ಬ್ರೇಕಿಂಗ್ ನ್ಯೂಸ್
21-01-25 09:43 pm Mangalore Correspondent ಕರಾವಳಿ
ಮಂಗಳೂರು, ಜ.21: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಪ್ರಮುಖ ಆರೋಪಿ ಮುಸ್ತಫಾ ಪೈಚಾರ್ ಗೆ ಅಡಗಿಕೊಳ್ಳಲು ಸಹಾಯ ಮಾಡಿದ್ದ ಮತ್ತೊಬ್ಬ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.
ಅತೀಕ್ ಅಹ್ಮದ್ ಬಂಧಿತ ವ್ಯಕ್ತಿಯಾಗಿದ್ದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 21ನೇ ಆರೋಪಿಯಾಗಿದ್ದಾನೆ. ಮುಸ್ತಫಾ ಪೈಚಾರ್ ಪ್ರಕರಣದ ಸೂತ್ರಧಾರನಾಗಿದ್ದು ಆತನಿಗೆ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಅತೀಕ್ ಅಹ್ಮದ್ ಸಹಾಯ ಮಾಡಿದ್ದ. ಚೆನ್ನೈ ಮತ್ತಿತರ ಕಡೆ ಅಡಗಿ ಕುಳಿತುಕೊಳ್ಳಲು ಆಶ್ರಯ ಮಾಡಿ ಕೊಟ್ಟಿದ್ದ. ಎರಡು ವರ್ಷದ ಬಳಿಕ 2024ರ ಮೇ ತಿಂಗಳಲ್ಲಿ ಮುಸ್ತಫಾ ಎನ್ಐಎ ಬಲೆಗೆ ಬಿದ್ದಿದ್ದ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯನ್ನು ಎನ್ಐಎ 2022ರ ಆಗಸ್ಟ್ ತಿಂಗಳಲ್ಲಿ ಕೈಗೆತ್ತಿಕೊಂಡಿತ್ತು. ಹಿಂದು ಸಂಘಟನೆ ಮತ್ತು ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿ ಕೊಲ್ಲುವುದಕ್ಕಾಗಿ ಪಿಎಫ್ಐ ಸಶಸ್ತ್ರ ಸರ್ವಿಸ್ ಟೀಮ್ ರೆಡಿ ಮಾಡಿತ್ತು. ದೇಶಾದ್ಯಂತ ದೇಶದ್ರೋಹಿ ಚಟುವಟಿಕೆ ನಡೆಸಲು ಸದ್ದಿಲ್ಲದೆ ಕೆಲಸ ಮಾಡುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್ಐ ಸರ್ವಿಸ್ ಟೀಮ್ ನಲ್ಲಿ ಮುಸ್ತಫಾ ಮುಖ್ಯಸ್ಥನಾಗಿದ್ದ.
ಎನ್ಐಎ ಅಧಿಕಾರಿಗಳು ಪ್ರಕರಣದಲ್ಲಿ ತನಿಖೆ ಮುಂದುವರಿಸಿದ್ದು ಇನ್ನೂ ಆರು ಮಂದಿಯ ಪತ್ತೆಗಾಗಿ ಬಲೆ ಬೀಸಿದೆ. ಆರು ಮಂದಿಯ ಪತ್ತೆಗೆ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಿಸಿದೆ.
The National Investigation Agency (NIA) on Tuesday announced the arrest of a key accused who allegedly sheltered the chief conspirator in the Praveen Nettaru murder case. Ateeq Ahmed is the 21st accused to be arrested in the case relating to the brutal killing of Nettaruin Bellare village of Dakshina Kannada District, Karnataka, by members of the banned Popular Front of India (PFI) in July 2022, the agency said.
18-02-25 10:25 pm
Bangalore Correspondent
Mysuru Suicide, online Gambling, Betting: ಐಪಿ...
18-02-25 02:59 pm
Mandya crime, Boy Shoot brothers: ಕಳ್ಳ ಪೊಲೀಸ್...
17-02-25 01:38 pm
Amazon Web Services, Bangalore, Adarsh Builde...
17-02-25 10:43 am
ಸಂಘ ಪರಿವಾರದವರು ಬುರ್ಖಾ ಹಾಕಿಕೊಂಡು ಗಲಾಟೆ ಮಾಡೋಕೆ...
16-02-25 06:44 pm
18-02-25 10:49 pm
HK News Desk
Hindu idols Bishop House, Pala diocese, Kera...
18-02-25 10:45 pm
DK Shivakumar, Kasaragod, congress: ಕೇರಳದ ಕಾಂ...
17-02-25 10:42 pm
New Rules 2025; FASTag ಹೊಸ ನಿಯಮ ಜಾರಿ ; ಬ್ಯಾ...
17-02-25 08:23 pm
Delhi Railway station stampede, 18 Dead: ದೆಹಲ...
16-02-25 01:04 pm
18-02-25 12:36 pm
Mangalore Correspondent
Dinesh Gundurao, Munner katipalla, Sand Mafia...
17-02-25 10:56 pm
Sterlite Power, Protest, 400kv Power, Mangalo...
17-02-25 09:20 pm
Mangalore, Dinesh Gundurao, Mines Krishnaveni...
17-02-25 09:14 pm
Mangalore, KDP Meeting, Dinesh Gundurao, MLA...
17-02-25 01:41 pm
18-02-25 07:19 pm
Mangalore Correspondent
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm
Mysuru family suicide, Crime: ಮೈಸೂರು ; ಅಪಾರ್ಟ...
17-02-25 12:49 pm
Shivamogga crime, Kidnap, Blackmail: ಹೋಟೆಲ್ ಗ...
17-02-25 12:05 pm