ಬ್ರೇಕಿಂಗ್ ನ್ಯೂಸ್
23-01-25 10:35 pm Mangalore Correspondent ಕರಾವಳಿ
ಉಳ್ಳಾಲ, ಜ.23: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ತಮಿಳುನಾಡಲ್ಲಿ ಬಂಧಿತರಾಗಿದ್ದ ಮುರುಗಂಡಿ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ಪೊಲೀಸರು ಗುರುವಾರ ಬೆಳಗ್ಗೆ ಮಂಗಳೂರಿಗೆ ಕರೆತಂದಿದ್ದಾರೆ. ಇಬ್ಬರನ್ನೂ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಬಳಿಕ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ದರೋಡೆ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಉಳ್ಳಾಲ ಪೊಲೀಸರು ಆರೋಪಿಗಳನ್ನ ಫೆ.3ರ ವರೆಗೆ ಹನ್ನೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮುರುಗಂಡಿ ದೇವರ್ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಕಾಲಕ್ಕಾಡ್ ನಿವಾಸಿಯಾಗಿದ್ದು, ಜೋಶುವಾ ಅದೇ ಜಿಲ್ಲೆಯ ಕಲ್ಲಿಡೈಕುರುಚ್ಚಿ ನಿವಾಸಿ. ಸ್ಥಳೀಯ ಪೊಲೀಸರ ನೆರವು ಪಡೆದು ಮಂಗಳೂರು ಪೊಲೀಸರು ಇಬ್ಬರನ್ನ ಬಂಧಿಸಿ, ಅಲ್ಲಿನ ಅಂಬಾಸಮುದ್ರಂ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು.
ಇದಕ್ಕೂ ಮೊದಲೇ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿ ಕಣ್ಣನ್ ಮಣಿ ಮುಂಬೈನಲ್ಲಿ ಸೆರೆಸಿಕ್ಕಿದ್ದು, ಆತನನ್ನು ಉಳ್ಳಾಲದ ಅಲಂಕಾರ ಗುಡ್ಡೆ ಎಂಬಲ್ಲಿಗೆ ಸ್ಥಳ ಮಹಜರಿಗೆ ಕೊಂಡೊಯ್ದ ವೇಳೆ ಎಸ್ಕೇಪ್ ಆಗಲು ಯತ್ನಿಸಿದ್ದು, ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.
ಮುಂದುವರಿದ ಆರೋಪಿಗಳ ಶೋಧ ಕಾರ್ಯ
ತಮಿಳುನಾಡು, ಮುಂಬೈಯಲ್ಲೇ ಬೀಡು ಬಿಟ್ಟಿರುವ ಪೊಲೀಸರ ವಿಶೇಷ ತಂಡಗಳು ದರೋಡೆ ಪ್ರಕರಣದ ಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ದರೋಡೆಯಲ್ಲಿ ಆರು ಜನ ನೇರ ಪಾಲ್ಗೊಂಡಿದ್ದರೂ ಒಟ್ಟು ಒಂಭತ್ತು ಜನ ಆರೋಪಿಗಳಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ಮತ್ತೋರ್ವ ಶಂಕಿತ ಆರೋಪಿಯನ್ನ ವಶಕ್ಕೆ ತೆಗೆದಿರುವ ಬಗ್ಗೆಯೂ ಮಾಹಿತಿಯಿದ್ದು ಆತ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆಯೇ ಎಂದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ದರೋಡೆಗೆ ಸ್ಕೆಚ್ ಹಾಕಿದ ಸ್ಥಳೀಯನಾರು..?
ಹೊರ ರಾಜ್ಯದ ಎಷ್ಟೇ ವೃತ್ತಿಪರ ನುರಿತ ದರೋಡೆಕೋರರು ಕೂಡ ಕರ್ನಾಟಕದ ಉಳ್ಳಾಲದ ಮೂಲೆಯ ಗ್ರಾಮೀಣ ಪ್ರದೇಶದ ಬ್ಯಾಂಕನ್ನ ಶೋಧಿಸಿ ಪ್ಲಾನ್ ಪ್ರಕಾರ ದರೋಡೆ ಮಾಡುವುದು ಸುಲಭ ಸಾಧ್ಯವಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಪ್ರಕರಣದಲ್ಲಿ ಸ್ಥಳೀಯರ ಪಾತ್ರ ಇರುವುದರ ಬಗ್ಗೆ ಮಂಗಳೂರು ನಗರ ಆಯುಕ್ತರು ಕೂಡ ಹೇಳಿದ್ದರು. ಆದರೆ ದರೋಡೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಥಳೀಯ ವ್ಯಕ್ತಿ ತನ್ನ ಪ್ರಭಾವ ಬಳಸಿ ಒಟ್ಟು ಪ್ರಕರಣದ ನೈಜತೆಯನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದ್ದಾನೆಯೇ ಎಂಬ ದಟ್ಟ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
Kotekar bank robbery case, accused arrested at Tirunelveli brought to Mangalore, police custody till Feb 3rd. Both Murgan Devar and Rajendran were arrested in Tirunelveli, produced before the court and then through via transit visa were brought to Mangalore.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm