ಬ್ರೇಕಿಂಗ್ ನ್ಯೂಸ್
01-02-25 07:47 pm Mangalore Correspondent ಕರಾವಳಿ
ಮಂಗಳೂರು, ಫೆ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ದೆಹಲಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಪ್ರತಿದಿನ ಸಂಚರಿಸಲಿದೆ. ಫೆ.1ರಿಂದಲೇ ಈ ವಿಮಾನ ಯಾನ ಆರಂಭಗೊಂಡಿದ್ದು, ಬೆಳಗ್ಗೆ 6.40ಕ್ಕೆ ಮಂಗಳೂರಿನಿಂದ ಹೊರಟು 9.35ಕ್ಕೆ ದೆಹಲಿಗೆ ತಲುಪಿದೆ. ಆಮೂಲಕ ಕರಾವಳಿಯಿಂದ ರಾಜಧಾನಿ ದೆಹಲಿಯನ್ನು ಏರ್ ಇಂಡಿಯಾ ಇನ್ನಷ್ಟು ಹತ್ತಿರವಾಗಿಸಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 1552 ಹೆಸರಿನ ವಿಮಾನವು ಮಂಗಳೂರಿನಿಂದ 167 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಲುಪಿದೆ. ಇದೇ ವೇಳೆಗೆ ಪ್ರತಿಯಾಗಿ ದೆಹಲಿಯಿಂದಲೂ ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ಮಂಗಳೂರಿಗೆ ವಿಮಾನ ಆಗಮಿಸಿದೆ. ದೆಹಲಿಯಿಂದ ಹೊರಟ ವಿಮಾನವನ್ನು ಕ್ಯಾಪ್ಟನ್ ವಿನೀತ್ ಕುಮಾರ್ ಮತ್ತು ಸಿಬಂದಿ ಮುನ್ನಡೆಸಿದ್ದಾರೆ. ದೆಹಲಿಯಿಂದ ಬಂದ ವಿಮಾನದಲ್ಲಿ 144 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನಿಂದ ಹೊರಟ ವಿಮಾನಕ್ಕೆ ಏರೋ ಡ್ರೋಮ್ ರೆಸ್ಕ್ಯು ತಂಡದಿಂದ ನೀರು ಹಾಯಿಸುವ ಮೂಲಕ ಶುಭ ಹಾರೈಕೆ ನೀಡಲಾಯಿತು. ಕಳೆದ ಜನವರಿ 4ರಿಂದ ಪ್ರತಿ ಶನಿವಾರ ಮಂಗಳೂರಿನಿಂದ ಪುಣೆಗೆ ಹೊಸ ವಿಮಾನ ಸಂಚಾರ ಆರಂಭಿಸಿತ್ತು. ಇದರ ಬೆನ್ನಲ್ಲೇ ರಾಜಧಾನಿ ದೆಹಲಿಗೂ ಪ್ರತಿ ದಿನದ ವಿಮಾನ ಸಂಚಾರ ಆರಂಭಿಸಿದೆ. ನೇರ ವಿಮಾನ ಸಂಚಾರದಿಂದ ಮಂಗಳೂರಿನಿಂದ ಬಿಸಿನೆಸ್ ಇನ್ನಿತರ ಉದ್ದೇಶಕ್ಕೆ ದೆಹಲಿಗೆ ಹೋಗುವವರಿಗೆ ಸುಗಮವಾಗಲಿದೆ. ಈಗಾಗಲೇ ಇಂಡಿಗೋ ಸಂಸ್ಥೆಯಿಂದ ದಿನವೂ ಸಂಜೆ ದೆಹಲಿಗೆ ವಿಮಾನ ಸಂಚಾರ ಇದೆ. ಇದರೊಂದಿಗೆ ಬೆಳಗ್ಗೆ, ಸಂಜೆ ಡೈಲಿ ವಿಮಾನ ಸಂಚಾರ ಮಾಡಿದಂತಾಗಿದೆ.
Air India Express commenced a direct flight service between Mangalore and Delhi. The initiative offers a direct daily morning service between the two cities.
18-09-25 05:34 pm
Bangalore Correspondent
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
18-09-25 06:11 pm
Mangalore Correspondent
ಪೊಲೀಸರಿಂದ ಅಧಿಕಾರ ದುರುಪಯೋಗ, ದಬ್ಬಾಳಿಕೆ ; ಬೆನ್ನು...
18-09-25 04:31 pm
Mangalore, Traffic Police: ನಂಗೆ ಕೈಮಾಡಲು ನಿಂಗೇ...
18-09-25 02:42 pm
ಜಾತಿ ಗಣತಿ ಮೊದಲೇ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಗೊಂ...
18-09-25 02:19 pm
Dharmasthala: ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನ...
17-09-25 11:05 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm