ಬ್ರೇಕಿಂಗ್ ನ್ಯೂಸ್
30-01-25 08:22 pm Mangalore Correspondent ಕರಾವಳಿ
ಮಂಗಳೂರು, ಜ.30: ನಗರದ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಗಗನ್ ಆರ್. ಶೇಖರ್ ಈ ಬಾರಿ ರಾಜಧಾನಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದ ಫ್ಲಾಗ್ ಸ್ವೀಕರಿಸಿ ಗೌರವ ಪಡೆದಿದ್ದಾರೆ.
ಪಾಂಡೇಶ್ವರ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶೇಖರ್ ಅವರ ಪುತ್ರನಾಗಿರುವ ಗಗನ್, ಎನ್ ಸಿಸಿ ಆರ್ಮಿ ವಿಂಗ್ ನಲ್ಲಿ ಕೇಡೆಟ್ ಆಗಿದ್ದು, 18 ಕೆಎಆರ್ ಮಂಗಳೂರು ಬೆಟಾಲಿಯನ್ ನೇತೃತ್ವ ವಹಿಸಿದ್ದರು. ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದ ಗಗನ್, ಆನಂತರ ಪಿಯುಸಿ ಮತ್ತು ಪದವಿಯನ್ನು ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಮಾಡುತ್ತಿದ್ದಾರೆ.
ಗಗನ್ ಜೊತೆಗೆ ಅಲೋಶಿಯಸ್ ಕಾಲೇಜಿನ ಇತರ ಆರು ಮಂದಿ ವಿದ್ಯಾರ್ಥಿಗಳೂ ಗಣರಾಜ್ಯೋತ್ಸವ ಪರೇಡ್ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದಾರೆ. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಸ್ಟೀವ್ ರಿಚರ್ಡ್ ಸುಮಿತ್ ಡಿಸೋಜ (ಏರ್ ವಿಂಗ್), ಪ್ರಥಮ ಬಿಎಸ್ಸಿಯ ಶಿವಕಿರಣ್, ತೃತೀಯ ಬಿಎಸ್ಸಿಯ ಅಮೃತ ಕುಮಾರಿ, ದ್ವಿತೀಯ ಬಿಎಸ್ಸಿಯ ತರುಣ್ ತಮ್ಮಯ್ಯ, ತೃತೀಯ ಬಿಕಾಂ ವಿದ್ಯಾರ್ಥಿ ನಥಾನ್ ಶಾನ್ ರೆಬೆಲ್ಲೋ ಕೂಡ ಕರ್ನಾಟಕ- ಗೋವಾ ಬೆಟಾಲಿಯನ್ನಿಂದ ದೆಹಲಿ ರಿಪಬ್ಲಿಕ್ ಪರೇಡಿಗೆ ಆಯ್ಕೆಗೊಂಡಿದ್ದರು.
ಈ ಬಾರಿ ರಿಪಬ್ಲಿಕ್ ಡೇ ಅಂಗವಾಗಿ ‘ಅವರ್ ಯುವ ಶಕ್ತಿ ರಿಯಲೈಸ್ ವಿಕಸಿತ್ ಭಾರತ್’ ಎನ್ನುವ ಥೀಮ್ ಹೆಸರಲ್ಲಿ ದೆಹಲಿ ಕ್ಯಾಂಪ್ ನಲ್ಲಿ ಎನ್ ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಫೆ.6ರಂದು ಮಂಗಳೂರಿಗೆ ಬರಲಿದ್ದಾರೆ.
Mangalore police Head constable son Ncc Cadet Gagan served as flag bearer honoured by PM Modi. The NCC cadets of St Aloysius (Deemed to be University), Mangaluru, have excelled in the Prime Minister rally during the Republic Day Parade 2025 held in Delhi.
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm