ್ತಿಯ ಎಲ್ಲ ಬ್ಯಾಂಕ್, ಸೊಸೈಟಿ, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಲಾಗಿದೆ. ಉಳ್ಳಾಲ, ಕಂಕನಾಡಿ ಸೇರಿದಂತೆ ಬಹುತೇಕ ಠಾಣೆ ವ್ಯಾಪ್ತಿಗಳ ಬ್ಯಾಂಕ್ ಗಳು, ಕೋ-ಆಪರೇಟಿವ್ ಸೊಸೈಟಿಗಳು, ಸಹಕಾರಿ ಸಂಘಗಳು ಹಾಗೂ ಜ್ಯುವೆಲ್ಲರಿ ಮಾಲಕರು/ವ್ಯವಸ್ಥಾಪಕರನ್ನು ಕರೆಸಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಸೊತ್ತುಗಳ ರಕ್ಷಣೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಗಳನ್ನ ಅಧಿಕಾರಿಗಳು ನೀಡಿದ್ದಾರೆ.
Mangalore Kotekar bank robbery, meeting held between customers sdpi and police in regards to gold deposited
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm