Saloon Attack, 14 Arrested, Mangalore Crime: ಮಸಾಜ್ ಪಾರ್ಲರ್ ಮೇಲೆ ದಾಳಿಗೈದು ಗೂಂಡಾಗಿರಿ ; ಪೊಲೀಸರ ಮಿಂಚಿನ ಕಾರ್ಯಾಚರಣೆ, 14 ರಾಮಸೇನೆ ಕಾರ್ಯಕರ್ತರ ಬಂಧನ

23-01-25 08:25 pm       Mangalore Correspondent   ಕರಾವಳಿ

ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ರಾಮ ಸೇನಾ ಸಂಘಟನೆಯ 14 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಮಂಗಳೂರು, ಜ.23: ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆಂದು ಆರೋಪಿಸಿ ಪೊಲೀಸರು ರಾಮ ಸೇನಾ ಸಂಘಟನೆಯ 14 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ನಗರದ ಬಿಜೈ ಕೆಎಸ್ಸಾರ್ಟಿಸಿ ಬಳಿಯ ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮ ಸೇನೆಯ ಕಾರ್ಯಕರ್ತರು ಗುರುವಾರ ಮಧ್ಯಾಹ್ನ ದಾಳಿ ನಡೆಸಿದ್ದು, ಹುಡುಗಿಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಅಲ್ಲದೆ, ಅಲ್ಲಿದ್ದ ಪೀಠೋಪಕರಣಗಳನ್ನು ಪುಡಿ ಮಾಡಿದ್ದರು. ಘಟನೆಯ ವಿಡಿಯೋವನ್ನು ಸ್ಥಳೀಯ ವಾಹಿನಿಯ ಕ್ಯಾಮರಾಮನ್ ಒಬ್ಬರಲ್ಲಿ ಮಾಡಿಸಿದ್ದರು.

ಆನಂತರ, ವಿಡಿಯೋ ಸಹಿತ ಸುದ್ದಿ ಇತರೇ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಮಸಾಜ್ ಪಾರ್ಲರ್ ಮಾಲೀಕ ಸುಧೀರ್ ಶೆಟ್ಟಿ ಬರ್ಕೆ ಠಾಣೆಗೆ ದೂರು ನೀಡಿದ್ದು, ಬಿಎನ್ ಎಸ್ ಸೆಕ್ಷನ್ ಪ್ರಕಾರ 329(2), 324(5), 74, 351(3), 115 (2), 109, 352, 190 ಅಡಿ ಕೇಸು ದಾಖಲಾಗಿದೆ. ಇದರಂತೆ, ಪೊಲೀಸರು ರಾಮ ಸೇನೆಯ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಕುಡುಪು ಬಳಿಯ ಮನೆಯಿಂದಲೇ ಎಳೆದೊಯ್ದು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಕಾರ್ಯಕರ್ತರಾದ ಹರ್ಷರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇತ್, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್, ಪ್ರದೀಪ್ ಪೂಜಾರಿ ಅವರನ್ನು ಬಂಧಿಸಿದ್ದಾರೆ.

14 ram sena activist arrested in saloon attack case at bejai in Mangalore. The arrested are identified as Harshraj, Mohan Das, Purandara, Ravish, Ankit, Kali Muttu, Abhilash, Deepak, Vignesh, Sharan Raj, Pradeep Poojari, and ram sena leader Prasad Attavar